ದೊಡ್ಮನೆ ದೊಡ್ಡ ಸೊಸೆ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಸ್ಟೋರಿ

 | 
ಪಗದ೮
ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಗೀತಾ ಶಿವರಾಜ್ ಕುಮಾರ್ ಬಂಗರಪ್ಪ ಅವರ ಖಾಸಾ ಪುತ್ರಿ ಹೌದು ಶಿವರಾಜ್​ ಕುಮಾರ್  ಹಾಗೂ ಗೀತಾ ಶಿವರಾಜ್ ಕುಮಾರ್ ಅವರದ್ದು ಚಿತ್ರರಂಗದ ಕ್ಯೂಟೆಸ್ಟ್ ಜೋಡಿಗಳಲ್ಲೊಂದು. ಪರಸ್ಪರರ ಮೇಲೆ ಅವಲಂಬಿತರಾಗಿ, ಪರಸ್ಪರರನ್ನು ಪ್ರೋತ್ಸಾಹಿಸಿಕೊಂಡು, ಬೆಂಬಲಿಸಿಕೊಂಡು ಬಹುವರ್ಷಗಳಿಂದಲೂ ದಾಂಪತ್ಯ ಸಾಗಿಸಿಕೊಂಡು ಬರುತ್ತಿದ್ದಾರೆ. 
ಆದರೆ ಶಿವರಾಜ್ ಕುಮಾರ್ ಅವರು ಗೀತಾ ಅವರನ್ನು ವಿವಾಹವಾಗುವುದು ಡಾ ರಾಜ್​ಕುಮಾರ್  ಅವರಿಗೆ ಇಷ್ಟವಿರಲಿಲ್ಲವಂತೆ, ಆದರೆ ಆ ನಂತರ ಅವರು ಮನಸು ಬದಲಿಸಿದರಂತೆ. ಏಕೆ ಇಷ್ಟವಿರಲಿಲ್ಲ, ಬಳಿಕ ಮನಸ್ಸು ಬದಲಿಸಿದ್ದು ಏಕೆ? ದೊಡ್ಮನೆಯ ಆಪ್ತ ಬಂಧು, ಪಾರ್ವತಮ್ಮ ರಾಜ್​ಕುಮಾರ್ ಅವರ ಸಹೋದರ, ನಿರ್ಮಾಪಕ ಚಿನ್ನೇಗೌಡರು ಈ ಬಗ್ಗೆ ಮಾತನಾಡಿದ್ದಾರೆ.
ಗೀತಮ್ಮ ನನಗೆ ಬಹಳ ಆತ್ಮೀಯರು, ಗೀತಾ ಅವರನ್ನು ಶಿವರಾಜ್ ಕುಮಾರ್ ಅವರಿಗೆ ತಂದುಕೋಬೇಕು ಎಂದು ಮೊದಲು ಸಲಹೆ ಕೊಟ್ಟಿದ್ದು ನಾನೇ, ಆದರೆ ಡಾ ರಾಜ್​ಕುಮಾರ್ ಅವರು ಚಿನ್ನಪ್ಪ ಯಾಕಪ್ಪ ನಮಗೆ ರಾಜಕೀಯದವರ ಸಹವಾಸ, ಬೇಡ ಎಂದು ಬಿಟ್ಟರು. ಆದರೆ ನನಗೆ ಆಸೆಯಿತ್ತು. ನಾನು ಮತ್ತು ಪಾರ್ವತಮ್ಮ ಕಲಾವಿದರ ಸಂಘ ಕಟ್ಟಲು ಬಂಗಾರಪ್ಪನವರ ಮನೆಗೆ ಹೋಗಿ ಸಹಾಯ ಪಡೆದಿದ್ದೆವು. 
ಆಗ ಅಕ್ಕನ ಬಳಿಯೂ ಪೀಠಿಕೆ ಹಾಕಿ, ಬಂಗಾರಪ್ಪನವರ ಮಡದಿ ಶಾಕುಂತಲಮ್ಮ ಅವರು ಸಾಧ್ವಿ ಅವರ ಕೈಯಲ್ಲಿ ಬೆಳೆದ ಮಗಳು ಗೀತಾ ಅವರನ್ನು ಸೊಸೆ ಮಾಡಿಕೊಳ್ಳೋಣ ಎಂದೆ ಸರಿ ಎಂದಿದ್ದರು. ಆದರೆ ಆಗಲೂ ಭಾವ ಒಪ್ಪಿರಲಿಲ್ಲ” ಎಂದು ಚಿನ್ನೇಗೌಡರು ಹಳೆಯ ಸಂಗತಿ ಮೆಲುಕು ಹಾಕಿದರು.
ಅದಾದ ಬಳಿಕ, ಯಾವುದೋ ಕಾರ್ಯಕ್ರಮದ ನಿಮಿತ್ತ, ಬಂಗಾರಪ್ಪನವರು ರಾಜ್​ಕುಮಾರ್ ಅವರನ್ನು ಮನೆಗೆ ಆಹ್ವಾನಿಸಿದರು. ನಾವು ಆ ವೇಳೆಗಾಗಲೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೆವು. 
ನಾನು, ಭಾವ, ಅಕ್ಕ, ವರದ ಮಾಮ ಎಲ್ಲರೂ ಊಟಕ್ಕೆ ಹೋದೆವು. ಅಲ್ಲಿ ಶಾಕುಂತಲಮ್ಮನವರನ್ನು ಕಂಡು ಭಾವನವರು ಬಹಳ ಪ್ರಭಾವಿತರಾದರು. ಅವರ ಗುಣ, ಮಾತು ಕೇಳಿ ಭಾವನವರಿಗೆ ಬಹಳ ಮೆಚ್ಚುಗೆಯಾಯ್ತು, ರಾಜಕಾರಣಿಗಳ ಮಡದಿಯೇನಾ ಇವರು ಎನಿಸಿತ್ತು, ಒಂದು ರೀತಿ ಸೋದರತೆ ಭಾವ ಭಾವನವರಿಗೆ ನಿರ್ಮಾಣ ವಾಗಿತ್ತು. ಅಲ್ಲಿಯೇ ರಾಜ್​ಕುಮಾರ್ ಅವರು ಮೊದಲಿಗೆ ಗೀತಾ ಅವರನ್ನು ಕಂಡಿದ್ದು ಎಂದಿದ್ದಾರೆ ಚಿನ್ನೇಗೌಡರು. ಇನ್ನು ಶಿವರಾಜ್ ಕುಮಾರ್ ಅವರಿಗೆ ಅರೋಗ್ಯ ಕೈಕೊಟ್ಟಾಗ ತಿರುಪತಿಗೆ ಹೋಗಿ ಗಂಡನ ಹೆಸರಲ್ಲಿ ಇವರು ಮುಡಿ ಕೊಟ್ಟಿದ್ದಾರೆ. ಇವರಿಬ್ಬರದ್ದು ಅನುರೂಪದ ದಾಂಪತ್ಯ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.