ಅಯೋಧ್ಯೆ ರಾಮ ಮಂದಿರದ ಬಗ್ಗೆ ನಿಮಗೆಷ್ಟು ಗೊತ್ತು, ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಮಾಹಿತಿ

 | 
ರಕ

ಅಯೋಧ್ಯೆ ರಾಮ ಮಂದಿರ ಬಗ್ಗೆ ಕೋಟ್ಯಾಂತರ ಹಿಂದೂಗಳು ಬಹುವರ್ಷಗಳಿಂದ ಕಾಣುತ್ತಿರುವ ಕನಸು ನನಸಾಗುವ ಸಮಯ ಬಂದಿದೆ. ಜನವರಿಯಲ್ಲಿ ಶ್ರೀರಾಮ ಮಂದಿರದಲ್ಲಿ ಮರ್ಯಾದ ಪುರುಷೋತ್ತಮನನ್ನು ಕಣ್ತುಂಬಿಕೊಳ್ಳಬಹುದು. ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ.

 ಕಳೆದ ವರ್ಷ ವಿಜಯ ದಶಮಿ ಆಚರಣೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಮುಂದಿನ ವರ್ಷ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ವಿಜಯ ದಶಮಿ ಆಚರಿಸಲಿದ್ದೇವೆ ಎಂದು ಹೇಳಿದ್ದರು  ಅಲ್ಲಿಂದ ಶ್ರೀರಾಮ ಮಂದಿರದ  ಕುರಿತು ಚರ್ಚೆ ನಡೆಯುತ್ತಿದೆ, ಶ್ರೀರಾಮ ಭಕ್ತರು ಆದಷ್ಟು ಬೇಗ ಆ ಮಂದಿರದಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳುವ ಭಾಗ್ಯ ದೊರೆಯುವಂತಾಗಲಿ ಎಂದು ಆಸೆ ಪಡುತ್ತಿದ್ದಾರೆ. ಅದು ಸಕಾರ ಗೊಳ್ಳುವ ಸಮಯ ಈಗ ಬಂದಿದೆ.

ಇನ್ನು ಮೊಘಲ್ ಚಕ್ರವರ್ತಿ 1528 ಮತ್ತು 1529 ರ ನಡುವೆ ಬಾಬರಿ ಮಸೀದಿ ನಿರ್ಮಾಣ ಮಾಡಿದನು. ಆದರೆ ಹಿಂದೂಗಳು ಅದು ಶ್ರೀರಾಮನ ಜನ್ಮಸ್ಥಳವಾಗಿದ್ದು ಅದು ಹಿಂದೂಗಳಿಗೆ ಬೇಕೆಂದು ಸುದೀರ್ಘ ಕಾನೂನು ಹೋರಾಟ ಮಾಡಿದ ಬಳಿಕ 2019 ನವೆಂಬರ್ 9ಕ್ಕೆ ಸುಪ್ರೀಂಕೋರ್ಟ್ ವಿವಾದಿತ ಸ್ಥಳ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಆಗಸ್ಟ್ 5, 2020ರಲ್ಲಿ ಶಂಕುಸ್ಥಾಪನೆ ಮಾಡಿ ದೇವಾಲಯ ನಿರ್ಮಾಣ ಕಾರ್ಯ ಶುರು ಮಾಡಲಾಯ್ತು.

ಅರಣ್ಯದಿಂದ ಸುತ್ತುವರಿದುಕೊಂಡಿದ್ದ ಅಯೋಧ್ಯೆಯನ್ನು ಗಮನಿಸಿದ ವಿಕ್ರಮಾದಿತ್ಯನು, ಶೋಧನೆಯ ಬಳಿಕ ಅದು ರಾಮ ಜನ್ಮಭೂಮಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಋಷಿಮುನಿಗಳಿಂದ ಸ್ಥಳದ ಮಹಿಮೆಯನ್ನು ತಿಳಿದು ಭವ್ಯವಾದ ಮಂದಿರ ಮತ್ತು ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಿದನು. 

ಅದರ ನಂತರ ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಮ ಮಂದಿರ ಸುಭಿಕ್ಷೆಯಲ್ಲಿತ್ತು. ಅಲ್ಲಿಂದ ಹಲವರ ಕಾಳಜಿಯಲ್ಲಿದ್ದ ರಾಮ ಮಂದಿರವು 14ನೇ ಶತಮಾನದಲ್ಲಿ ಅಪಾಯಕ್ಕೆ ಒಳಗಾಯಿತು.ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಕನಸಾಯಿತು. ತಲೆಮಾರುಗಳು ಉರುಳಿದರೂ ರಾಮ ಮಂದಿರದ ಕನಸು, ನಿರ್ಧಾರ ಬದಲಾಗಿರಲಿಲ್ಲ. ಅನೇಕ ಸಂಘರ್ಷ, ಸವಾಲು ಬಳಿಕ ಕೊನೆಗೂ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆಯ ಪುಣ್ಯ ಸಮಯ ಬಂದೇ ಬಿಟ್ಟಿದೆ. ಆದರ್ಶ ಪುರುಷನ ಅಯೋಧ್ಯೆಯ ಭವ್ಯ ಮಂದಿರ ಈಗ ಭಕ್ತರ ದರ್ಶನಕ್ಕೆ ಸನ್ನದ್ಧಗೊಂಡಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.