ನಮ್ಮ ಸರ್ಕಾರ ದಿನನಿತ್ಯ ಎಷ್ಟು ಹಣ ತಯಾರಿಸುತ್ತಿದೆ ಗೊ ತ್ತಾ, ನೋಟುಗಳನ್ನು ಯಾವುದರಿಂದ ಮಾ.ಡಲಾಗುತ್ತದೆ

 | 
ಸ್

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತದೆ. ಎನ್ನುವ ಮಾತಿದೆ. ಭಿಕ್ಷೆ ಬೇಡೋ ನಿಂದ ಹಿಡಿದು ಬಿಲಿಯನ್ ವರೆಗೂ ಎಲ್ಲರೂ ಹಣವನ್ನು ಹೇಗೆ ಸಂಪಾದನೆ ಮಾಡಬೇಕು. ಅಂತ ಆಲೋಚನೆ ಮಾಡುತ್ತಿರುತ್ತಾರೆ. ಈ ಸೊಸೈಟಿಯಲ್ಲಿ ಹಣ ಇಲ್ಲ ಅಂದ್ರೆ ಬದುಕೋದುಕ್ಕಾಗಲ್ಲ. ಲಕ್ಜುರಿ ಲೈಫ್ ಮಾತ್ರ ಅಲ್ಲ ಹೊಟ್ಟೆ ತುಂಬಾ ಮೂರು ಹೊತ್ತು ತಿನ್ನಬೇಕು. ಅಂದ್ರು ಸ್ವಚ್ಛವಾದ ಗಾಳಿಯನ್ನು ಸೇವನೆ ಮಾಡಬೇಕು ಅಂದ್ರು ದುಡ್ಡಿನ ಅವಶ್ಯಕತೆ ಇದೆ. 

ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಮನುಷ್ಯ ಬದುಕಿರಬೇಕು ಅಂದ್ರೆ ದುಡ್ಡು ಬೇಕೇ ಬೇಕು ಅನ್ನೋ ಪರಿಸ್ಥಿತಿ. ಹಾಗಾದರೆ ದುಡ್ಡು ಹೇಗೆ ತಯಾರಾಯಿತು ಗೊತ್ತಾ? ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಕಾಗದದ ನೋಟನ್ನ 18 ಶತಮಾನದಲ್ಲಿ ಪರಿಚಯಿಸಲಾಯಿತು. ದ ಬ್ಯಾಂಕ್ ಆಫ್ ಹಿಂದೂಸ್ತಾನ್ ಮತ್ತು ಜನರಲ್ ಬ್ಯಾಂಕ್ ಆಫ್ ಬೆಂಗಾಲ್ ಈ  ಎರಡು ಬ್ಯಾಂಕ್ಗಳು ಮೊಟ್ಟ ಮೊದಲ ಬಾರಿಗೆ ಕಾಗದದ ನೋಟುಗಳನ್ನು ಭಾರತಕ್ಕೆ ಪರಿಚಯಿಸಿ ಅರ್ಥವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ್ದವು. 

ಇನ್ನು ಭಾರತದಲ್ಲಿ ಬಳಸುವ ಹಣವನ್ನು ಮೊಟ್ಟ ಮೊದಲ ಬಾರಿಗೆ ರೂಪಾಯಿ ಎಂದು ಕರೆಯಲಾಯಿತು. ಈಗಲು ಕೂಡ ಭಾರತದಲ್ಲಿ ಕರೆನ್ಸಿ ಅನ್ನು ನೋಟು ಮತ್ತು ನಾಣ್ಯಗಳಲ್ಲಿ ಬಳಸಲಾಗುತ್ತದೆ. ಈಗ ನಾವು ಒಂದು, ಎರಡು, ಐದು, ಹತ್ತು, ಐವತ್ತು ರುಪಾಯಿ ನಾಣ್ಯಗಳನ್ನು ಬಳಸಿದರೆ. ಎರಡು ಸಾವಿರ, ಐದುನೂರು, ಎರಡು ನೂರು, ನೂರು, ಐವತ್ತು, ಇಪ್ಪತ್ತು, ಹತ್ತು ರೂಪಾಯಿಯ ನೋಟುಗಳನ್ನು ಚಲಾವಣೆ ಮಾಡುತ್ತೇವೆ. 

ಮೊದಲೆಲ್ಲಾ ಭಾರತದಲ್ಲಿ ಚಲಾವಣೆ ಆಗುತ್ತಿದ್ದ ನೋಟುಗಳು ಬ್ರಿಟನ್ ಅಲ್ಲಿ ತಯಾರಾಗುತ್ತಿದ್ದವು. ನಂತರ 1926 ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದ ನಾಸಿಕ್ ಅಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಲಾಯಿತು. ಕಾಲಕ್ರಮೇಣ ನೋಟುಗಳಿಗೆ ಬೇಡಿಕೆ ಹೆಚ್ಚಿದ್ದ ಕಾರಣದಿಂದ ಸ್ವಾತಂತ್ರದ ನಂತರ ಭಾರತದ ಎರಡನೇ ನೋಟು ಪ್ರಿಂಟಿಂಗ್ ಪ್ರೆಸ್ ಅನ್ನು 1975 ರಲ್ಲಿ ಈಗಿನ ಮಧ್ಯಪ್ರದೇಶದ ದೇವಾಸ್ ಎಂಬಲ್ಲಿ ಪ್ರಾರಂಭಿಸಲಾಯಿತು. 

ನಂತರದಲ್ಲಿ ಮೂರನೆಯ ನೋಟು ಮುದ್ರಣವನ್ನು ಮೈಸೂರಿನಲ್ಲಿ ಪ್ರಾರಂಭ ಮಾಡಲಾಗುತ್ತಿದೆ. ಇನ್ನು ನಾವಿಂದು ಬಳಸಲಾಗುತ್ತಿರುವ ನಾಣ್ಯಗಳು ಭಾರತ ಸರಕಾರದ ಟಂಕ ಶಾಲೆಯಲ್ಲಿ ತಯಾರಾಗುತ್ತದೆ ಈ ಟಂಕ ಶಾಲೆಗಳು ಮುಂಬೈ, ಹೈದ್ರಾಬಾದ್, ಕಲ್ಕತ್ತಾ, ಹಾಗೂ ನೊಯಿಡಾ ಅಲ್ಲಿದೆ. ಮೈಸೂರಿನಲ್ಲಿ 2ಸಾವಿರ ರೂಪಾಯಿ ಮೌಲ್ಯದ ನೋಟುಗಳು ತಯಾರಾದರೆ ದೆವಾಸ್ ಅಲ್ಲಿ ಪ್ರತಿವರ್ಷ ಹತ್ತು ರೂಪಾಯಿಯ, ಐವತ್ತು ರೂಪಾಯಿ ಹಾಗೂ ಐದುನೂರು ರೂಪಾಯಿ ಮೌಲ್ಯದ 265 ಕೋಟಿ ನೋಟುಗಳು ತಯಾರಾಗುತ್ತದೆ. ಹೌದು ಇದು  ಪ್ರತಿನಿತ್ಯ ನಾವು ನೀವೆಲ್ಲ ಬಳಸುವ ನೋಟುಗಳ ಅಸಲಿ ಕಹಾನಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.