ಇನ್ನೂ ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿರುವ ರಚಿತಾ ರಾಮ್ ಅವರ ವಯಸ್ಸು ಎಷ್ಟು ಗೊ ತ್ತಾ

 | 
J

ಕನ್ನಡದ ಅನೇಕ ನಟಿಯರು ತಮ್ಮ ವೃತ್ತಿಬದುಕಿನ ಕಡೆಗೆ ಹೆಚ್ಚು ಒಲವು ತೋರುವ ಕಾರಣದಿಂದ ಮದುವೆ ಬಗ್ಗೆ ಅಷ್ಟೊಂದು ಚಿಂತೆ ಮಾಡೋದಿಲ್ಲ. ಒಂದು ವೇಳೆ ಫ್ಯಾನ್ಸ್ ಈ ಬಗ್ಗೆ ಮಾತನಾಡಿದ್ರೆ ಅದಕ್ಕೆ ನಗುವಿನಲ್ಲೇ ಉತ್ತರ ನೀಡಿ ಕೆಲ ನಟಿಯರು ಸುಮ್ಮನಾಗುತ್ತಾರೆ. ಅಷ್ಟಕ್ಕೂ  ಮದುವೆಯೆಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ.

ಹೆಣ್ಣಾಗಲಿ ಗಂಡಾಗಲಿ ಯಾವ ಸಮಯಕ್ಕೆ ಮದುವೆಯಾಗಬೇಕು ಎಂಬುದನ್ನು ಸ್ವತಃ ತಾವೇ ನಿರ್ಧರಿಸಬೇಕೇ ಹೊರತು ಬೇರೆಯವರಲ್ಲ. ಇದು ವಾಸ್ತವವಾಗಿದ್ದರೂ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಮದುವೆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ನಾವಿಂದು ಈ ವರದಿಯಲ್ಲಿ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ವಯಸ್ಸಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಇನ್ನು ಸ್ಯಾಂಡಲ್ವುಡ್ ಲೋಕದ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲು ಮಿಂಚಿದ್ದು ಕಿರುತೆರೆಯಲ್ಲಿ. ಅಲ್ಲಿಂದ ಶುರುವಾದ ಜರ್ನಿ ಇದೀಗ ಕನ್ನಡದ ಬಹುಬೇಡಿಕೆಯ ನಟಿ ಎಂದೆನಿಸಿಕೊಳ್ಳುವವರೆಗೆ ತಲುಪಿದೆ. ಸದ್ಯ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿರುವ ಗುಳಿಕೆನ್ನೆ ಚೆಲುವೆಗೆ ಈಗ 31 ವರ್ಷ ವಯಸ್ಸಾಗಿದೆ.

ಆದರೆ ಇದೀಗ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ 40 ದಾಟಿದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ನಟಿ ರಚಿತಾ ರಾಮ್‌ ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್‌ನಲ್ಲಿ ಬಣ್ಣ ಹಚ್ಚುತ್ತಿದ್ದು, ಇದರಲ್ಲಿ ವಿಜಯ್‌ 50ರ  ವಯಸ್ಸಿನ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ, ನಟಿ ರಚಿತಾ ರಾಮ್‌ 40 ವಯಸ್ಸು ದಾಟಿದ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.