ರಾಕೇಶ್ ಮಾಡಿದ ಸಣ್ಣ ತಪ್ಪಿಗೆ ಹೃ#ದಯಾಘಾತವಾಯಿತು ಎಂದ ಡಾಕ್ಟರ್
May 13, 2025, 14:37 IST
|

ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ಹಾಗೂ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದಾರೆ. ಇದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಉಡುಪಿ ಮೂಲದವರಾಗಿದ್ದ ಇವರು ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ಇವರ ನಿಧನಕ್ಕೆ ಕನ್ನಡದ ನಟ ನಟಿಯರು ಕೂಡ ಕಂಬನಿ ಮಿಡಿದಿದ್ದಾರೆ. ಇದೀಗ ರಾಕೇಶ್ ಪೂಜಾರಿ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ತಿಳಿದಿತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಕೇಶ್ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಬರೆದುಕೊಂಡಿರುವ ಆ ಸಾಲುಗಳಿವೆ ಇದಕ್ಕೆ ಪುಷ್ಟಿ ನೀಡುವಂತಿವೆ.ಹೌದು ರಾಕೇಶ್ ಪೂಜಾರಿ ಅವರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು ಇಡೀ ಕರ್ನಾಟಕದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಸದಾ ಹಸನ್ಮುಖಿಯಾಗಿದ್ದ ರಾಕೇಶ್ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಒಂದು ಸಾಲನ್ನು ಬರೆದುಕೊಂಡಿದ್ದು, ಈಗಿನ ಹೃದಯವಿದ್ರಾವಕ ಘಟನೆಗೆ ಹೋಲುವಂತಿದೆ.
ರಾಕೇಶ್ ಪೂಜಾರಿ ಅವರು ತಮ್ಮ ಬಯೋದಲ್ಲಿ Life is Short me 2 ಎಂದು ಬರೆದುಕೊಂಡಿರುವ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ. ನನಗೂ ಜೀವನ ಚಿಕ್ಕದು ಎಂಬರ್ಥದಲ್ಲಿ ರಾಕೇಶ್ ತಮ್ಮ ಬಯೋದಲ್ಲಿ ಒಂದು ಸಾಲು ಬರೆದುಕೊಂಡಿದ್ದಾರೆ. ಹಾಗಾಗಿ ರಾಕೇಶ್ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಇತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಅಥವಾ ಇದು ಕಾಕತಾಳೀಯವೋ ಅಥವಾ ಆ ಸಾಲುಗಳಿಗೆ ತಕ್ಕಂತೆ ರಾಕೇಶ್ ಸಣ್ಣ ವಯಸ್ಸಿಗೆ ವಿದಾಯ ಹೇಳಿದ್ದಾರೋ ಎಂದು ವಿಧಿಯ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
ಕಾಮಿಡಿ ಕಿಲಾಡಿಗಳು ಮೂಲಕ ರಾಕೇಶ್ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಸದಾ ನಗುತ್ತಿದ್ದ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು ಎಂಬ ವಿಚಾರವನ್ನು ಹಲವರು ಈಗಲೂ ಒಪ್ಪುತ್ತಿಲ್ಲ. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಕೇಶ್ ಅವರು ಮೆಹಂದಿ ಡ್ಯಾನ್ಸ್ ಮಾಡಿದ್ದರು.
ಆಗ ರಾಕೇಶ್ ಹಲವು ಬಾರಿ ತಮ್ಮ ಎದೆಯನ್ನು ಹಿಡಿದುಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ನೋವು ಕಾಣಿಸಿಕೊಂಡಾಗಲೇ ರಾಕೇಶ್ ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕಿತ್ತು ಎಂದು ಅನೇಕರು ಸಂಕಟ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.