ಊಟ ನೀರು ಇಲ್ಲದೆ ಬೆಂಗಳೂರಿನ ಬೀದಿ ಬದಿ ಭಿಕ್ಷೆ ಬೇಡುತ್ತಿರುವ ಹುಚ್ಚಾವೆಂಕಟ್

 | 
Hs

ನಟ ವೆಂಕಟ್ ಅಂದರೆ ಯಾರು ಎಂದು ಕೇಳುತ್ತಾರೆ ಅದೇ ಹುಚ್ಚ ವೆಂಕಟ್ ಹೆಸರು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹುಚ್ಚ ವೆಂಕಟ್ ಹೆಸರು ಎಲ್ಲರಿಗೂ ಗೊತ್ತು. ಫೈರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ನಟ, ನಿರ್ದೇಶಕ, ನಿರ್ಮಾಪಕ ಆಗಿರೋ ಹುಚ್ಚ ವೆಂಕಟ್ ಅವರು ಹುಚ್ಚನಂತೆ ಓಡಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 3ರಲ್ಲಿ ವೆಂಕಟ್ ಅವರು ಅತ್ಯಂತ ಜನಪ್ರಿಯ ಸ್ಪರ್ಧಿಯಾಗಿದ್ದರು. ಬಿಗ್​ಬಾಸ್​​ ಮನೆಯಲ್ಲಿದ್ದ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಕ್ಕೆ ಅವರನ್ನು ಆಚೆ ಹಾಕಲಾಯಿತು. ಇದಾದ ಬಳಿಕ ಸಾಕಷ್ಟು ಬಾರಿ ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ವೆಂಕಟ್​ ಅವರು ಹುಚ್ಚನಂತೆ ಅಲ್ಲಿ ಇಲ್ಲಿ ಸುತ್ತಾಡುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿತ್ತು.

ಇದೀಗ ನನಗೆ ಊಟ ನೀಡಿ, ಕುಡಿಯಲು ನೀರು ಕೊಡಿ ಎಂದು ಮನೆ ಮನೆಗೆ ಹೋಗಿ ಕೇಳುತ್ತಿರೋ ವಿಡಿಯೋವನ್ನು ವ್ಯಕ್ತಿಯೊಬ್ಬರು ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋ ಜೊತೆಗೆ ಇವರನ್ನು ನೋಡಿ ನನಗೆ ದುಃಖ ಆಯಿತು. ನನ್ನ ಬಳಿಯಿದ್ದ ಹಣವನ್ನು ಅವರಿಗೆ ನೀಡಿದ್ದೇನೆ. ನೀರು, ಊಟ ಕೊಡಿ ಅಂತಾ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ. 

ಸದ್ಯ ಈಗ ಅವರು ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ನಮಗೆ ಎಷ್ಟು ಸಾಧ್ಯವೋ ಅಷ್ಟು ಹಣ ನೀಡಿ, ಬಿಗ್‌ಬಾಸ್ ತಂಡ ಅಥವಾ ಕಲರ್ಸ್ ಕನ್ನಡ ಅವರಿಗೆ ಸಹಾಯ ಮಾಡಬೇಕು, ಕಿಚ್ಚ ಬಾಸ್​ ದಯಮಾಡಿ ಅವರನ್ನು ನೋಡಿಕೊಳ್ಳಿ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ನೋಡಿದರೆ ಕನಿಕರ ಬರುವಂತಿದೆ ಅವರ ಸ್ಥಿತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.