ಮದುವೆಯಾದ 5ದೇ ತಿಂಗಳಿಗೆ ಗಂಡ ವೀರ ಮರಣ; ಈಕೆಯ ಮುಖ ನೋಡಿ ಪ್ರಧಾನಿ ‌ನಿಬ್ಬೆರಗು

 | 
Y

ದೇಶಕ್ಕಾಗಿ ಹೋರಾಡುವ ಯೋಧರು ಪ್ರಾಣ ತೆತ್ತಾಗ ಅವರ ಕುಟುಂಬ ಎದುರಿಸುವ ನೋವು ಸಾಮಾನ್ಯದ್ದಲ್ಲ. ದೇಶ ರಕ್ಷಣೆ ಮಾಡುವಾಗ ಪ್ರಾಣ ಅರ್ಪಿಸುವುದು ಹೆಮ್ಮೆಯ ಸಂಗತಿ. ಆದರೆ ಅವರ ಕುಟುಂಬಗಳು ಆ ಆಘಾತದಿಂದ ಹೊರಬರುವುದು ಸಾಧ್ಯವೇ? ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹುತಾತ್ಮ ಸೈನಿಕ ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಿದ ಕೀರ್ತಿ ಚಕ್ರ ಸ್ವೀಕರಿಸುವಾಗ ಅವರ ಪತ್ನಿ ಹೇಳಿದ ಮಾತುಗಳು ಕಣ್ಣಾಲಿಗಳನ್ನು ತೇವಗೊಳಿಸದೆ ಇರದು.

ನಾನು ಸಾಧಾರಣ ಸಾವು ಪಡೆಯುವುದಿಲ್ಲ. ಅದು ವೀರ ಮರಣವಾಗಿರುತ್ತದೆ...ಕಳೆದ ವರ್ಷ ಉಗ್ರರ ಜತೆಗಿನ ಕಾದಾಟದ ವೇಳೆ ಹುತಾತ್ಮರಾದ ಭಾರತೀಯ ಸೇನೆಯ ಯೋಧ ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರ ಪತ್ನಿ, ತಮ್ಮ ಪತಿ ಹೇಳಿದ್ದ ಮಾತುಗಳನ್ನು ಸಂಕಟಭರಿತ ದನಿಯನ್ನು ನೆನಪಿಸಿಕೊಂಡಾಗ ಇಡೀ ಸಭಾಂಗಣ ಭಾವುಕವಾಯಿತು. ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕನ ವಿಧವೆ ಪತ್ನಿಯ ನೋವು, ಪತಿಯ ಸಾಹಸದ ಹೆಮ್ಮೆ ಎರಡೂ ಒಮ್ಮೆಲೆ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.

ಬಿಳಿ ಸೀರೆಯಲ್ಲಿ, ದುಃಖ ಹಾಗೂ ಕಂಬನಿ ತುಂಬಿದ ಮುಖದೊಂದಿಗೆ ಭಾರವಾದ ಹೆಜ್ಜೆಗಳೊಂದಿಗೆ ಅತ್ತೆ ಮಂಜು ಸಿಂಗ್ ಅವರ ಜತೆ ಸ್ಮೃತಿ ಸಿಂಗ್ ನಡೆದು ಬಂದ ದೃಶ್ಯ ಎಂತಹವರ ಕಣ್ಣಾಲಿಗಳಲ್ಲೂ ನೀರು ಜಿನುಗಿಸುವಂತೆ ಮಾಡಿತ್ತು.ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಕೈ ಮುಗಿದು ನಿಂತಾದ ಸ್ಮೃತಿ ಅವರು ಗದ್ಗದಿತರಾಗಿದ್ದರು. ಸಿಯಾಚಿನ್‌ನಲ್ಲಿ ನಡೆದ ಅವಘಡದಲ್ಲಿ ವೀರ ಮರಣ ಅಪ್ಪಿದ ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರಿಗೆ ಮರಣೋತ್ತರವಾಗಿ ದೊರಕಿದ ದೇಶದ ಎರಡನೇ ಅತಿ ದೊಡ್ಡ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಸ್ವೀಕರಿಸುವಾಗ ಕಂಡು ಬಂದ ಮನಕಲಕುವ ದೃಶ್ಯವಿದು.

ನಾವು ಕಾಲೇಜಿನ ಮೊದಲ ದಿನ ಭೇಟಿಯಾಗಿದ್ದೆವು. ನಾನು ನಾಟಕೀಯವಾಗಿ ಹೇಳಲಾರೆ. ಆದರೆ ಅದು ಮೊದಲ ನೋಟದಲ್ಲೇ ಚಿಗುರಿದ ಪ್ರೀತಿ. ಒಂದು ತಿಂಗಳ ಬಳಿಕ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (ಎಎಫ್‌ಎಂಸಿ) ಆಯ್ಕೆಯಾದರು. ನಾವು ಭೇಟಿಯಾಗಿದ್ದು ಎಂಜಿನಿಯರಿಂಗ್ ಕಾಲೇಜಿನಲ್ಲಿ. ಆದರೆ ಅವರು ಆಯ್ಕೆಯಾಗಿದ್ದು ವೈದ್ಯಕೀಯ ಕಾಲೇಜಿಗೆ ನಾವು ಭೇಟಿಯಾಗಿದ್ದು ಎಂಜಿನಿಯರಿಂಗ್ ಕಾಲೇಜಿನಲ್ಲಿ. 

ಆದರೆ ಅವರು ಆಯ್ಕೆಯಾಗಿದ್ದು ವೈದ್ಯಕೀಯ ಕಾಲೇಜಿಗೆ. ಅಪಾರ ಬುದ್ಧಿವಂತ ಹುಡುಗ. ಅಲ್ಲಿಂದ, ಭೇಟಿಯಾದ ಒಂದು ತಿಂಗಳ ಬಳಿಕ ನಮ್ಮ ಸುದೀರ್ಘ ಅಂತರದ ಎಂಟು ವರ್ಷಗಳಷ್ಟು ಕಾಲ ಹಾಗೆಯೇ ಉಳಿದಿತ್ತು. ಕೊನೆಗೆ ನಾವು ಮದುವೆಯಾಗಲು ನಿರ್ಧರಿಸಿದೆವು. ದುರದೃಷ್ಟವಶಾತ್, ನಮ್ಮ ಮದುವೆಯಾಗಿ ಎರಡು ತಿಂಗಳಿಗೂ ಮುನ್ನ ಅವರಿಗೆ ಸಿಯಾಚಿನ್‌ನಲ್ಲಿ ಕರ್ತವ್ಯ ನಿಯೋಜನೆಯಾಯಿತು.

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರನ್ನು ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ವೈದ್ಯಕೀಯ ಅಧಿಕಾರಿಯಾಗಿ 26 ಪಂಜಾಬ್ ಪಡೆಗಳೊಂದಿಗೆ ನಿಯೋಜಿಸಲಾಗಿತ್ತು. 2023ರ ಜುಲೈ 19ರಂದು ನಸುಕಿನ 3 ಗಂಟೆಗೆ ಶಾರ್ಟ್ ಸರ್ಕೀಟ್‌ನಿಂದಾಗಿ ಭಾರತೀಯ ಸೇನೆಯ ಮದ್ದುಗುಂಡು ಸಂಗ್ರಹಾಗಾರದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ಗ್ಲಾಸ್‌ನಿಂದ ಮಾಡಿದ ಗುಡಿಸಲು ಹೊತ್ತಿ ಉರಿಯುತ್ತಿರುವುದನ್ನು ಕಂಡ ಸಿಂಗ್, ಒಳಗೆ ಸಿಲುಕಿರುವವರ ರಕ್ಷಣೆಗೆ ಕೂಡಲೇ ಧಾವಿಸಿದ್ದರು. 

ನಾಲ್ಕರಿಂದ ಐವರನ್ನು ಹೊರಗೆ ಕರೆತಂದು ರಕ್ಷಿಸುವಲ್ಲಿ ಅವರು ಸಫಲರಾದರು. ಆದರೆ ಬೆಂಕಿ ಸಮೀಪದ ವೈದ್ಯಕೀಯ ತನಿಖಾ ಕೊಠಡಿಯೂ ವ್ಯಾಪಿಸಿತ್ತು. ಬೆಂಕಿ ಜ್ವಾಲೆ ಆವರಿಸಿದ್ದ ಆ ಕೊಠಡಿಗೂ ಅಂಶುಮನ್ ನುಗ್ಗಿದ್ದರು. ಅವರ ಪ್ರಯತ್ನದ ಹೊರತಾಗಿಯೂ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಂಸಾರಿಕ ಬದುಕು ಆರಂಭಿಸುವ ಮುನ್ನವೇ ಅವರ ಜೀವನ ಅಂತ್ಯಗೊಂಡಿತ್ತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.