ಕನ್ನಡ ಇಂಡಸ್ಟ್ರಿಯಲ್ಲಿ‌ ನಾನು ದೊಡ್ಡ ‌ನಟರೀ; ಕಿಚ್ಚನ ಮೇಲೆ ರಿಷಭ್ ಶೆಟ್ಟಿ ಹೇಳಿದ್ದೇ ನು ಗೊ ತ್ತಾ

 | 
Gu
ಕನ್ನಡ ಚಿತ್ರರಂಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅನ್ನೋ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದನ್ನು ಇತ್ತೀಚೆಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ರಿಷಬ್ ಶೆಟ್ಟಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ ಮಾತು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.
ಯಾರಿಗಾದರೂ ಸ್ಟಾರ್ ಪಟ್ಟ ಬಂದು ಬಿಟ್ಟಿರೆ ಅವರು ಬೇರೆ ನಟರೊಂದಿಗೆ ಅಂತರವನ್ನು ಕಾಯ್ಡುಕೊಳ್ಳುತ್ತಾರೆ. ಇದು ಸಹಜವಾಗಿ ಎಲ್ಲಾ ಚಿತ್ರರಂಗದಲ್ಲಿ ಕೇಳಿ ಬರುವ ಮಾತು. ಹಾಗೇ ಕನ್ನಡ ಚಿತ್ರರಂಗದಲ್ಲೂ ಸ್ಟಾರ್ ನಟರು ಅವರವರ ಕೆಲಸವನ್ನು ಅವರು ಮಾಡಿಕೊಂಡಿದ್ದಾರೆ. ಬೇರೆಯವರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಹಲವರ ಆರೋಪ. ಅದರಂತೆಯೇ ಕೆಲ ನಟರು ನಡೆದುಕೊಳ್ಳುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿ ವಿಚಾರನೇ ಬೇರೆ.
ರಿಷಬ್ ಶೆಟ್ಟಿ ಕಾಂತಾರದಂತಹ ಮೆಗಾ ಹಿಟ್ ಕೊಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೂ, ಕಿಚ್ಚ ಸುದೀಪ್ ತಮ್ಮ ನೆಚ್ಚಿನ ನಟ ಅನ್ನೋದನ್ನು ಮರೆತಿಲ್ಲ. ಅದೇ ಸೂಪರ್ ಸ್ಟಾರ್ ನಟನ ಅಭಿಮಾನಿಯಾಗಿಯೇ ಉಳಿದುಕೊಂಡಿದ್ದಾರೆ. ಈ ಮಾತನ್ನು ಇತ್ತೀಚೆಗೆ ನೀಡಿದ ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆ ವಿಡಿಯೋವನ್ನು ಕಿಚ್ಚನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
ರಿಷಬ್ ಶೆಟ್ಟಿ ಈಗ ಲಾಫಿಂಗ್ ಬುದ್ಧ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೇ ರಿಷಬ್ ಶೆಟ್ಟಿಯೇ ಬೆಂಬಲವಾಗಿ ನಿಂತಿದ್ದಾರೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದೇ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಖಡಕ್ ಸಿನಿಮಾ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು. ಈ ವೇಳೆ ಕಿಚ್ಚ ಸುದೀಪ್ ಜೊತೆಗಿದ್ದ ಫೋಟೋ ಬಗ್ಗೆ ಹೇಳುವಾಗ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.