ಶೆಟ್ರ ಜೊತೆ ನನ್ನ ಮದ್ವೆಯಾಗಿದೆ, ಸಂದಶ೯ನದಲ್ಲಿ ಆ್ಯಂಕರ್ ಅನುಶ್ರೀ ಓಪನ್ ಟಾಕ್

 | 
Hu
 ಕನ್ನಡದ ಪ್ರಖ್ಯಾತ ನಿರೂಪಕರಲ್ಲಿ ಕೇಳಿಬರುವ ಮೊದಲ ಹೆಸರು ಅನುಶ್ರೀ. ಶೋ ಯಾವುದೇ ಆಗಿರಲಿ, ಸ್ವಚ್ಛಂದವಾಗಿ-ನಿರರ್ಗಳವಾಗಿ ಮಾತನಾಡುತ್ತಾ ಆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಕೊಡುವ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅನುಶ್ರೀ ವಯಸ್ಸು ಮೂವತ್ತು ದಾಟಿದ್ದರೂ ಇನ್ನೂ ಮದುವೆಯಾಗಿಲ್ಲ ಯಾಕೆ? ಎಂದು ಅನೇಕರು ಅವರನ್ನು ಪ್ರಶ್ನೆ ಮಾಡಿದ್ದುಂಟು, ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಮದುವೆಯನ್ನೂ ಮಾಡಿಸಿ, ಟ್ರೋಲ್’ಗಳನ್ನು ಮಾಡಿದ ಉದಾಹರಣೆಗಳಿವೆ. ಆಗಾಗ ಅವರು ಇವರನ್ನು ಮದ್ವೆ ಆಗ್ತಾರಂತೆ. ಈಗಾಗಲೇ ಮದ್ವೆ ಆಗಿದ್ದಾರಂತೆ ಏನೇನೋ ಸುದ್ದಿಗಳು ವೈರಲ್ ಆಗ್ತಿರುತ್ತದೆ.
ಇದೀಗ ತಮ್ಮ ಮದುವೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಕಂಡು ಅನುಶ್ರೀ ಬಿದ್ದು ಬಿದ್ದು ನಕ್ಕು ಹೇಳಿಕೆಯನ್ನು ನೀಡಿದ್ದಾರೆ.ಯೂಟ್ಯೂಬ್’ನಲ್ಲಿ ನನಗೆ ಇಲ್ಲಿಯವರೆಗೆ 10 ಸಾವಿರ ಬಾರಿ ಮದುವೆ ಮಾಡಿಸಿದ್ದಾರೆ. ಈ ಕಾರಣಕ್ಕೆ ನಾನು ನಿಜಕ್ಕೂ ಮದುವೆಯಾದರೂ ನನ್ನನ್ನು ನಂಬಲ್ಲ. ರಕ್ಷಿತ್ ಶೆಟ್ಟಿ ಜೊತೆಯೂ ಮೂರು ಸಲ ನನ್ನ ಮದುವೆ ಮಾಡಿಸಿದ್ದಾರೆ.
 ಅವರಿಗೆ ಅದರ ಬಗ್ಗೆ ನಾನು ಕಾಲ್‌ ಮಾಡಿ ಕೂಡ ಹೇಳಿದ್ದೆ ಎಂದು ಜೋರಾಗಿ ನಕ್ಕಿದ್ದಾರೆ.ಒಂದು ಸಲ ಈ ಮದುವೆ ಸುದ್ದಿ ನೋಡಿ, ಅದರ ಲಿಂಕ್ ರಕ್ಷಿತ್’ಗೆ ಕಳುಹಿಸಿ ಕಂಗ್ರಾಟ್ಸ್ ಕೂಡ ಹೇಳಿದ್ದೆ. ಅದಕ್ಕೆ ಅವರು ಹೋ ಇದ್ಯಾವಾಗ ಮಾರ್ರೆ! ನೀವು ಕರಿಲೇ ಇಲ್ಲ ಅಂದ್ರು. ನಾವೂ ಇಬ್ಬರು ಮದುವೆಗೆ ಬರಲಿಲ್ಲ ಆದರೂ ನಮ್ಮ ಮದುವೆಯಾಗಿದೆ ನೋಡಿ ಎಂದಿರುವೆ ಎಂದು ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.