ಮಾಲ್‌ ಗಳಲ್ಲಿ ನನ್ನ ಸಿನಿಮಾ ಶೋ ಕೊಡುತ್ತಿಲ್ಲ, ಹಿಂದಿ ತೆಲುಗು ಹಾಕುತ್ತಿದ್ದಾರೆ ಎಂದು ಬಿಕ್ಕಿಬಿಕ್ಕಿ ಅತ್ತ ವಿನೋದ್ ಪ್ರಭಾಕರ್

 | 
ಸ್
ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮೊಂತೆರೊ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಾದೇವ' ಜೂನ್ 6ರಂದು ಅದ್ದೂರಿಯಾಗಿ ಬಿಡುಗಡೆಯಾಗಿ ಯಶ ಕಂಡಿದೆ. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್​​ನಲ್ಲಿ ಇದೀಗ ಸೂಕ್ತ ಪ್ರಮಾಣದ ಶೋಗಳಿಗೆ ಅವಕಾಶ ಸಿಕ್ಕಿಲ್ಲ. ಹಿಂದಿ ಸಿನಿಮಾಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿದೆ. ಈ ಬಗ್ಗೆ ಸ್ವತಃ ನಾಯಕ ನಟ ವಿನೋದ್ ಪ್ರಭಾಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್​​ನಿಂದಲೇ ಹೆಸರುವಾಸಿಯಾಗಿರೋ ನಟ ವಿನೋದ್ ಪ್ರಭಾಕರ್. ಮಾದೇವ ಸಿ‌ನಿಮಾ ಬಿಡುಗಡೆ ಆಗಿ ಸಿಂಗಲ್ ಸ್ಕ್ರೀನ್​​ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ನಟನ ವೃತ್ತಿಜೀವನದಲ್ಲೇ ಒಂದೊಳ್ಳೆ ಸಕ್ಸಸ್ ಅನ್ನು ಈ ಮಾದೇವ ಸಿನಿಮಾ ತಂದು ಕೊಡುವ ಸೂಚನೆ‌ ಸಿಕ್ಕಿತ್ತು. ಈ ಮಧ್ಯೆ ವಿನೋದ್ ಪ್ರಭಾಕರ್​ಗೆ‌ ಮತ್ತೊಂದು ಸವಾಲು ಎದುರಾಗಿದೆ.
ಮಲ್ಟಿಪ್ಲೆಕ್ಸ್​​ನಲ್ಲಿ ಮಾದೇವ ಸಿನಿಮಾದ ಶೋಗಳನ್ನು ಕಡಿಮೆ ಮಾಡಿ, ಪರಭಾಷೆಯ ಚಿತ್ರಗಳನ್ನು ಹೆಚ್ಚು ಕೊಡುವ ಮೂಲಕ ಮಲತಾಯಿ ಧೋರಣೆಮಾಡಲಾಗುತ್ತಿದೆ ಎಂದು ನಟ ವಿನೋದ್ ಪ್ರಭಾಕರ್ ಆಕ್ರೋಶ ಹೊರಹಾಕಿದ್ದಾರೆ.ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾದೇವ ಸಿನಿಮಾ ಎದುರಿಸುತ್ತಿರುವ ಸಮಸ್ಯೆಯನ್ನು ಆಲಿಸಿ, ಮಲ್ಟಿಪ್ಲೆಕ್ಸ್ ಮಾಲೀಕರ ಜೊತೆ ಮಾತುಕತೆ ನಡೆಸಿ ಹೆಚ್ಚು ಶೋ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಸಂಜೆಯ ಪ್ರೈಮ್ ಟೈಮ್​​ನಲ್ಲಿ ಶೋಗಳಿಗೆ ಅವಕಾಶ ಕೊಡಿಸುವ ಭರವಸೆ ನೀಡಿದ್ದಾರೆ.
ಫಿಲ್ಮ್​​ ಚೇಂಬರ್​ ಅಧ್ಯಕ್ಷರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್​ ಪ್ರಭಾಕರ್​, ಯಾವುದೋ ಹಿಂದಿ ಸಿನಿಮಾಗೆ ಏಳೇಳು ಶೋ ಕೊಟ್ಟಿದ್ದಾರೆ. ಎರಡನೇ ವಾರವೂ ಮುಂದುವರಿಸುತ್ತಿದ್ದಾರೆ. ನಮಗೆ ಎಕ್ಸ್​ಟ್ರಾ ಶೋಗಳು ಬೇಕು, ಪ್ರೈಮ್​ ಟೈಮ್​ ಬೇಕು ಅಂತಾ ಕೇಳುತ್ತಿದ್ದೇವೆ. ಪ್ರೈಂ ಟೈಮ್​ ಏಕಂದ್ರೆ, ಎರಡನೇ ಶನಿವಾರ ಮತ್ತು ಭಾನುವಾರ. ಹೆಚ್ಚಿನವರು ಶನಿವಾರ ಭಾನುವಾರ ಹೋಗಿ ಸಿನಿಮಾ ನೋಡುತ್ತೇವೆ ಎಂದಿದ್ದಾರೆ. ರಿಪೋರ್ಟ್ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಹಾಗಾಗಿ, ಈ ಶನಿವಾರ ಭಾನುವಾರಕ್ಕೆ ನಾವು ಕಾಯುತ್ತಿದ್ದೆವು. ಆದರೆ ಎಲ್ಲಾ ಪಿವಿಆರ್​​ ಮಾಲ್​ಗ್​ಳಲ್ಲಿ ಒಂದೊಂದೇ ಶೋ ಕೊಟ್ಟಿದ್ದಾರೆ. ಅದೂ ಕೂಡಾ ಪ್ರೈಮ್ ಟೈಂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.