ನನಗೆ ವಯಸ್ಸಾಗಿದೆ ಆದರೂ ನನ್ನ ಗಂಡ ನನ್ನನ್ನು ಸೆ ಕ್ಸೀ ಎನ್ನುತ್ತಾರೆ; ಕರೀನಾ ಕಪೂರ್
Updated: Sep 14, 2024, 09:14 IST
|
ಜಬ್ ವಿ ಮೆಟ್ ಚಲುವೆ ನಟಿ ಕರೀನಾ ಕಪೂರ್ ಮದುವೆ ಆಗಿ ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಬೊ ನಟಿಸಿರುವ 'ದಿ ಬಕ್ಕಿಂಗ್ಯಾಮ್ ಮರ್ಡರ್ಸ್' ಸಿನಿಮಾ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾ ಪ್ರಚಾರದಲ್ಲಿ ಚೆಲುವೆ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರೀನಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ.
ಮುಖ್ಯವಾಗಿ ತಮ್ಮ ವಯಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ರೋಲ್ ವಿಚಾರ ಪ್ರಸ್ತಾಪ ಆದಾಗ ಬೆಬೋ ಈ ಬಗ್ಗೆ ಚರ್ಚಿಸಿದ್ದಾರೆ. ಸೆಲೆಬ್ರೆಟಿಗಳು ಅಂದ್ರೆ ಸದಾ ಚೆಂದವಾಗಿ ಕಾಣಬೇಕು ಎಂದು ಕೆಲವರು ಭಾವಿಸುತ್ತಾರೆ. ಅದೇ ಕಾರಣಕ್ಕೆ ನಟ- ನಟಿಯರು ಸೌಂದರ್ಯದಲ್ಲಿ ಕೊಂಚ ಬದಲಾವಣೆ ಕಂಡರೂ ಕಾಮೆಂಟ್ ಮಾಡುತ್ತಾರೆ. ನಾವು ಇಂಡಸ್ಟ್ರಿಗೆ ಬಂದಾಗ ಹೇಗೆ ಇದ್ದೇವೂ ಹಾಗೆ ಈಗಲೂ ಇರಬೇಕು ಎಂದು ಬಯಸುತ್ತಾರೆ.
ನಟ-ನಟಿಯರು ಕೂಡ ಮನುಷ್ಯರೇ ಅಲ್ಲವೇ? ಅವರಿಗೂ ವಯಸ್ಸಾಗುತ್ತದೆ. ಮುಖದ ಮೇಲೆ ಸುಕ್ಕು ಬರುತ್ತದೆ. ಕೂದಲು ಬೆಳ್ಳಗಾಗುತ್ತದೆ. ಕೆಲವರು ಮಾತ್ರ ಇದನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿ ಕೆಲ ಚಿಕಿತ್ಸೆಗಳನ್ನು ಪಡೆಯುವುದುಂಟು. ಆದರೆ ಈ ಬಗ್ಗೆ ಕರೀನಾ ಇದೀಗ ಮಾತನಾಡಿದ್ದಾರೆ. ನನಗೆ ಅಂತಹ ಚಿಕಿತ್ಸೆಗಳ ಅಂದರೆ ಬೋಟಾಕ್ಸ್ ಮಾಡಿಸುವ ಅಗತ್ಯವಿಲ್ಲ, ನಾನು ನಾನಾಗಿಯೇ ಇರ್ತೀನಿ ಎಂದಿದ್ದಾರೆ.
ಇತ್ತೀಚೆಗೆ ಕರೀನಾ ಹಾಕುವ ಫೋಟೊಗಳನ್ನು ನೋಡಿ ಕೆಲವರು ಆಂಟಿ, ಅಜ್ಜಿ ಎಂದು ಕಾಮೆಂಟ್ ಮಾಡಿದ್ದರು. ಇಂತಹ ಟ್ರೋಲ್ ಬಗ್ಗೆ ಸಂದರ್ಶನದಲ್ಲಿ ಕರೀನಾ ಮಾತನಾಡಿದ್ದಾರೆ. ಇದೇ ವಿಚಾರದ ಬಗ್ಗೆ ಮಾತನಾಡಿರುವ ಕರೀನಾ ವಯಸ್ಸು ಸೌಂದರ್ಯದ ಒಂದು ಭಾಗ. ಸೌಮದರ್ಯ ಅಂದರೆ ಮುಖದ ಮೇಲಿನ ನೆರಿಗೆ, ಸುಕ್ಕಿನ ವಿರುದ್ಧ ಹೋರಾಡುವುದು ಅಥವಾ ಕಿರಿಯರಾಗಿ ಕಾಣಲು ಪ್ರಯತ್ನಿಸುವುದಿಲ್ಲ, ಇದು ನೀವು ಇರುವ ವಯಸ್ಸನ್ನು ಅಪ್ಪಿಕೊಳ್ಳುವುದು ಮತ್ತು ಪ್ರೀತಿಸುವುದು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.