ನನಿಗೆ ವಯಸ್ಸಾಯ್ತು; ದೇಹದಲ್ಲಿ ಮೊದಲಿನಂತೆ ಹುಮ್ಮಸ್ಸು ಕಾಣುತ್ತಿಲ್ಲ ಎಂದ ವೈಷ್ಣವಿ ಗೌಡ

 | 
Ghu

ದೇವಿ, ಅಗ್ನಿ ಸಾಕ್ಷಿ ಧಾರಾವಾಹಿಗಳ ಮೂಲಕ ಮನಗೆದ್ದ ವೈಷ್ಣವಿ ಇದೀಗ ಸೀತಾರಾಮ ಧಾರವಾಹಿಯಲ್ಲಿ ನಟಿಸಿ ಎಲ್ಲರ ಮನಗೆದ್ದ ನಟಿಯಾಗಿದ್ದಾರೆ. ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್.‌ ಒಂದಿಲ್ಲೊಂದು ಫೋಟೋ ಗೊಂಚಲುಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. 

ಈಗ ಕಾಲರ್‌ ಇರೋ ಕಡು ನೀಲಿ ಬಣ್ಣದ ರವಿಕೆ ಮತ್ತು ಬಂಗಾರದ ದಡಿಯ ಸೀರೆ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಸಿಂಗಲ್‌ ಪೇರಂಟ್‌ ತಾಯಿಯ ಸಮಸ್ಯೆಗಳು, ಸಮಾಜ ಆಕೆಯನ್ನು ನೋಡುವ ರೀತಿ, ಇದರ ನಡುವೆ ಮೊಳಕೆಯೊಡೆಯುವ ಪ್ರೀತಿ. ಹೀಗೆ ನೋಡಿಸಿಕೊಂಡು ಹೊರಟಿದೆ ಸೀತಾ ರಾಮ ಸೀರಿಯಲ್.‌ 

ಸೀತಾ ರಾಮ ಸೀರಿಯಲ್‌ನಲ್ಲಿ ಸದ್ಯ ರಾಮ ಮತ್ತು ಸೀತಾ ಮದುವೆಯ ವಿಚಾರ ಚರ್ಚೆಯಲ್ಲಿದೆ. ಸೀತಾಳಿಗೆ ಅಮಗು ಇರುವ ವಿಚಾರ ಸೂರ್ಯಪ್ರಕಾಶ್‌ಗೂ ಗೊತ್ತಾಗಿದೆ.  ಇನ್ನೊಂದು ಕಡೆ ಭಾರ್ಗವಿ ಮಾತ್ರ ಶತಾಯ ಗತಾಯ ಈ ಮದುವೆ ತಪ್ಪಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುತ್ತಿದ್ದಾಳೆ. ಮುಂದೇನಾಗುತ್ತೋ ಎಂಬ ಕುತೂಹಲವೂ ಮೂಡಿದೆ. 

ಈಗ ಸೀರಿಯಲ್‌ ಬದಿಗಿಟ್ಟರೆ, ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋ ಹಂಚಿಕೊಂಡಿರುವ ವೈಷ್ಣವಿ ಗೌಡ, ಸೀರೆಯಲ್ಲಿ ಮಿಂಚಿದ್ದಾರೆ. ಹೀಗೆ ಫೋಟೋ ಹಂಚಿಕೊಂಡಿದ್ದೇ ತಡ, ಕೆಲವರು ಚೆಂದ ಎಂದು ಫೋಟೋಗಳಿಗೆ ಕಾಮೆಂಟ್‌ ಹಾಕಿದ್ರೆ, ಇನ್ನು ಕೆಲವರು ನೀವು ಮೊದಲಿನ ವೈಷ್ಣವಿ ಅಲ್ಲ ಎನ್ನುತ್ತಿದ್ದಾರೆ. ಮುಂಚೆ ಕೆಲ ವರ್ಷಗಳ ಹಿಂದಿನ ಚಾರ್ಮ್‌ ಈಗ ನಿಮ್ಮ ಮುಖದಲ್ಲಿ ಇಲ್ಲ, ನಿಮಗೆ  ಬೇಸರವಾಗಿದ್ದರೆ ಕ್ಷಮಿಸಿ. ನಿಮಗೆ ವಯಸ್ಸಾಯ್ತು. 

ಈ ಮೊದಲೇ ನೀವು ತುಂಬ ಸುಂದರವಾಗಿದ್ರಿ. ನಿಮ್ಮ ಚಾರ್ಮ್‌ ಜತೆಗೆ ನಿಮ್ಮ ನಗುವಿನಲ್ಲೂ ಮೊದಲಿನ ಕಳೆ ಇಲ್ಲ. ನಿಮಗೆ ವಯಸ್ಸಾಗಿದೆ. ಅಂದರೆ ನೀವು ರಾಮ್‌ಗೆ ಚಿಕ್ಕಮ್ಮ ಅಥವಾ ಅಕ್ಕನ ಥರ ಕಾಣ್ತಿದ್ದೀರಾ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.