ನಾನು ರಾಜ್‍ಕುಮಾರ್ ಮಗ, ತಲೆಕೆಡಿಸಿಕೊಳ್ಳಬೇಡ ಎಂದು ಧೈರ್ಯ ತುಂಬಿದ ಶಿವಣ್ಣ

 | 
Jdd

ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ ಕುಮಾರ್  ಹಾಗೂ ನಟಿ ಲೀಲಾವತಿ  ನಡುವಿನ ಸಂಬಂಧದ ಬಗ್ಗೆ ನಾನಾ ವರದಿಗಳು ಹರಿದಾಡಿದೆ. ರಾಜ್-ಲೀಲಾ ಮದುವೆ ಬಗ್ಗೆಯೂ ಊಹಾಪೋಹ ಹುಟ್ಟಿಕೊಂಡಿತ್ತು. ಆದೇನೆ ಕಂಟ್ರೋವರ್ಸಿ ಆದ್ರೂ ಡಾ.ರಾಜ್​ ಕುಮಾರ್​ ಕುಟುಂಬಸ್ಥರಾಗಲಿ ಅಥವಾ ಲೀಲಾವತಿ ಕುಟುಂಬವಾಗಲಿ ಈ ಬಗ್ಗೆ ಎಂದಿಗೂ ಮಾತಾಡಿಲ್ಲ. ಲೀಲಾವತಿ ಕೂಡ ರಾಜ್​ ಕುಮಾರ್ ಕುಟುಂಬ ಮೇಲೆ ಅಪಾರ ಗೌರವ ಹೊಂದಿದ್ರು. 

ದೊಡ್ಮನೆಯ ದೊಡ್ಡ ಜನ ಎಂದೆ ಕರೆಯುತ್ತಿದ್ರು. ಅನಾರೋಗ್ಯದಿಂದ ಹಾಸಿಗೆ ಹಿಡಿದ ಈ ಹಿರಿಜೀವವನ್ನು ನೋಡಲು ಡಾ. ರಾಜ್ ಕುಮಾರ್​ ಹಿರಿಯ ಪುತ್ರ ಶಿವರಾಜ್ ಕುಮಾರ್ ಲೀಲಾವತಿ ಮನೆಗೆ ಭೇಟಿ ನೀಡಿದ್ರು. ಈ ವೇಳೆ ಶಿವಣ್ಣ ಆಡಿದ ಒಂದೊಂದು ಮಾತು ಕೂಡ ರಾಜ್​ ನೆನಪು ಕಾಡುವಂತೆ ಮಾಡಿದೆ.  

ಹಲವು ವರ್ಷಗಳ ಹಿಂದೆ ನಟಿ ಲೀಲಾವತಿ ಅವರು ಪಾರ್ವತಮ್ಮ ಮೇಲೆ ನನಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದ್ರು. ಇದೀಗ ಪಾರ್ವತಮ್ಮ ಪುತ್ರ ಶಿವಣ್ಣ ಲೀಲಾವತಿ ಕೂಡ ನನಗೆ ಅಮ್ಮನಂತೆ ಎಂದಿದ್ದಾರೆ. ವಿನೋದ್ ನೋಡಿದ್ರ ನನ್ನ ತಾಯಿ ನೋಡಿದ ಹಾಗೇ ಆಗುತ್ತೆ ಎಂದು ಶಿವಣ್ಣ ಹೇಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ವಿನೋದ್​ ರಾಜ್​ ಭಾವುಕರಾದ್ರು.

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಸಲು ಪತ್ನಿ ಗೀತಾ ಶಿವರಾಜ್​ಕುಮಾರ್​ ಜೊತೆಗೆ ಬಂದಿದ್ದ ಶಿವಣ್ಣ, ಲೀಲಾವತಿ ಹಾಗೂ ವಿನೋದ್​ ಬಗ್ಗೆ ಪ್ರೀತಿಯ ಮಾತುಗಳಾಗಿದ್ದಾರೆ. ನನ್ನ ವಿನೋದ್ ಎಂದು ಕೈಹಿಡಿದು ಸಮಾಧಾನ ಮಾಡಿ ಧೈರ್ಯ ತುಂಬಿದ್ದಾರೆ. ಲೀಲಾವತಿ ಅವ್ರದ್ದು ಒಳ್ಳೆಯ ವ್ಯಕ್ತಿತ್ವ ಅದಕ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ ಎಂದು ಹೇಳಿದ್ರು. ನನ್ನ ವಾಯ್ಸ್ ಕೂಡ ಕಂಡು ಹಿಡಿದಿದ್ದಾರೆ ಎಂದು ಶಿವಣ್ಣ ಹೇಳಿದ್ರು. 

ಜನರ ಪ್ರೀತಿ ನನ್ನ ವಿನೋದ್ ಕುಟುಂಬದ ಮೇಲಿದೆ. ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ. ನನ್ನ ತಂದೆ-ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ. ನನ್ನ  ಮಗಳ ಮದುವೆ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ. ನಾವು ಯಾವಾಗಲು ಸಿಗೋದಿಲ್ಲ. ಸಿಕ್ಕಾಗ ಆ ಕ್ಷಣ ನಮ್ಮದು ಎಂದು ಶಿವರಾಜ್​ ಕುಮಾರ್ ಹೇಳಿ ವಿನೋದ್ ರಾಜ್ ಕುಮಾರ್ ಅವರನ್ನು ಸಮಾಧಾನ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.