'ಕಾರ್ತಿಕ್ ಜೊತೆ ಮದುವೆಯಾಗಲು ನಾನು ರೆಡಿ' ನಮ್ರತಾ ಗೌಡ ಮನದಾಳದ ಮಾತು

 | 
B

ಬಿಗ್​ ಬಾಸ್​ ಮನೆಗೆ ವಾಪಸ್ ಬಂದಿರುವ ಸ್ನೇಹಿತ್​, ನಮ್ರತಾ ಜೊತೆ ಹೆಚ್ಚು ಮಾತಾಡ್ತಿಲ್ಲ. ಅಷ್ಟೇ ಅಲ್ಲದೇ ಹೊರಗೆ ನಿಮ್ಮ ಬಗ್ಗೆ ಜನ ಮಾತಾಡೋ ರೀತಿ ಬದಲಾಗಿದೆ ಎನ್ನುವಂತೆ ಮಾತಾಡಿದ್ದಾರೆ.​ ಕಾರ್ತಿಕ್ ಹಾಗೂ ನನ್ನ ನಡುವೆ ಏನು ಇಲ್ಲ. ನಾವಿಬ್ಬರು ಜಸ್ಟ್ ಫ್ರೆಂಡ್​, ಸ್ನೇಹಿತ್ ಯಾಕೆ ಈ ರೀತಿ ನಡೆದುಕೊಳ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ ನಮ್ರತಾ ಗೌಡ ಕಾರ್ತಿಕ್​ ಲವ್​ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.

ಕಾರ್ತಿಕ್ ಮಹೇಶ್​ಗೆ ಹೊರಗೆ ಗರ್ಲ್​​ಫ್ರೆಂಡ್ ಇದ್ದಾರೆ ಎನ್ನುವ ವಿಚಾರ ನನಗೆ ಗೊತ್ತಿದ್ರು ನಾನು ಅವರ ಹಿಂದೆ ಬೀಳಲು ಮುರ್ಖಳ ಎಂದು ನಮ್ರತಾ ಹೇಳಿದ್ದಾರೆ. ಈ ಮೂಲಕ ಹೊರಗೆ ಕಾರ್ತಿಕ್​ಗೆ ಗರ್ಲ್​ಫ್ರೆಂಡ್ ಇರುವ ವಿಚಾರ ಬಹಿರಂಗಗೊಂಡಿದೆ. ಬಿಗ್ ಬಾಸ್​ ಮನೆಯಿಂದ ಎಲಿಮಿನೇಟ್ ಆಗಿ ಹೋದ ಸ್ಪರ್ಧಿಗಳು ಮತ್ತೆ ಅತಿಥಿಗಳಾಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಅತಿಥಿಗಳಾಗಿ ಬಂದವರು ಮನೆಯಲ್ಲಿರುವ ಸ್ಪರ್ಧಿಗಳ ಮನಸ್ಸಿನಲ್ಲಿ ಬೆಂಕಿ ಹಚ್ಚಿದ್ದಾರೆ.

ವಿನಯ್ ಹಾಗೂ ಸ್ನೇಹಿತ್ ಗೌಡ ಒಳ್ಳೆಯ ಸ್ನೇಹಿತರಾಗಿದ್ರು, ಸ್ನೇಹಿತ್ ಹೊರಗೆ ಹೋಗುವ ನಮ್ರತಾ ಗೆದ್ದು ಬನ್ನಿ ಎಂದು ಹೇಳಿದ್ರು. ಆದ್ರೆ ಈಗ ಉಲ್ಟಾ ಹೊಡೆದಿದ್ದಾರೆ ಎಂದು ನಮ್ರತಾ ಬೇಸರಗೊಂಡಿದ್ದಾರೆ. ಮೊದಲು ವಿನಯ್ ಹೆಸರು ತೆಗೆದುಕೊಂಡು ನಂತ್ರ ನಮ್ರತಾ ಹೆಸರು ಹೇಳಿದ ಸ್ನೇಹಿತ್​ಗೆ ಎಷ್ಟು ಜನರನ್ನು ಗೆಲ್ಲಿಸುತ್ತೀರಾ ಸ್ನೇಹಿತ್ ಎಂದು ಪ್ರಶ್ನಿಸಿದ್ರು. ಈ ವೇಳೆ ನಮ್ರತಾ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಸ್ನೇಹಿತ್ ಯಾಕೆ ಈರೀತಿ ನಡೆದುಕೊಳ್ತಿದ್ದಾರೆ ಎಂದು ನಮ್ರತಾ ಗೊಂದಲಕ್ಕೀಡಾಗಿದ್ದಾರೆ. ನನ್ನ ಹಾಗೂ ಕಾರ್ತಿಕ್ ನಡುವೆ ಅಂಥಹದ್ದೇನೂ ಇಲ್ಲ ಎಂದು ಕಣ್ಣೀರು ಹಾಕಿ, ನನ್ನನ್ನು ಇಲ್ಲಿಂದ ಹೊರಗೆ ಕಳಿಸಿಬಿಡಿ, ಆಟಕ್ಕಾಗಿ ನನ್ನ ಕ್ಯಾರೆಕ್ಟರ್  ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಬಂದಿರುವ ಅತಿಥಿಗಳೆಲ್ಲಾ ಮನೆಯಿಂದ ಹೊರಗೆ ಹೋಗ್ಲಿ. ಇವರೆಲ್ಲಾ ಯಾಕೆ ಬಂದ್ರು ಅಂತ ನನಗೆ ಅನಿಸುತ್ತಿದೆ. 

ನನಗೆ ಅಳು ಬಂದ್ರೆ ಬಾತ್​ ರೂಮ್​ಗೆ ಅಳಬೇಕು ಎಂದು ಸಿರಿ ಮುಂದೆ ಬೇಸರ ಹೊರಹಾಕಿದ್ದಾರೆ. ಇದೀಗ ನಮೃತಾ ಕೂಡ ಎಲಿಮಿನೇಟ್ ಆಗಿರುವುದರಿಂದ ಕಾರ್ತಿಕ ಕಾರಣದಿಂದ ನಾನು ಹೊರಬಂದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.