ದರ್ಶ ನ್ ಗೆ ನಾನೇ ವಿಲನ್; ಬಿಗ್ ಬಾಸ್ ವಿನಯ್ ಖಡಕ್ ಮಾ ತು

 | 
Gs

ಸಿನಿಮಾ ಇಂಡಸ್ಟ್ರಿಯರಲ್ಲೀಗ ದರ್ಶನ್ ಬಗ್ಗೆನೇ ಚರ್ಚೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿ ನಿಂತಿರುವ ದರ್ಶನ್ ಪರಪ್ಪ ಅಗ್ರಹಾರ ಜೈಲು ಸೇರಿದ್ದಾರೆ. ಈ ಕಾರಣಕ್ಕೆ ಅವರನ್ನೇ ನಂಬಿರುವ ನಿರ್ಮಾಪಕರ ಬಗ್ಗೆನೂ ಜೋರಾಗಿಯೇ ಚರ್ಚೆ ಆಗುತ್ತಿದೆ.

ಈ ಮಧ್ಯೆ ದರ್ಶನ್ ನಟಿಸುತ್ತಿರುವ ಡೆವಿಲ್ ಸಿನಿಮಾ ಶೂಟಿಂಗ್ ನಿಂತಿದೆ. ಈ ಸಿನಿಮಾದ ಮುಂದಿನ ಭವಿಷ್ಯವೇನು? ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದೇ ವೇಳೆ ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ವಿಲನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ವಿನಯ್ ಗೌಡ ಸಂದರ್ಶನ ನೀಡಿದ್ದು, ಡೆವಿಲ್ ಬಗ್ಗೆ ಮಾತಾಡಿದ್ದಾರೆ.

ನಮ್ಮ ಪ್ರಕಾಶ್‌ ಸರ್ ಪ್ರೊಡಕ್ಷನ್ ಹೌಸ್‌ನಲ್ಲಿ ಈ ಮುಂಚೆನೂ ಕೆಲಸ ಮಾಡಿದ್ದೀನಿ. ಒಂದಿಷ್ಟು ಸೀರಿಯಲ್‌ಗಳನ್ನು ಮಾಡಿದ್ದೇನೆ. ಅವರು ನನ್ನ ಆಕ್ಟಿಂಗ್ ಅನ್ನು ನೋಡಿದ್ದಾರೆ. ಅವರು ಫೋನ್ ಮಾಡಿ ಕರೆಸಿದರು. ಸಿನಿಮಾ ಮಾಡುತ್ತಿದ್ದೇನೆ ಅಂತ ವಿವರಿಸಿದರು. ಪಾತ್ರದ ಬಗ್ಗೆ ಹೇಳಿದರು. ಒಳ್ಳೆಯ ನೆಗೆಟಿವ್ ಕ್ಯಾರೆಕ್ಟರ್, ಒಳ್ಳೆಯ ಸ್ಟಾರ್‌ಗೆ ಅಪೋಸಿಟ್ ಕ್ಯಾರೆಕ್ಟರ್ ಅಂತ ಹೇಳಿದರು. ಆ ಮೇಲೆ ನನಗೆ ಇದು ಡೆವಿಲ್ ಸಿನಿಮಾ ಅಂತ ಗೊತ್ತಾಯ್ತು.

ಸದ್ಯಕ್ಕೀಗ ಡೆವಿಲ್‌ ಸಿನಿಮಾದಲ್ಲಿ ವಿನಯ್ ಗೌಡ ಅವರ ಶೇ.30ರಷ್ಟು ಪೋಷನ್ ಶೂಟ್ ಆಗಿದೆ. ಇನ್ನು ಫೈಟ್ ಸೀಕ್ವೆನ್ಸ್ ಹಾಗೂ ಡೈಲಾಗ್ ಪೋಷನ್ ಬಾಕಿ ಉಳಿದಿವೆ ಎಂದು ವಿನಯ್ ಗೌಡ ಹೇಳಿಕೊಂಡಿದ್ದಾರೆ. ಈ ಪ್ರಾಜೆಕ್ಟ್‌ ಬಗ್ಗೆ ಸೂಪರ್ ಎಕ್ಸೈಟ್ ಆಗಿದ್ದ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಥ್ರಿಲ್ ಆಗಿದ್ದಾರೆ. ಆ ಪ್ರಾಜೆಕ್ಟ್‌ನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ, ಅದೊಂದು ಸೂಪರ್‌ ಪ್ರಾಜೆಕ್ಟ್. ಅಂತಹ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಕ್ಕಿರುವುದೇ ದೊಡ್ಡ ವಿಷಯ. 

ಖಂಡಿತಾ ಬೇಜಾರಾಗುತ್ತೆ. ಆದರೆ, ಎಲ್ಲಾ ಸರಿ ಹೋಗುತ್ತೆ ಅನ್ನೋ ನಂಬಿಕೆ ಅನ್ನೋದು ಇದೆಯಲ್ಲ. ಆ ಪ್ರಾಜೆಕ್ಟ್ ರಿಲೀಸ್ ಆದ್ಮೇಲೆ ಹಬ್ಬ ಇದೆಯಲ್ಲ. ಅದರ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ. ನಾನು ನೆಗೆಟಿವ್ ಅನ್ನೇ ಯೋಚನೆ ಮಾಡುವುದಿಲ್ಲ. ಎಂದು ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.