ನನ್ನ ಗಂಡ ಹಾಗೂ ನೆಚ್ಚಿನ ಗೆಳತಿ ಮಾಡಿದ ಮೋಸ ಮರೆಯುವಂತಿಲ್ಲ, ಜಾಹ್ನವಿ ಕಾರ್ತಿಕ್
Jan 6, 2025, 11:50 IST
|
ಒಮ್ಮೊಮ್ಮೆ ಪ್ರತಿದಿನ ಸ್ಕ್ರೀನ್ ಮೇಲೆ ಕಾಣುತ್ತಿದ್ದರೂ ಸಹ ಗುರುತಿಸಿ ಕೊಳ್ಳೋಕೆ ಆಗೋದಿಲ್ಲ. ಹೌದು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶಿಸಿದ ಜನಪ್ರಿಯ ನಿರೂಪಕಿ ಜಾನ್ವಿ ಈಗ ಕನ್ನಡ ಚಿತ್ರರಂಗದ ನಟಿ. ಗಿಚ್ಚಿ ಗಿಲಿಗಿಲಿ ಸೀಸನ್ 2, ಫ್ಯಾಮಿಲಿ ಗ್ಯಾಂಗ್‌ಸ್ಟರ್ ಮತ್ತು ಸವಿರುಚಿ ಕಾರ್ಯಕ್ರಮಗಳಲ್ಲಿ ಮಿಂಚಿದ ಜಾನ್ವಿ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಜೊತೆ ಅಧಿಪತ್ರ ಚಿತ್ರದಲ್ಲಿ ಸಹ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸೇರಿದಂತೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವ ಜಾನ್ವಿ ಇತ್ತೀಚಿಗೆ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಕೂಡ ಹಂಚಿಕೊಂಡಿದ್ದರು. ಇನ್ನು ಜಾನ್ವಿ ತಮ್ಮ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಈ ಬಗ್ಗೆ ಜಾನ್ವಿ ಬಹುತೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಒಂಟಿಯಾಗಿ ಮಗ ಹಾಗೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಜಾನ್ವಿ ಜೀವನದಲ್ಲಿ ಗೆಳತಿಯನ್ನು ನಂಬಿ ಮೋಸ ಹೋದ ಘಟನೆ ಕೂಡ ನಡೆದಿದೆ.
ಇತ್ತೀಚಿಗೆ ನಡೆದ ಮಿರರ್ ಕನ್ನಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜಾನ್ವಿ ತಮ್ಮ ಮೊದಲುಗಳ ಬಗ್ಗೆ ಮಾತನಾಡಿದ್ದು, ಈ ವೇಳೆ ತಮ್ಮಿಂದ ಸಾಲ ಪಡೆದು ವಾಪಸ್ ಕೊಡದ ವ್ಯಕ್ತಿಯ ಬಗ್ಗೆ ಮಾತನಾಡಿದ್ದಾರೆ. ಸಾಲ ಕೊಟ್ಟು ನಾನು ಮೋಸ ಹೋಗಿರುವುದು ಸ್ವಲ್ಪ ಸಮಯ ಆಗಿದೆ. ಹಾಗಾಗಿ ಯಾರೇ ಸಾಲ ಕೇಳಿಕೊಂಡು ಫೋನ್ ಮಾಡಿದರೂ ನಾನು ಎತ್ತಲ್ಲ. ಸಾಲದ ವಿಚಾರದಲ್ಲಿ ನನಗೆ ತುಂಬಾ ದೊಡ್ಡ ಮಟ್ಟದಲ್ಲಿ ಯಾರೂ ಮೋಸ ಮಾಡಿಲ್ಲ ಅನಿಸುತ್ತದೆ ಎಂದು ಹೇಳಿದ್ದಾರೆ.
ಆಗ ನಾನೇ ತುಂಬಾ ಸಾಲ ಮಾಡಿಕೊಂಡಿದ್ದೆ. ಈ ಮನೆ ಉಸಿಕೊಳ್ಳಲು ಸಾಲ ಮಾಡಿದ್ದೆ. ಅದರಾಚೆಗೆ ಒಬ್ಬಳು ನನ್ನ ಫ್ರೆಂಡ್ ಅವರ ಹೆಸರು ಹೇಳಲ್ಲ ನಾನು. ಕಾಲ್ ಮಾಡಿ ಐದು ಸಾವಿರ ರೂಪಾಯಿ ಇದ್ರೆ ಹಾಕು ಅಂದಳು. ನಾನಾಗ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವುದನ್ನು ಕೂಡ ಬಿಟ್ಟಿದ್ದೆ. ಅದನ್ನು ಹೇಳಿದೆ ಚಾನೆಲ್ ಬಿಟ್ಟುಬಿಟ್ಟಿದ್ದೇನೆ. ಇರುವ ಈ ಹಣ ಹಾಕಿದರೆ ನಾಳೆ ನನ್ನ ಖರ್ಚಿಗೆ ಇರಲ್ಲ ಅಂತಾ ಹೇಳಿದೆ. ನನ್ನ ಪರಿಸ್ಥಿತಿ ಹಾಗೇ ಇತ್ತು ಕೂಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.