ಗಂಡನಿಗೆ ಡಿವೋರ್ಸ್ ಕೊಟ್ಟೆ; ಮುಂದೆ ಏನೂ ಮಾಡುವುದು ಎಂದು ಜಗ್ಗೇಶ್ ಬಳಿ ಸಲಹೆ ಕೇಳಿದ ಚೈತ್ರ

 | 
Hu

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ಶೋನಲ್ಲಿ ಚೈತ್ರಾ ವಾಸುದೇವನ್ ಅವರು ನಿರೂಪಕಿಯಾಗಿದ್ದಾರೆ. ಕಳೆದ ವಾರದ ಎಪಿಸೋಡ್‌ನಲ್ಲಿ ಅವರು ಸಹಸ್ಪರ್ಧಿಗಳ ಜೊತೆ ಒಂದು ಸ್ಕಿಟ್‌ನಲ್ಲಿಯೂ ಕಾಣಿಸಿಕೊಂಡರು. ಚೈತ್ರಾ ವಾಸುದೇವನ್ ಅವರು ನಟನೆಯನ್ನು ನಿರ್ಣಾಯಕ ವೃಂದ ಹೊಗಳಿತು.

ಆವೇಳೆ ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿಯೂ ಆಗಿರುವ ಚೈತ್ರಾ ವಾಸುದೇವನ್ ಅವರು ತಮ್ಮ ಬದುಕಿನ ಪರಿಚಯ ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.ಕಳೆದ 10 ವರ್ಷಗಳಿಂದ ಚೈತ್ರಾ ವಾಸುದೇವನ್ ಅವರು ನಿರೂಪಕಿಯಾಗಿ ಸಾಕಷ್ಟು ಇವೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯ ಸಾಕಷ್ಟು ಕಾರ್ಯಕ್ರಮಗಳಿಗೂ ನಿರೂಪಣೆ ಮಾಡಿರುವ ಅವರು ಈ ಬಾರಿ ಮೊದಲ ಬಾರಿಗೆ ಪ್ರತಿಷ್ಠಿತ ವಾಹಿನಿಯ ಕಾಮಿಡಿ ಶೋವೊಂದರ ನಿರೂಪಣೆ ಮಾಡುತ್ತಿದ್ದಾರೆ.

ನಿರೂಪಕಿ ಅನುಶ್ರೀ ಅವರು ಚೈತ್ರಾ ನಟನೆಯನ್ನು ಮೆಚ್ಚಿ, ನಿಮ್ಮ ಪರಿಚಯ ಮಾಡಿಕೊಡಿ ಎಂದಾಗ ಚೈತ್ರಾ ವಾಸುದೇವನ್ ಅವರು ನಾನು ಮೊದಲು ವಿಜೆ ಆಗಿ ಕೆಲಸ ಶುರು ಮಾಡಿದೆ. ನನ್ನದೇ ಆದ ಇವೆಂಟ್ ಕಂಪೆನಿಯೂ ಇದೆ. ಈಗಾಗಲೇ ಸಾಕಷ್ಟು ಜನರ, ಅದರಲ್ಲಿಯೂ ನಮ್ಮ ಚಿತ್ರರಂಗದ ನಾಯಕ, ನಾಯಕಿಯರ ಮದುವೆ, ನಿಶ್ಚಿತಾರ್ಥಕ್ಕೆ ಸೆಟ್ ಹಾಕಿದ್ದೀನಿ, ಅಷ್ಟೇ ಅಲ್ಲದೆ ವಾಹಿನಿಯ ಪ್ರಶಸ್ತಿ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಸೆಟ್ ಹಾಕಿದ್ದೀನಿ ಎಂದು ಹೇಳಿದ್ದಾರೆ.

ನಾನು ನನ್ನದೇ ಆದ ಇವೆಂಟ್ ಕಂಪೆನಿ ಆರಂಭಿಸಿದ್ದೆ. ಆಗ ನನ್ನ ಇಂಜಿನಿಯರಿಂಗ್ ಶಿಕ್ಷಣ ಕೂಡ ಮುಗಿದಿತ್ತು. ನಿನಗೆ ಸಂಗಾತಿ ಬೇಕು, ಆಗ ಚೆನ್ನಾಗಿರುತ್ತದೆ ಅಂತ ಅಪ್ಪ-ಅಮ್ಮ ಮದುವೆ ಮಾಡಿಸಿದರು. ಮದುವೆ ಆದ್ಮೇಲೆ ನಾನು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು. ಇಷ್ಟು ವರ್ಷ ನೋಡಿದೆ, ಸಮಸ್ಯೆ ಬಗೆಹರಿಯಲಿಲ್ಲ, ಯಾವುದು ಸರಿ ಹೋಗಲಿಲ್ಲ. ನನ್ನ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇರಲೇ ಇಲ್ಲ. 

ಆದರೆ ಅದೊಂದು ಘಟನೆ ನಡೆದು ನನ್ನನ್ನು ನಿಜಕ್ಕೂ ಕತ್ತಲೆಗೆ ನೂಕಿತು. ಕೊನೆಗೂ ನಾವು ಬೇರೆಯಾದೆವು. ವಾಹಿನಿ ನನಗೆ ಸಾಕಷ್ಟು ಕೆಲಸ ಕೊಟ್ಟಿದೆ. ಇದರಿಂದಲೇ ನನ್ನ ನೋವು ಮರೆಯುತ್ತಿದ್ದೇನೆ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ. ಅದನ್ನು ಕೇಳಿ ನಟ ಜಗ್ಗೇಶ್ ಧೈರ್ಯವಾಗಿ ಬದುಕಿ ಎಂದು ಧೈರ್ಯ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.