ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ, ಲೈವ್ ಬಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಅನುಶ್ರೀ

 | 
Ff
 ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತಮ್ಮ ಅಪ್ಪನ ಕುರಿತು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.ನೀವು ಮಾತು ಜಾಸ್ತಿ ಮಾತನಾಡುವುದು ಹೇಗೆ? ಎಲ್ಲಿ ನಿರೂಪಣೆ ಕಲಿತಿರಿ ಎಂದು ಸಂದರ್ಶಕ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅನುಶ್ರೀ ನಾನು ಮಾತು ಜಾಸ್ತಿ ಆಡುವುದೆಂದರೆ ಅದು ನನ್ನ ಅಪ್ಪನಿಂದ ಬಂದ ಒಂದೇ ಒಂದೇ ಬಳುವಳಿ. ಅವರು ತುಂಬಾ ಮಾತನಾಡುತ್ತಿದ್ದರು. ಅವರು ಕೆಲಸ ಮಾಡಿಕೊಂಡಿದ್ದ ಕಂಪೆನಿಯಲ್ಲಿ ಮಾರ್ಕೆಟಿಂಗ್‌ ನಲ್ಲಿ ಅವರು ಗೋಲ್ಡ್ ಮೆಡಲಿಸ್ಟ್. ಮಾತು ನನಗೆ ನನ್ನ ತಂದೆಯಿಂದಲೇ ಬಂದಿದ್ದು ಎಂದಿದ್ದಾರೆ.
ಒಬ್ಬ ತಂದೆಯಾದವನು ಹಿರೋ ತರ ಇರಬೇಕು. ನಮ್ಮ ತಂದೆ ನಮಗೆ ಹಿರೋ ತರ ಇರಲಿಲ್ಲ. ನನ್ನ ಅಮ್ಮನ ಜೊತೆಗೆ ಒಳ್ಳೆಯ ಗಂಡನಂತೆ ಇದ್ರಾ ನನಗದು ಗೊತ್ತಿಲ್ಲ. ಅವರು ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ಅವರ ಬ್ಯುಸಿನೆಸ್‌ , ಅವರ ಫ್ರೆಂಡ್ಸ್, ಅವರ ಸ್ಟಾಂಡರ್ಡ್‌ ಅದೇ ಜೀವನ ಆಗಿತ್ತು. ನಮ್ಮ ಜೀವನ,  ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇ ಇಲ್ಲ.
 
ಒಂದು ಸಮಯದಲ್ಲಿ ಅವರಿಗೆ ನಮ್ಮ ಜೊತೆಗೆ ಇರಲು ಇಷ್ಟ ಇರಲಿಲ್ಲ. ಅವರೇ ತೀರ್ಮಾನಿಸಿ ನಮ್ಮನ್ನು ಬಿಟ್ಟು ಹೋದರು. 25 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದರು. 25 ವರ್ಷ ಅವರಿಲ್ಲದೆ ನಾವು ಬೆಳೆದಿದ್ದು.ಅಪ್ಪ ಇಲ್ಲದೆ ಬದುಕೋದು ಮೊದಲಿಗೆ ನಮಗೆ ಕಷ್ಟವಾಯ್ತು. ಸಮಾಜ ನೋಡುವ ರೀತಿ ಬದಲಾಯ್ತು. ಅಪ್ಪ ಇಲ್ಲದ ಹೆಣ್ಣು ಮಗುವನ್ನು ಸಮಾಜ ನೋಡವ ರೀತಿಯೇ ಬೇರೆ. 
ಅಪ್ಪ ಇಲ್ಲದ ಹೆಣ್ಣು ಮಗು  ಸಂಜೆ 7 ಗಂಟೆ ಮೇಲೆ ಮನೆಗೆ ಬಂದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಮಕ್ಕಳು ಟಿಲಿವಿಷನ್‌ ಇಂಡಸ್ಟ್ರಿಗೆ ಹೋದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಹೆಣ್ಣು ಮಕ್ಕಳು ಜೀವನದಲ್ಲಿ ಸಾಧಿಸಿದರೆ ನೋಡುವ ರೀತಿಯೇ ಬೇರೆ.
 ಅಪ್ಪ ಇಲ್ಲದ ಮಗಳು ಮನೆ ಖರೀದಿ ಮಾಡಿದರೆ ನೊಡುವ ರೀತಿಯೇ ಬೇರೆ. ಅದೇ ಒಂದು ಹುಡುಗ ಆದರೆ ಅದು ಇತರರಿಗೆ ಮಾದರಿ ಎನ್ನುತ್ತಾರೆ. ಒಂದು ಹುಡುಗಿ ತೆಗೆದರೆ ಅದಕ್ಕೆ ಬೇರೆಯೇ ಹೆಸರು ನೀಡುತ್ತಾರೆ. ನಾನು ಇದೆಲ್ಲವನ್ನೂ ಅನುಭವಿಸಿದ್ದೇನೆ ಅಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.