ನನಗೆ ದರ್ಶನ್ ಬೇಡ, ಅವರು ಕೊಟ್ಟ ಗಿಫ್ಟ್ ಇರುವಾಗ ಬೇರೆ ಏನೂ ಕೂಡ ಬೇಡ ಎಂದ ಪವಿತ್ರ
Mar 7, 2025, 11:19 IST
|

ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಜೀವನ ಶೈಲಿ ಈಗ ಬದಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಅವರು ಸ್ವಲ್ಪ ದಿನ ವಿಶ್ರಾಂತಿಗೆ ಜಾರಿದ್ದು, ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರೆ. ಇದೀಗ ನಟ ದರ್ಶನ್ ಸಾಮ್ರಾಜ್ಯ ಈಗ ತಮ್ಮ ದಿನಕರ್ ತೂಗುದೀಪ ಹಾಗು ಪತ್ನಿ ವಿಜಯಲಕ್ಷ್ಮಿ ಕೈ ಸೇರಿದೆ ಎನ್ನಲಾಗುತ್ತಿದೆ.
ನಟ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಪತ್ನಿ ವಿಜಯಲಕ್ಷ್ಮಿ ಅವರು ರೇಣುಕಾಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತಾ ತಿರುಗುತ್ತಿದ್ದ ಹಲವರಿಗೆ ಗೇಟ್ ಪಾಸ್ ನೀಡುತ್ತಿದ್ದಾರೆ. ಪ್ರಮುಖವಾಗಿ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜು ಅವರಿಂದ ದರ್ಶನ್ ಅವರು ಅಂತರ ಕಾಯ್ದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಕನ್ನಡದ ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡ ಅವರು ಸಖತ್ ಮಿಂಚುತ್ತಿದ್ದಾರೆ. ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ. ಇದೀಗ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದು. ತಮ್ಮ ಬ್ಯುಸಿನೆಸ್ ಅನ್ನು ಮರು ಪ್ರಾರಂಭ ಮಾಡಿದ್ದಾರೆ.
ಸೀರೆಯಲ್ಲಿ ಸಖತ್ ಆಗಿ ಮಿಂಚುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಬ್ಯುಸಿನೆಸ್ ಅನ್ನು ಅವರುಮರು ಪ್ರಾರಂಭ ಮಾಡಿದ್ದಾರೆ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಪವಿತ್ರಾ ಗೌಡ ಅವರು ಆ ಮೇಲೆ ಬ್ಯುಸಿನೆಸ್ ಪ್ರಾರಂಭ ಮಾಡಿದ್ದರು. ಆದರೆ ಆ ಬ್ಯುಸಿನೆಸ್ ಮಧ್ಯದಲ್ಲಿ ಸಕ್ಸಸ್ ಆಗಿರಲಿಲ್ಲ. ಅಷ್ಟೇ ಅಲ್ಲ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಮೇಲೆ ಈ ವ್ಯವಹಾರ ಪೂರ್ತಿ ತಲೆಕೆಳಗಾಗಿತ್ತು. ಈದೀಗ ನನ್ನ ಪ್ರಪಂಚ ಮಗಳು ಮಾತ್ರ ಎಂದು ಹೇಳಿ ದರ್ಶನ್ ಅವರನ್ನು ದೂರ ಇರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.