ಚಂದನ್ ಶೆಟ್ಟಿಗಿಂತ ಹೆಚ್ಚು ಸಂಪಾದನೆ ನಾನು ಮಾಡುತ್ತೇನೆ; ಡಿವೋರ್ಸ್ ಕೊಟ್ಟಿದ್ದು ನಾ ನೆ

 | 
Jui

ಸಿನಿಮಾ ತಾರೆಯರ ಡೇಟಿಂಗು .. ಬ್ರೇಕಪ್ಪು .. ಲವ್ವು- ಡವ್ವುಗಳಿಗೇನೂ ಕಡಿಮೆ ಇಲ್ಲ. ನಿನ್ನೆ ಮೊನ್ನೆ ಜೊತೆ ಜೊತೆಯಲ್ಲಿ ಓಡಾಡಿದರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇವೆಲ್ಲವೂ ಸೆಲೆಬ್ರೆಟಿಗಳ ಪರ್ಸನಲ್ ಜೀವನದಲ್ಲಿ ಕಾಮನ್ನು. 

ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸದ್ಯದ ತಾಜಾ ಉದಾಹರಣೆ.ಹೌದು. ಹೆಚ್ಚು ಕಡಿಮೆ ಐದು ವರ್ಷದ ಹಿಂದೆ ಸರ್ಕಾರಿ ಪ್ರಾಯೋಜಿತ ವೇದಿಕೆ ಮೈಸೂರಿನ ಯುವ ದಸರಾದಲ್ಲಿ ಅತ್ಯಂತ ಹುರುಪಿನಿಂದ, ನಿವೇದಿತಾ ಎದುರು ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಚಂದನ್ ಶೆಟ್ಟಿ,ಆ ನಂತರ ತಮ್ಮ ಕನಸಿನ ಕನ್ಯೆ ನಿವೇದಿತಾ ಅವರ ಜೊತೆ ಫೆಬ್ರವರಿ 26- 2020ರಲ್ಲಿ ಮದುವೆಯಾದರು.

 ಸಂಭ್ರಮ-ಸಡಗರದಿಂದ ತಮ್ಮ ಮನದ ಮಾತನ್ನೂ ಹಂಚಿಕೊಂಡಿದ್ದರು. ಮದುವೆ ಆಗಿದ್ದು ನನ್ನ ಜೀವನದಲ್ಲೇ ಸಂತಸದ ದಿನ. ನಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಿದ್ದೇನೆ. ಇದು ತುಂಬ ಖುಷಿ ಕೊಟ್ಟಿದೆ ಎಂದಿದ್ದ ನಿವೇದಿತಾ ಆ ನಂತರ ನನ್ನ ಕನಸು ನನಸಾಗಿದೆ. ಸಣ್ಣ ಸಣ್ಣ ವಿಷಯಗಳು ನನಗೆ ತುಂಬಾ ದೊಡ್ಡದು. ಜೀವನಪೂರ್ತಿ ಹೀಗೆ ಇರುತ್ತೇವೆ ಎಂಬ ವಿಶ್ವಾಸವನ್ನೂ ಕೂಡ ನಿವೇದಿತಾ ಗೌಡ ವ್ಯಕ್ತಪಡಿಸಿದ್ದರು.

ಆದರೆ ಈಗ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ,ಮನಸು ಮನಸು ದೂರಾ ಪ್ರೀತಿ ಹೃದಯ ಭಾರ ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ.ಇವರಿಬ್ಬರ ವಿಚ್ಛೇದನವನ್ನ ಮೊದಲೇ ಊಹಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ತುಂಬಾ ಗಂಭೀರವಾಗಿ ಚರ್ಚೆಯನ್ನೂ ಮಾಡುತ್ತಿದೆ. 

ನಿವೇದಿತಾ ಗೌಡ ಅವರಿಗೆ ರೀಲ್ಸ್ ಮೇಲಿರುವ ವ್ಯಾಮೋಹವೇ ಸಂಸಾರ ಮುರಿದು ಬೀಳಲು ಪ್ರಮುಖ ಕಾರಣ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದೆ. ಚಂದನ್ ಗಿಂತ ನಾನೇ ಹೆಚ್ಚು ದುಡಿತೇನೆ ಎಂದು ಕೂಡಾ ಅವರು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.