ಸಿನಿಮಾಗಾಗಿ ಸರ್ವಸ್ವವನ್ನೆ ಕೊಡಬೇಕಾಯಿತು; ಕನ್ನಡದ ಚೆ ಲುವೆಯ ದು ಖದ ಮಾತು
Aug 17, 2024, 11:23 IST
|
ಚಿತ್ರರಂಗವೇ ಹಾಗೆ ಯಾವಾಗ ಯಾರಿಗೆ ಮಣೆ ಹಾಕುತ್ತದೆ ತಿಳಿಯುವುದೇ ಇಲ್ಲ.ಕೊಯಮತ್ತೂರಿನವರಾದ ದಿವ್ಯಭಾರತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಸಧ್ಯ ಸಿನಿಲೋಕದಲ್ಲಿ ರಾರಾಜಿಸುತ್ತಿದ್ದಾರೆ.ನಟಿ ದಿವ್ಯಾ ಭಾರತಿ ಮೊದಲ ಚಿತ್ರದಲ್ಲೇ ತಮ್ಮ ಅಪರೂಪ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದರು.
ಸಿನಿಮಾ ಮಾಡುವುದಕ್ಕಿಂತ ಮೊದಲು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರ್ ಮೂಲಕ ಚಿರಪರಿಚಿತರಾಗಿದ್ದರು. ಜಿ.ವಿ.ಪ್ರಕಾಶ್ ಅಭಿನಯದ ಬ್ಯಾಚುಲರ್ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ದಿವ್ಯ ಪಾದಾರ್ಪಣೆ ಮಾಡಿದರು. ಬ್ಯಾಚುಲರ್" ನಂತರ ಅವರು ಬಿಗ್ ಬಾಸ್ ಮುಗೇನ್ ರಾವ್ ಜೊತೆಗೆ ಮದಿಲ್ ಮೇಲ್ ಕಾದಲ್ ನಲ್ಲಿ ನಟಿಸಿದರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾಲೇಜು ದಿನಗಳಲ್ಲಿ ತನ್ನ ದೇಹದ ಆಕಾರದ ಬಗ್ಗೆ ಗೇಲಿ ಮಾಡಲಾಗಿತ್ತು ಅಂತ ದಿವ್ಯ ಬಹಿರಂಗಪಡಿಸಿದ್ದಾರೆ. ಅಲ್ಲದೆ, ನಗೆ ಫಂಡಾ ಬಾಟಲ್,ಅಸ್ಥಿಪಂಜರ,ಬಿಗ್ ಬಟ್ ಗರ್ಲ್ ಸೇರಿದಂತೆ ತುಂಬಾ ಕೆಟ್ಟ ಕಾಮೆಂಟ್‌ಗಳು ಬಂದವು ಅಂತ ಹೇಳಿಕೊಂಡಿದ್ದಾರೆ ನಟಿ.
ಇದೆಲ್ಲವೂ ನನ್ನ ಮೇಲೆ ಪರಿಣಾಮ ಬೀರಿತು. ನಾನೇ ನನ್ನ ದೇಹವನ್ನು ದ್ವೇಷಿಸುವಂತೆ ಮಾಡಿತು. ಜನರ ಮುಂದೆ ನಡೆಯಲು ಕೂಡ ಹೆದರುತ್ತಿದ್ದೆ. ನಂತರ 2015 ರಲ್ಲಿ, ನಾನು Instagram ಖಾತೆಯನ್ನು ತೆರೆದೆ. ನನ್ನ ಮಾಡೆಲಿಂಗ್ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನ ಬದಲಾವಣೆ ನೋಡಿ ಎಲ್ಲರೂ ಹೊಗಳಲು ಪ್ರಾರಂಭಿಸಿದರು.
ವಿಭಿನ್ನ ದೇಹದ ಆಕಾರವನ್ನು ಹೊಂದಿದ್ದರೂ ಪರವಾಗಿಲ್ಲ, ಎಲ್ಲಾ ಟೀಕೆಗಳ ನಡುವೆ ನೀವು ನಿಮ್ಮನ್ನು ಹೇಗೆ ಪ್ರೀತಿಸುತ್ತೀರಿ ಎಂಬುವುದು ಮುಖ್ಯ. ಇದನ್ನು ನನಗೆ ತಿಳಿಸಲು ಆ ದಿನಗಳಲ್ಲಿ ಯಾರಾದರೂ ಇದ್ದಿದ್ದರೆ ಚೆನ್ನಾಗಿತ್ತು.. ಅಂತ ನಟಿ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.