ನನಿಗೆ ಮೋಸ ಆಗಿದೆ, ಡಾಲಿ ಮದುವೆಯಾದ ಒಂದೇ ದಿನಕ್ಕೆ ಮೌನ ಮುರಿದ ಅಮೃತ ಅಯ್ಯರ್
Feb 19, 2025, 07:34 IST
|

ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಹಾಗೂ ಹೊಯ್ಸಳ ಈ ಮೂರು ಚಿತ್ರಗಳಲ್ಲಿ ನಟ ಡಾಲಿ ಧನಂಜಯ್‌ಗೆ ಜೋಡಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ನಟಿ ಅಮೃತಾ ಅಯ್ಯಂಗಾರ್, ಡಾಲಿ ಮದುವೆ ಸಂಭ್ರಮದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆತ್ಮೀಯ ಸ್ನೇಹಿತನ ಮದುವೆಯ ಯಾವ ಕಾರ್ಯಕ್ರಮದಲ್ಲಿಯೂ ಅಮೃತಾ ಕಾಣಿಸಿಕೊಂಡಿಲ್ಲ ಏಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಕೆಲವರನ್ನು ಮಾತ್ರ ಹೊರತುಪಡಿಸಿ ಬಹುತೇಕ ಇಡೀ ಕನ್ನಡ ಚಿತ್ರರಂಗದ ಗಣ್ಯರು ನಟ ಧನಂಜಯ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ನಟಿ ಅಮೃತಾ ಅಯ್ಯಂಗಾರ್ ಮಾತ್ರ ಯಾಕೆ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ನಟ ಧನಂಜಯ್ ಮದುವೆ ದಿನವೇ ನಟಿ ಅಮೃತಾ ಅಯ್ಯಂಗಾರ್ ತನ್ನಿಷ್ಟದ ವ್ಯಕ್ತಿಯನ್ನು ಭೇಟಿಯಾಗಲು ತೆರಳಿದ್ದಾರೆ.
https://www.youtube.com/live/m7qqTK1BTT4?si=K6M5Rqpqv1xEunkN
ಪ್ರೀತಿ ಪಾತ್ರರನ್ನು ಭೇಟಿಯಾಗಿದಷ್ಟೇ ಅಲ್ಲದೇ ಅವರ ಜೊತೆಗಿನ ಫೋಟೋವನ್ನು ಕೂಡ ಮೃತಾ ಅಯ್ಯಂಗಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ತಮ್ಮದೇ ಆದ ಸ್ನೇಹಿತರ ಬಳಗವನ್ನು ಹೊಂದಿರುವ ಅಮೃತಾ ಅಯ್ಯಂಗಾರ್‌ಗೆ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಆತ್ಯಾಪ್ತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಮೃತಾ ಅಯ್ಯಂಗಾರ್ ಹಾಗೂ ರಮ್ಯಾ ಇಬ್ಬರೂ ಆತ್ಮೀಯ ಸ್ನೇಹಿತರು. ಇದೀಗ ಡಾಲಿ ಮದುವೆಯ ದಿನವೇ ಅಮೃತಾ ಅಯ್ಯಂಗಾರ್ ಮೋಹಕತಾರೆ ರಮ್ಯಾ ಅವರನ್ನು ಭೇಟಿಯಾಗಿ ಫೋಟೋ ಶೇರ್ ಮಾಡಿದ್ದಾರೆ.
ಇನ್ನು ರಮ್ಯಾ ಜೊತೆಗಿನ ಫೋಟೋ ಶೇರ್ ಮಾಡಿರುವ ನಟಿ ಅಮೃತಾ ಅಯ್ಯಂಗಾರ್‌ಗೆ ಕಮೆಂಟ್‌ನಲ್ಲಿ ಡಾಲಿ ಧನಂಜಯ್ ಮದುವೆಗೆ ಯಾಕೆ ಹೋಗಿಲ್ಲ ಎನ್ನುವ ಒಂದೇ ಪ್ರಶ್ನೆಯನ್ನು ಬಹುತೇಕರು ಕೇಳಿದ್ದಾರೆ. ಅಲ್ಲದೇ ಮನಸ್ಸಿನೊಳಗೆ ಕಿರುಚಾಡುತ್ತಿದ್ದೀನಿ ಎನ್ನುವ ನಿಮ್ಮ ಈ ಕ್ಯಾಪ್ಷನ್‌ಗೆ ತುಂಬಾ ಅರ್ಥ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಯಾವ ಕಮೆಂಟ್‌ಗೂ ನಟಿ ಅಮೃತಾ ಅಯ್ಯಂಗಾರ್ ಉತ್ತರಿಸಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.