ನನ್ನ‌ ಜೀವನದಲ್ಲೇ ಕಾಂತಾರದಂತಹ ಸಿನಿಮಾ ನೋಡಿಲ ಎಂದ ಮಲಯಾಳಂ ಸಿನಿ ಪ್ರೇಕ್ಷಕರು,

 | 
Kantara

ಕಾಂತಾರ ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಟಿಕೆಟ್ ಮಾರಾಟವಾಗಿದೆ. ಈ ನಡುವೆ ಸಿನಿಮಾ ನೋಡಿದ ಪ್ರೇಕ್ಷಕರು ದೊಡ್ಡ ಮಟ್ಟದ ರಿವ್ಯೂ ಕೊಟ್ಟಿದ್ದಾರೆ. ಇಂತಹ ‌ಸಿನಿಮಾ ನಮ್ಮ ಜೀವ ಮಾನದಲ್ಲೇ ನೋಡಿ ಎನ್ನುತ್ತಿದ್ದಾರೆ ಮಲಯಾಳಂ ಸಿನಿ ಪ್ರೇಕ್ಷಕರು.

ಹೌದು, ಕಾಂತಾರ ಒಂದು ದಂತಕಥೆ ಸಿನಿಮಾ, ಇಲ್ಲಿ ದೈವ ಹಾಗೂ ಮಾನವರ ನಡುವೆ ಇರುವುದು ಒಡನಾಟ. ದೈವ ದೇವರು ಯಾಕೆ ಈ ಭೂಮಿಗೆ ಬಂದರು ಎಂಬ ವಿಚಾರವನ್ನು ರಿಷಭ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಈ ಸಿನಿಮಾಗಾಗಿ ಸಾಕಷ್ಟು ಕಷ್ಟಪಟ್ಟು ‌ಕೆಲಸ ಮಾಡಿದ್ದ ರಿಷಭ್ ಶೆಟ್ಟಿ ಇದೀಗ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದ್ದಾರೆ.

ಇನ್ನು ದೇಶಾದ್ಯಂತ ಬಿಡುಗಡೆಯಾದ ಈ ಸಿನಿಮಾದಗೆ ಸಾಕಷ್ಟು ಮೆಚ್ಚುಗೆ ಕೇಳಿ ಬರುತ್ತಿದೆ‌. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇಂತಹ ಸಿನಿಮಾ ಯಾರು ಕೂಡ ಮಾಡಿಲ್ಲ ಎನ್ನುತ್ತಿದ್ದಾರೆ ಸಿನಿಮಾ ವೀಕ್ಷಕರು.

ಇನ್ನು ರಿಷಭ್ ಶೆಟ್ಟಿ ಅವರು ಈ ಸಿನಿಮಾ ಮೂಲಕ ರಾಷ್ಟ್ರೀಯ ಮಟ್ಟದ ಅವಾರ್ಡ್ ಪಡೆಯುತ್ತಾರೆ ಎಂದು ಇದೀಗ ಸಿನಿಮಾ ನೋಡಿದ ಪ್ರೇಕ್ಷಕ ಬಂಧುಗಳು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದೆ.