ನನ್ನ ಮನೆಯಲ್ಲಿ ನಾನು ನಾಗರಹಾವು ಸಾಕಿದ್ದೇನೆ; ಸುಧಾರಾಣಿ
Aug 23, 2024, 13:29 IST
|
ನಟಿ ಸುಧಾರಾಣಿ ಇದೀಗ ಸೀರಿಯಲ್ ಪ್ರೇಮಿಗಳ ಮೆಚ್ಚಿನ ನಟಿ. ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ತುಳಸಿ ಅಮ್ಮ ಆಗಿಯೇ ಮಿಂಚುತ್ತಿದ್ದಾರೆ ನಟಿ. ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದ ಬ್ಯೂಟಿ ಕ್ವೀನ್ ಇವರು. 13ನೇ ವಯಸ್ಸಿನಲ್ಲಿಯೇ ನಾಯಕಿಯಾದ ಕನ್ನಡದ ಏಕೈಕ ನಟಿ ಕೂಡ. ನಡುವೆ ಬ್ರೇಕ್ ಪಡೆದು ಮತ್ತೆ ಕಮ್ಬ್ಯಾಕ್ ಮಾಡಿ ಈಗಲೂ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇದೀಗ ನಟಿ, ತಮ್ಮ ಜೀವನದ ಕೆಲವೊಂದು ಕುತೂಹಲದ ಘಟ್ಟದ ಕುರಿತು ಮಾತನಾಡಿದ್ದಾರೆ. ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ನಟಿ ತಮ್ಮ ಅಣ್ಣಂದಿರ ಕುರಿತು ಮಾತನಾಡಿದ್ದಾರೆ. ನನಗೆ ಇಬ್ಬರು ಅಣ್ಣಂದಿರು. ಅರುಣ್ ಮತ್ತು ಮುರಳಿ. ಅರುಣ್ ಥೇಟ್ ನನ್ನ ಅಮ್ಮನ ಥರನೇ ಪ್ರೊಟೆಕ್ಟಿವ್. ಅಂದ್ರೆ ನನ್ನ ಅಮ್ಮ ನನಗೆ ಹೇಗೆ ರಕ್ಷಣೆ ನೀಡ್ತಾರೋ ಅದೇ ರೀತಿ ಅರುಣ್ ಅಣ್ಣ ಕೂಡ. ಯಾವಾಗ್ಲೂ ನನ್ನ ರಕ್ಷಣೆಗೆ ನಿಲ್ತಾನೆ.
ಆದರೆ ಮುರುಳಿ ಮಾತ್ರ ತುಂಬಾ ಗೋಳು ಹೊಯ್ದುಕೊಳ್ತಿದ್ದ ಎನ್ನುತ್ತಲೇ ಈಗ ಅಣ್ಣ ಮುರುಳಿಯ ಕೆಲವೊಂದು ಇಂಟರೆಸ್ಟಿಂಗ್ ವಿಷ್ಯ ನಟಿ ಸುಧಾರಾಣಿ ಹೇಳಿದ್ದಾರೆ.ಮುರುಳಿಗೆ ಪ್ರಾಣಿ ಪಕ್ಷಿ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ನಮ್ ಮನೆ ಮಿನಿ ಝೂ ರೀತಿ ಇತ್ತು. ಅಲ್ಲಿ ಸಿಕ್ಕಾಪಟ್ಟೆ ಹಕ್ಕಿ, ಪ್ರಾಣಿ ಎಲ್ಲಾ ಇದ್ವು. ಪಾರಿವಾಳ, ಗಿಳಿ, ಮೊಲ, ನಾಯಿ, ಬೆಕ್ಕು, ಗುಬ್ಬಚ್ಚಿ, ಅಳಿಲು ಇನ್ನು ಏನೇನೋ ಇದ್ವು. ಇವೆಲ್ಲಾ ಇದ್ದುದು ಗೊತ್ತೇ ಇತ್ತು. ಆದ್ರೆ ಡೇಲಿ ತೆಂಗಿನ ಚಿಪ್ಪಿನಲ್ಲಿ ಹಾಲು ಇಟ್ಟುಕೊಂಡು ಟೆರೇಸ್ಗೆ ಹೋಗ್ತಿದ್ದ.
ಯಾಕೆ ಅಂತನೇ ಗೊತ್ತಿರಲಿಲ್ಲ. ಆಮೇಲೆ ಹಿಂದೆನೇ ಹೋಗಿ ನೋಡಿದ್ರೆ ಅಲ್ಲಿತ್ತು ನಾಗರಹಾವು ಎಂದು ಶಾಕಿಂಗ್ ವಿಷ್ಯ ತಿಳಿಸಿದ್ದಾರೆ ಸುಧಾರಾಣಿ. ಆ ಹಾವಿಗೆ ವಿಷದ ಹಲ್ಲು ಕಿತ್ತು ಹಾಕಲಾಗಿತ್ತು ಎನ್ನಿ. ಆದ್ರೂ ಅಣ್ಣಂಗೆ ಆ ಹಾವಿನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇತ್ತು. ಡೇಲಿ ಅದಕ್ಕೆ ಹಾಲು ಹಾಕ್ತಿದ್ದ ಎಂದಿದ್ದಾರೆ. ಆಗಲೇ ಅಪ್ಪ-ಅಮ್ಮ ಮತ್ತೆ ನಮಗೆಲ್ಲಾ ಗೊತ್ತಾಗಿದ್ದು, ಅವನು ಹಾವುನೂ ಸಾಕ್ತಾ ಇದ್ದಾನೆ ಅಂತ. ಹಾಗಿದ್ದ ನಮ್ಮಣ್ಣ ಎಂದಿದ್ದಾರೆ ಸುಧಾರಾಣಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.