ನಾನು ಬೇಡ ಅಂದರು ಯುವ ಬಿಡಲಿಲ್ಲ, ಹೆಂಡತಿ ಬಿಡೋದಕ್ಕೆ ನಾನು ಕಾರಣ ಅಲ್ಲ; ಸಪ್ತಮಿ ಗೌಡ

 | 
Uuu

ಯುವ ರಾಜ್‌ಕುಮಾರ್‌  ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದರು ಸಪ್ತಮಿ ಗೌಡ. ಇದರ ನಡುವೆ ಈಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರಿದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು ಎಂಬ ಆಡಿಯೊ ವೈರಲ್‌ ಆಗಿದೆ.

ʻಸರ್ ನಿಮಗೆ ಈಗಾಗಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಯುವ ಮದ್ವೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ಹೌದು ಇದು ನಿಮ್ಮ ಸೆಟ್‌ನಲ್ಲಿ ಆಯ್ತು ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್ ಪರವಾಗಿಲ್ಲ. ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿಯನ್ನೂ ಕೇಳಿ ಎಂಬ ಮಾತು ಆಡಿಯೊದಲ್ಲಿದೆ.

ಗುರುದು ಫಸ್ಟ್ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ಎಲ್ಲರೂ ಕಷ್ಟ ಪಟ್ಟು ಮಾಡಿರುವ ಸಿನಿಮಾ. ನಾನು ಮಧ್ಯೆ ಬರಲ್ಲ ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ. ಸರ್. ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಆದರೆ ನಿಜವಾಗಿಯೂ ನಾನು ನಂಬಿ ಮಾಡಿದ್ದು ಸರ್ ಅದನ್ನ. ಗುರು ಬಂದು ನನ್ನ ಹತ್ರ ಅಷ್ಟು ಹೇಳಿದ ಮೇಲೆಯೇ ನಾನು ಮುಂದುವರಿದೆ. 

ಇಲ್ಲಾಂದ್ರೆ ನಾನು… ಸಾರಿ ಸರ್, ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಅಷ್ಟೇ ಎಂಬ ಮಾತುಗಳು ಆಡಿಯೊದಲ್ಲಿದೆ.ಯುವ ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.