ನನಗೆ ಡ್ರೋನ್ ಪ್ರತಾಪ್ ಬೇಕು ಎಂದು ಹಠ ಹಿಡಿದ ಯುವತಿ, 'ಕಾಗೆ ಎಂದ ನೆಟ್ಟಿಗರಿಗೆ ಶಾ.ಕ್

 | 
Nzjz

ಈಗ ಬಿಗ್​ಬಾಸ್​​ ಖ್ಯಾತಿಯ ಡ್ರೋನ್​ ಪ್ರತಾಪ್​ದ್ದೇ ಹವಾ. ಇವರಿಗಾಗಿ ಫ್ಯಾನ್ಸ್​ ಪೇಜ್​ ಅಸಂಖ್ಯ ಹುಟ್ಟುಕೊಂಡಿದೆ. ಪ್ರತಾಪ್​ ಎಲ್ಲಿ ಹೋದರೂ ಅದರ ಬಗ್ಗೆ ಅಪ್​ಡೇಟ್​ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗಿಯೇ ಇದೆ. ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ಗೆ, ಬಿಗ್​ಬಾಸ್​ ಕೃಪೆಯಿಂದಾಗಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದ ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 

ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಡ್ರೋನ್​ ಪ್ರತಾಪ್​ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಕೂಡ ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. ಈ ಸಮಯದಲ್ಲಿ ಫ್ಯಾನ್ಸ್​ ಇವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ನೀವೆಲ್ಲಾ ತುಂಬಾ ಇಷ್ಟ ಎಂದಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಹೊಸಪೇಟೆಯ ಯುವತಿಯರು ಡ್ರೋನ್​ ಪ್ರತಾಪ್​ ಅವರಿಗೆ, ನೀವು ಎಂದರೆ ತುಂಬಾ ಇಷ್ಟ.

ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್​ ಪ್ರತಾಪ್​ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ ಇದನ್ನು ಕೇಳಿ ಡ್ರೋನ್​ ಪ್ರತಾಪ್​ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.