ವಿರಾಟ್ ಕೊಹ್ಲಿ ಸಿಗುವ ಮುನ್ನವೇ ನಾನು‌ ಗರ್ಭಿಣಿ ಆಗಿದ್ದೆ; ಶಾಕಿಂ ಗ್ ಹೇಳಿಕೆ ‌ಕೊಟ್ಟ ಅನುಷ್ಕಾ

 | 
H

ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು. ಅದಾದ ಬಳಿಕ 2021 ರಲ್ಲಿ ವಿರುಷ್ಕಾ ಜೋಡಿ ಹೆಣ್ಣು ಮಗುವಿಗೆ ಪೋಷಕರಾದರು. ಆ ಮಗುವಿಗೆ ವಾಮಿಕಾ ಎಂದು ನಾಮಕರಣ ಮಾಡಿದ್ದಾರೆ.

ಇನ್ನು ಈ ಜೋಡಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ಗಳಲ್ಲಿ ವಾಮಿಕಾ ಫೋಟೋಗಳನ್ನು ಹಂಚಿಕೊಂಡರೂ ಸಹ, ಫೇಸ್ ರಿವೀಲ್ ಮಾಡಿಲ್ಲ.ಒಂದೆಡೆ ಅನುಷ್ಕಾ ತನ್ನ ಮಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರು. ಇನ್ನೊಂದೆಡೆ ತನ್ನ ಕೆಲಸದ ಬಗ್ಗೆಯೂ ಅಷ್ಟೇ ಗಮನ ಹರಿಸುತ್ತಿದ್ದರು. ಅಷ್ಟೇ ಅಲ್ಲ, ವಾಮಿಕಾಗೆ ಜನ್ಮ ನೀಡಿದ ಮೂರು ತಿಂಗಳೊಳಗೆ ಅನುಷ್ಕಾ ಮತ್ತೆ ಕೆಲಸಕ್ಕೆ ತೆರಳಿದ್ದರು.

ಏಪ್ರಿಲ್ ತಿಂಗಳಲ್ಲಿ, ಅನುಷ್ಕಾ ತನ್ನ ಮೇಕಪ್ ರೂಂ ಫೋಟೋ ಕೂಡ ಹಂಚಿಕೊಂಡಿದ್ದರು. ಆದರೆ ಇವೆಲ್ಲದಕ್ಕೂ ಮಿಗಿಲಾಗಿ ಆಕೆ ಒಬ್ಬ ಶ್ರೇಷ್ಠ ತಾಯಿಯಾಗಲು ಓರ್ವ ನಟ ಕಾರಣ ಎಂದು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ. ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ. ರಣಬೀರ್ ಕಪೂರ್ ಮಗುವಾಗಿದ್ದ, ಆತನನ್ನು ನೋಡಿಕೊಳ್ಳುವ ಮೂಲಕವೇ ತಾನು ಒಳ್ಳೆಯ ತಾಯಿಯಾಗಿದ್ದೆ ಎಂದು ಅನುಷ್ಕಾ ಹೇಳಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌’ನಲ್ಲಿ  ಮೊದಲು ಒಟ್ಟಿಗೆ ಕಾಣಿಸಿಕೊಂಡರು.ನನ್ನ ಬ್ಯಾಗ್ ಓಪನ್ ಮಾಡೋದು, ಫೋನ್‌’ನಲ್ಲಿ ಬ್ಯುಸಿ ಇದ್ದರೆ, ಏನು ಮಾಡುತ್ತಿದ್ದೇನೆ ಎಂದು ನೋಡೋದು. ಹೀಗೆ ಅನೇಕ ರೀತಿಯಲ್ಲಿ ಕೀಟಲೆ ಮಾಡುತ್ತಿದ್ದ. 

ಇದನ್ನೆಲ್ಲಾ ನೋಡಿದಾಗ ಮದುವೆಗೂ ಮುಂಚೆಯೇ ನಾನು ತಾಯಿಯಾಗಿ ಆತನನ್ನು ಸಹಿಸಿಕೊಂಡಿದ್ದೆ ಅನಿಸುತ್ತದೆ. ರಣಬೀರ್ ಕಪೂರ್ ಜೊತೆ ಕಳೆದ ಕ್ಷಣಗಳೇ ಅದಕ್ಕೆ ಕಾರಣ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.