ಚಿತ್ರರಂಗಕ್ಕೆ ಬರುವ ಮುನ್ನ ಸಣ್ಣ ಇದ್ದೆ, ಈಗ ದಪ್ಪ ಆಗಿದ್ದೀನಿ ಇಲ್ಲಿ ತ್ಯಾಗ ಅನಿವಾರ್ಯ; ನಿತ್ಯಾ ಮೆನನ್
Oct 25, 2024, 15:42 IST
|
ಗುಂಗುರು ಕೂದಲಿನ ಚಲುವೆ ,ಜೋಶ್, ಮೈನಾ ಸಿನಿಮಾಗಳ ಮನೆಗೆದ್ದಿರೋ ನಿತ್ಯಾ ಮೆನನ್‌ಗೆ ಪರಭಾಷೆಯಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ದೇಹದ ಅಂಗಾಂಗಗಳ ಬಗ್ಗೆ ತಾವು ಎದುರಿಸಿದ ಟೀಕೆಯ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ.
ತೆಲುಗು ಸಿನಿಮಾವೊಂದರಲ್ಲಿ ನಿತ್ಯಾ ನಟಿಸುವಾಗ ಅವರ ಗುಂಗುರು ಕೂದಲನ್ನು ಯಾರು ಇಷ್ಟಪಡಲಿಲ್ಲವಂತೆ. ನಾನು ಫಸ್ಟ್ ಟೈಮ್ ಸೆಟ್‌ಗೆ ಬಂದಾಗ ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ನಾಯಕಿ ಅಂದ್ಮೇಲೆ ದೇಹದ ತೂಕದ ಬಗ್ಗೆ ಮಾತನಾಡಿದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.
ನಾನು ದಪ್ಪ ಮತ್ತು ಕುಳ್ಳಗೆ ಇದ್ದೇನೆ ಎಂದು ಎಲ್ಲರೂ ಅಪಹಾಸ್ಯ ಮಾಡಿದರು. ನನಗೆ ಗುಂಗುರು ಕೂದಲು ಮತ್ತು ದೊಡ್ಡ ಹುಬ್ಬು ಇದೆ ಎಂದು ಅನೇಕರು ಟೀಕೆ ಮಾಡಿದರು. ಯಾರನ್ನಾದರೂ ಅವರ ರೂಪದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಎಂದಿದ್ದಾರೆ. ಅದು ಅವರ ಕೀಳು ಮಟ್ಟದ ಮನಸ್ಥಿತಿ ಎಂದು ಖಡಕ್ ಆಗಿ ನಿತ್ಯಾ ಮಾತನಾಡಿದ್ದಾರೆ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಟಿ ಹೇಳಿದ್ದಾರೆ.
ಇನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಮಹಿಳೆಯರ ಸೌಂದರ್ಯ ಅಳೆಯುವ ಮಾನದಂಡಗಳಲ್ಲಿ ಕೂದಲು ಕೂಡ ಒಂದು. ನಾನು ತೆಲುಗು ಸಿನಿಮಾದಲ್ಲಿ ಕರಿಯರ್ ಆರಂಭಿಸಿದಾಗ ಎಲ್ಲರೂ ನನ್ನ ಗುಂಗುರು ಕೂದಲನ್ನು ಟೀಕಿಸಿದ್ದರು. ಇದೆಂಥ ಕೂದಲು? ಇಷ್ಟೊಂದು ವಿಚಿತ್ರವಾಗಿದೆ ಎನ್ನುತ್ತಿದ್ದರು. ಆದರೆ ಈಗ ಕರ್ಲಿ ಕೂದಲನ್ನೇ ಎಲ್ಲರು ಇಷ್ಟಪಡುತ್ತಾರೆ. ನೇರ ಕೂದಲನ್ನೇ ಗುಂಗುರು ಮಾಡಿಕೊಳ್ಳುತ್ತಾರೆ. ಆದರೆ ಆಗ ಈ ರೀತಿ ಇರಲಿಲ್ಲ ಎಂದು ನಿತ್ಯಾ ಮೆನನ್ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.