ಯಶ್ ಜೊತೆ ನಾನು ನಟಿಸಲ್ಲ; ಟಾಕ್ಸಿಕ್ ಸಿನಿಮಾದಿಂದ Backout ಆದ ಕರೀನಾ ಕಪೂರ್

 | 
Hu

ರಾಕಿಂಗ್ ಸ್ಟಾರ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಟಾಕ್ಸಿಕ್ ಚಿತ್ರದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಿಂದ ಬಂದಿದೆ.

ಕರೀನಾ ಕಪೂರ್ ಯಾವಾಗ ಚಿತ್ರಕ್ಕೆ ಆಯ್ಕೆ ಆದರು? ಯಾವಾಗ ಹೊರ ಬಂದರು? ಇನ್ನು ಸಿನಿಮಾ ಚಿತ್ರೀಕರಣ ಆರಂಭವಾಗದ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗಿರುವಾಗ ಕರೀನಾ ಚಿತ್ರದಿಂದ ಹೊರಬರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ ಟಾಕ್ಸಿಕ್ ಚಿತ್ರದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ಕರೀನಾ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು.

 ಬಹಳ ಪವರ್‌ಫುಲ್ ಪಾತ್ರ ಅದು ಎನ್ನುವ ಚರ್ಚೆ ನಡೆದಿತ್ತು.ಕರೀನಾ ಕಪೂರ್ ಟಾಕ್ಸಿಕ್ ಚಿತ್ರದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಆಕೆ ಒಂದು ಸೌತ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿರುವುದಾಗಿ ವರದಿ ಆಗಿತ್ತು. ಆದರೆ ಅದು ಟಾಕ್ಸಿಕ್ ಸಿನಿಮಾ ಎಂದು ಖಚಿತವಾಗಿರಲಿಲ್ಲ. 

ಸದ್ಯ ಡೇಟ್ಸ್ ಸಮಸ್ಯೆಯಿಂದ ಕರೀನಾ ಕಪೂರ್ ಚಿತ್ರದಿಂದ ಹೊರ ಬರುತ್ತಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಬಹಳ ದೊಡ್ಡ ಪಾತ್ರ. ಹಾಗಾಗಿ ಸಾಕಷ್ಟು ದಿನಗಳ ಕಾಲ್‌ಶೀಟ್ ಬೇಕಿತ್ತು. ಆದರೆ ಕರೀನಾ ಕಪೂರ್ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಯಶ್ ಡೇಟ್ಸ್ ಜೊತೆಗೆ ಆಕೆಯ ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ. ಬಹಳ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದ್ದಾಗ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.