ಇವನನ್ನು ಜೈ ಲಿಗೆ ಹಾಕುವ ತನಕ ನಾನು ಬಿಡಲ್ಲ; ಡಿ ಬಾಸ್ ಬಗ್ಗೆ ಮಾತಾಡುತ್ತಾನಾ ಇವುನೂ

 | 
Hh

ರಾಜ್ಯಾದಂತ್ಯ ಬಹಳ ಸದ್ದು ಮಾಡಿದ್ದ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನಟಿ ಸುಮಾರು ಮೂರು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಇದೀಗ ಈ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಸಂಪೂರ್ಣವಾಗಿ ಪ್ರಕರಣದಿಂದ ಹೊರಬಂದಿದ್ದಾರೆ.

ತಾವು ಜೈಲು ವಾಸ ಅನುಭವಿಸುವ ವೇಳೆ ತಮ್ಮ ಬಗ್ಗೆ ಆರೋಪ ಮಾಡಿದ ಪ್ರತಿಯೊಬ್ಬರ ಬಗ್ಗೆ ನಟಿ ಸಂಜನಾ ಗಲ್ರಾನಿ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂತಹ ಸಮಯದಲ್ಲಿ ತಮ್ಮ ಬಗ್ಗೆ ಅತೀಯಾದ ಆರೋಪಗಳನ್ನು ಮಾಡಿದ ಬಿಗ್‌ಬಾಸ್‌ ಸ್ಪರ್ಧಿ ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿಕಾರಿದ್ದು, ನಿನ್ನನ್ನು ಜೈಲಿಗೆ ಕಳುಹಿಸಿಯೇ ಕಳುಹಿಸುತ್ತೇನೆ ಎಂದು ಓಪನ್‌ ಚಾಲೆಂಜ್‌ ಮಾಡಿದ್ದಾರೆ.

ಟಿವಿ ಸಂದರ್ಶನದಲ್ಲಿ ಮಾತನಾಡಿದ ಸಂಜನಾ ಗಲ್ರಾನಿ, ಅವರು ನನ್ನ ಮೇಲೆ ಮಾಡಿರುವ ಆರೋಪಕ್ಕೆ ಈಗಾಗಲೇ ನಾನು 2021ರಲ್ಲಿ ಸಿವಿಲ್‌ ಡಿಫಾಮೇಷನ್ ಅವರ ಮೇಲೆ ಹಾಕಿದ್ದೀನಿ. ಹಾಗೂ ಕ್ರಿಮಿನಲ್‌ ಡಿಫಾಮೇಷನ್ ಸಹ ಅವರ ಮೇಲೆ ಹಾಕಿದ್ದೀನಿ. ಅವರ ಮೇಲೆ ಸ್ಟೇನೂ ತೆಗೆದುಕೊಂಡಿದ್ದೇನೆ. ಯಾಕೆಂದರೆ ಆ ವ್ಯಕ್ತಿ ನನ್ನ ಬಗ್ಗೆ ಏನು ಮಾತನಾಡಿಲ್ಲ ಅಂತಾ ಹೇಳಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ಹೇಳುವ ಅವಶ್ಯಕತೆ ಇಲ್ಲ. ಆತನನ್ನು ಯಾವತ್ತೂ ಜೀವನದಲ್ಲಿ ಎದುರುಗಡೆ ಕಂಡಿಲ್ಲ. ಈ ಕೇಸ್‌ಗಿಂತ ಮುಂಚೆ ಆ ವ್ಯಕ್ತಿ ಯಾರೂ ಅಂತಾನೂ ನನಗೆ ಗೊತ್ತಿರಲಿಲ್ಲ. ಯಾಕೆ ಅವರಿಗೆ ನನ್ನ ಮೇಲೆ ಇಷ್ಟೊಂದು ದ್ವೇಷ ಅಂತಾನೂ ನನಗೆ ಗೊತ್ತಿಲ್ಲ. ಆದರೆ ನಿರ್ದೋಷಿಯಾಗಿದ್ದ ನನ್ನನ್ನು ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ.

ಆ ವ್ಯಕ್ತಿ ನನ್ನ ಮೇಲೆ ಏನೇನು ಆರೋಪ ಮಾಡಿಲ್ಲ ಹೇಳಿ. ಇಂತಹ ಆರೋಪಗಳನ್ನು ಒಂದು ಹೆಣ್ಣಿನ ಮೇಲೆ ಮಾಡಿ ಫ್ರೀಯಾಗಿ ತಿರುಗಾಡುತ್ತಿದ್ದರಲ್ಲಾ, ನೀವು ನಿಮ್ಮ ದಿನಗಳನ್ನು ಎಣಿಸಿ, ಆ ಭಗವಂತ ನನ್ನನ್ನು ನಿಮ್ಮನ್ನು ಇಬ್ಬರನ್ನೂ ಬದುಕಿಸಿ ಇಟ್ಟಿದ್ದರೆ, ಕ್ರಿಮಿನಲ್‌ ಡಿಫಾಮೇಷನ್ ಮೂಲಕ ನಿಮ್ಮನ್ನು ಜೈಲಿಗೆ ಹಾಕುವ ತನಕ ನಾನಂತೂ ಬಿಡಲ್ಲ. ಕಾನೂನು ಕೈ ನಾನು ಹಿಡಿದಿದ್ದೇನೆ. ಕಾನೂನಿನಲ್ಲಿ ನನಗೆ ಅತ್ಯುತ್ತಮವಾದ ಭರವಸೆ ಇದೆ. ನನಗೆ ಈಗಾಗಲೇ ನ್ಯಾಯ ಸಿಕ್ಕಿದೆ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.