ಆತನನ್ನು ನನ್ನ ಮದುವೆಗೆ ಕರೆಯಲ್ಲ ಸರ್, ಧನಂಜಯ್ ಮದುವೆಗೆ ಯಶ್ ಸುದೀಪ್ ಮುಖ್ಯ ಅತಿಥಿಗಳು

 | 
Js
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ತಯಾರಿಯಲ್ಲಿಯೇ ಬ್ಯುಸಿಯಾಗಿದ್ದ ಡಾಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿವಾಹಕ್ಕೆ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು, ಮಠಾಧೀಶರು ಹಾಗೂ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದು, ಇವರೆಲ್ಲರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕಳೆದೆರಡು ತಿಂಗಳಿನಿಂದ ಧನಂಜಯ್ ಮದುವೆ ಆಮಂತ್ರಣವನ್ನು ಹಂಚುವುದರಲ್ಲಿಯೇ ನಿರತರಾಗಿದ್ದಾರೆ. ಹೀಗಾಗಿ ಸಿನಿಮಾ ಕೆಲಸಗಳಿಗೆ ಸಂಪೂರ್ಣ ಬ್ರೇಕ್ ಕೊಟ್ಟು ಚಿತ್ರರಂಗದ ತನ್ನ ಸಹೋದ್ಯೋಗಿಗಳಿಗೆ ಆಹ್ವಾನ ನೀಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ಗಳಿಗೂ ಆಹ್ವಾನವನ್ನು ನೀಡಲಾಗಿದೆ. ಆದರೆ, ಇದೂವರೆಗೂ ದರ್ಶನ್‌ಗೆ ಮಾತ್ರ ಆಮಂತ್ರಣ ಪತ್ರಿಕೆಯನ್ನು ನೀಡಿಲ್ಲ. ಇಬ್ಬರ ಅಭಿಮಾನಿಗಳಲ್ಲೂ ಕುತೂಹಲ ಕೆರಳಿಸಿದೆ.
ಈಗಾಗಲೆ ಡಾಲಿ ಧನಂಜಯ್ ತಮ್ಮ ಭಾವಿ ಪತ್ನಿ ಧನ್ಯತಾ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಈ ವೇಳೆ ಧನಂಜಯ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಯಾಕೆ ಮದುವೆಗೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆ ಕೂಡ ಮಾಧ್ಯಮದ ಕಡೆಯಿಂದ ಎದುರಾಗಿತ್ತು. ಅದಕ್ಕೆ ಧನಂಜಯ್ ಕೂಡ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಅದೇನು ಅಂತ ನೋಡುವುದಾರೆ.
ದರ್ಶನ್ ರೇಣುಕಾ ಸ್ವಾಮಿ ಹತ್ಯೆ ಮಾಡಿ ಜೈಲಿಗೆ ಹೋದಾಗ ಎಲ್ಲರೂ ಒಂದೊಂದು ಮಾತು ಹೇಳಿದ್ದಾರೆ ಆದರೆ, ಇಲ್ಲಿ ಧನಂಜಯ್ ದರ್ಶನ್‌ಗೆ ಬೇಸರ ಆಗುವಂತಹದ್ದು ಏನನ್ನೂ ಹೇಳಿಲ್ಲ. ಹೀಗಾಗಿ ಇದು ಕಾರಣ ಆಗಿರಲಿಕ್ಕಿಲ್ಲ. ಈ ಕೂತೂಹಲಕ್ಕೆ ಧನಂಜಯ್ ಉತ್ತರ ಕೊಟ್ಟಿದ್ದಾರೆ. ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ ಅಂದ್ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಯಿಂದಲೇ ಕರೆಯುತ್ತೇನೆ ಎಂದು ಧನಂಜಯ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.