ನಾನು ನಿನ್ನನ್ನ ಬಿಡಲ್ಲ, ವಿಜಯಲಕ್ಷ್ಮಿಗೆ ನೇರ ಕೌಂಟರ್ ಕೊಟ್ಟ ಪವಿತ್ರ ಗೌಡ
Feb 10, 2025, 07:28 IST
|

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿದ್ದ ಪವಿತ್ರಾ ಗೌಡ ಈಗ ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿ ಆರು ತಿಂಗಳು ಕಳೆದಿದ್ದ ಪವಿತ್ರಾ ಗೌಡ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಕೆಲವು ದಿನಗಳು ಸೈಲೆಂಟ್ ಆಗಿದ್ದ ಪವಿತ್ರಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಸಾಲು ಸಾಲು ಪೋಸ್ಟ್‌ಗಳನ್ನು ಹಾಕುತ್ತಿರುವ ಪವಿತ್ರಾ ಗೌಡ ಕೆಲವೊಮ್ಮೆ ಸ್ಟೋರಿಗಳಲ್ಲಿ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಆರು ತಿಂಗಳು ಜೈಲಿನ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಅವರು ಹೊರ ಬರುತ್ತಿದ್ದಂತೆ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಜೈಲಿನಿಂದ ಹೊರಕ್ಕೆ ಬಂದ ಮೇಲೆ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಿರುವ ಪವಿತ್ರಾ ಗೌಡ ಮೊದಲು ದೇವಿ ದೇವಸ್ಥಾನದಲ್ಲಿ ಒದ್ದೆ ಮೈನಲ್ಲಿ ಸೇವೆ ಮಾಡಿದ್ದರು.
ಬಳಿಕ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿದ್ದರು. ಇತ್ತೀಚಿಗಷ್ಟೇ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಮೌನಿ ಅಮವಾಸ್ಯೆಯ ದಿನ ಪುಣ್ಯಸ್ನಾನ ಮಾಡಿದ ವಿಡಿಯೋ ಶೇರ್ ಮಾಡಿಕೊಂಡಿದ್ದ ಪವಿತ್ರಾ ಗೌಡ ಜೀವನದಲ್ಲಿದ್ದ ನಕರಾತ್ಮಕ ಶಕ್ತಿಗಳು ಮಾಯವಾಗಿದೆ ಎಂದು ಬರೆದುಕೊಂಡಿದ್ದರು.
ಜೈಲು ಕೋರ್ಟ್ ಹೋರಾಟಗಳ ಬಳಿಕ ತಮ್ಮ ಮಾಮೂಲಿ ಜೀವನಕ್ಕೆ ಮರಳಿರುವ ಪವಿತ್ರಾ ತಾವು ಮೊದಲು ನಡೆಸುತ್ತಿದ್ದ ರೆಡ್ ಕಾರ್ಪೆಟ್ ಸಂಸ್ಥೆಯನ್ನು ಮತ್ತೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ರೆಡ್ ಕಾರ್ಪೆಟ್ ಸಂಸ್ಥೆಗೆ ತಾವೇ ಪ್ರಮೋಷನ್ ಮಾಡುತ್ತಿರುವ ಪವಿತ್ರಾ ನೀಲಿ ಬಣ್ಣದ ಸುಂದರವಾದ ಸೀರೆಯೊಂದನ್ನು ಧರಿಸಿ ತಮಿಳು ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ.
ನೀಲಿ ಬಣ್ಣದ ಸೀರೆಯುಟ್ಟು, ಅದೇ ಬಣ್ಣದ ಬಿಂದಿಯಿಟ್ಟು, ಕೂದಲು ಇಳಿಬಿಟ್ಟು, ತಲೆದಿಂಬು ಹಿಡಿದು ವಿಡಿಯೋ ಮಾಡಿರುವ ಪವಿತ್ರಾ ಗೌಡ ವಿಡಿಯೋ ಮಧ್ಯೆ ಮಧ್ಯೆ ನಾಚಿ ನೀರಾಗಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತಿರುವ ಪವಿತ್ರಾ ಗೌಡ ವಿಡಿಯೋ ವೈರಲ್ ಆಗುತ್ತಿದ್ದು, ಕಮೆಂಟ್ಸ್‌ಗಳ ಸುರಿಮಳೆಯೇ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.