ಮುದ್ದು ಮುಖದ ಖಡಕ್ IAS ಆಫೀಸರ್ ರೋಹಿನಿ ಸಿಂಧೂರಿಗೆ ಸಂಕಷ್ಟ, ಕಾರಣ ಏನು ಗೊತ್ತಾ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸದಾ ಒಂದಿಲ್ಲೊಂದು ಸುದ್ದಿಗೆ ಕಾರಣರಾಗುತ್ತಲೇ ಇರುತ್ತಾರೆ. ಇದೀಗ ಅವರು ಹಿಂದೆ ಹಗರಣ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಿಂದೆ ನಡೆದಿದ್ದ ಇಬ್ಬರು ಅಧಿಕಾರಿಗಳ ಜಗಳ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ನಡುವಿನ ಜಟಾಪಟಿ ಭಾರಿ ಸದ್ದು ಮಾಡುತ್ತಿತ್ತು. ಆದರೆ ಇದೀಗ ರೋಹಿಣಿ ಸಿಂಧೂರಿ ಸಂಕಷ್ಟಕ್ಕೆ ಸಿಲುಕಿರುವುದು ಮೈಸೂರು ಡಿ.ಸಿ. ಆಗಿದ್ದ ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದರು ಎನ್ನುವ ಆರೋಪದ ಕಾರಣವಾಗಿದೆ. ರೋಹಿಣಿ ಸಿಂಧೂರಿ, ಮೈಸೂರು ಡಿಸಿ ಆಗಿದ್ದಾಗ ನಿಯಮಗಳನ್ನು ಮೀರಿ ಹಣಕಾಸು ಇಲಾಖೆ ಅನುಮತಿ ಪಡೆಯದೇ ಹಣ ಖರ್ಚು ಮಾಡಿದ್ದರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಅವರು ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯನ್ನು ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಮಾಡಿದ್ದು, ಹಗರಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖಾ ವರದಿ ಪ್ರಕಾರ ಶಿಸ್ತುಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ಪ್ರಾಥಮಿಕ ತನಿಖಾ ವರದಿಯ ಅಂಶವನ್ನೂ ಉಲ್ಲೇಖ ಮಾಡಲಾಗಿದ್ದು ಡಿಸಿ ನಿವಾಸ ನವೀಕರಣಕ್ಕೆ ಬಳಸಿದ ಹಣಕ್ಕೆ ಆರ್ಥಿಕ ಇಲಾಖೆ ಅನುಮತಿಸಿಲ್ಲ ಎನ್ನುವ ಅಂಶವೂ ಸೇರಿದೆ. ಇನ್ನು ಬಟ್ಟೆ ಬ್ಯಾಗ್ ಖರೀದಿಯಲ್ಲೂ ಯಾವ ನಿಯಮವನ್ನೂ ಪಾಲಿಸಿಲ್ಲ. ಹೀಗಾಗಿ ಶಿಸ್ತುಕ್ರಮ ಜರುಗಿಸಿ ಎಂದು ಸರ್ಕಾರಕ್ಕೆ ಡಿಪಿಆರ್ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.