ಸುದೀಪ್ ಜೊತೆ ದರ್ಶನ್ ಸ್ನೇಹ ಇದ್ದಿದ್ರೆ ಈ ಗತಿ ಬರ್ತಾ ಇರ್ಲಿಲ್ಲ, ದರ್ಶನ್ ಫ್ಯಾನ್ಸ್
Oct 11, 2024, 16:18 IST
|

ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ಈಗಾಗಲೇ ಪೊಲೀಸ್ರು ಕೇಸ್ ಸಂಬಂಧ ಕೋರ್ಟ್ಗೆ ಚಾರ್ಜ್ಶೀಟ್ ಕೂಡ ಸಲ್ಲಿಸಿದ್ದಾರೆ. ಚಾರ್ಜ್ಶೀಟಲ್ಲಿ ಆಘಾತಕಾರಿ ವಿಚಾರಗಳ ಬೆಳಕಿಗೆ ಬಂದಿವೆ. ಇದರ ಮಧ್ಯೆ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆಗೆ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ಗೆಳೆತನಕ್ಕೆ ಸಾಟಿನೇ ಇರಲಿಲ್ಲ. ಈ ಗೆಳೆಯರನ್ನ ಕುಚಿಕು ಗೆಳೆಯರು ಅಂತಾನೂ ಕರೆಯುತ್ತಿದ್ದರು. ಇನ್ನು ಇವರ ಸ್ನೇಹದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾವುದೇ ಕಾರ್ಯಕ್ರಮಗಳಿರಲಿ, ಕ್ರಿಕೆಟ್ ಇರಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.ಆದರೆ, ಅದ್ಯಾರ ಕಣ್ಣು ಬಿತ್ತೋ ಏನೋ? ಜೊತೆಯಾಗಿದ್ದವರ ಸ್ನೇಹ ಬಿರುಕು ಬಿಟ್ಟು ಹಲವು ವರ್ಷಗಳೇ ಕಳೆದಿವೆ.
ಇದಕ್ಕೆ ಕಾರಣ ಏನು ಅನ್ನೋದು ಹೆಚ್ಚಿನವರಿಗೆ ಗೊತ್ತೊರಲಿಲ್ಲ. ಸಂಗೊಳ್ಳಿ ರಾಯಣ್ಣ ಸಿನಿಮಾ ಆದ್ಮೇಲೆ ಇವರ ದೋಸ್ತಿ ಮುಗಿದೆ ಹೋಯಿತು. ಅಂದಿನಿಂದ ಇಂದಿನವರೆಗೂ ಇಬ್ಬರ ನಡುವೆ ಮಾತುಕತೆಯೇ ಇರಲಿಲ್ಲ.ಆದರೆ ಇತ್ತೀಚೆಗೆ ನಡೆದ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ದರ್ಶನ್ ಮತ್ತು ಸುದೀಪ್ ಅವರ ಆತ್ಮೀಯತೆ ಬಗ್ಗೆ ಕೇಳಿದಾಗ, ಆ ವೇಳೆ ಹೌದು, ಚೆನ್ನಾಗಿಯೇ ಇದ್ದೆವು. ಒಬ್ಬ ಫ್ರೆಂಡ್ ಅಂದಾಗ ಎಲ್ಲವೂ ನಿಶ್ಕಳಂಕವಾಗಿರಬೇಕಾಗುತ್ತದೆ. ನಾನು ದೊಡ್ಡವನು, ನೀನು ದೊಡ್ಡವನು ಅನ್ನೋ ಮಾತು ಬರಲ್ಲ ಎಂದಿದ್ದಾರೆ.
ದರ್ಶನ್ ಸಂಘ ಕೆಟ್ಟದ್ದು. ಇನ್ನು ಅವನ ತಂಡದಲ್ಲಿ ಇರೋ ಜನರೇ ರೌಡಿ ಅಂತವರು. ಈ ಮೊದಲು ಸೃಜನ್ ಲೋಕೇಶ್ , ನೆನಪಿರಲಿ ಪ್ರೇಮ್, ಧರ್ಮ ಮೊದಲಾದವರು ಇದ್ದರು. ಆದರೆ ಬೇರೆಯವರ ಮಾತುಕೇಳಿ ದರ್ಶನ್ ಹಾಳಾಗಿ ಹೋದ. ಕೆಟ್ಟವರ ಸಹವಾಸ ದೋಷದಿಂದ ಅವನಿಂದು ಜೈಲು ಸೇರೋ ಹಗಾಗಿದೆ ಒಂದು ವೇಳೆ ಸುದೀಪ್ ಸ್ನೇಹದಲ್ಲೇ ಇದ್ದರೆ ಈ ಕೊಲೆ ಪ್ರಕರಣವೇ ಇರುತ್ತಿರಲಿಲ್ಲ ಎಂದು ಗಣೇಶ್ ಕಾಸರಗೋಡು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.