ನಾನು ಸೋತರೆ ದೇವರು ಸೋತಂತೆ’ ವೇದಿಕೆ ಮೇಲೆ ಹೆಗ್ಗಡೆಯವರ ಭಾಷಣ ಕೇ.ಳಿ

 | 
Gd

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 56ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆಯಿತು.
1968ರ ಅಕ್ಟೋಬರ್ 24ರಂದು ಶ್ರೀಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿದ್ದರು. 

ಬಳಿಕ ಕ್ಷೇತ್ರದ ಹಾಗೂ ಸಮಾಜದ ಸರ್ವತೋಮುಖ ಪ್ರಗತಿಗೆ ಅನೇಕ ಪರಿವರ್ತನೆಗಳನ್ನು, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರವಾಗಿದೆ. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ. ಡಿ. ವೀರೇಂದ್ರ ಹೆಗ್ಗಡೆಯವರು ನನ್ನೆಲ್ಲಾ ಕೆಲಸದ ಹಿಂದೆ ನನ್ನ ಕುಟುಂಬದ ಹಾಗೂ ಅಭಿಮಾನಿಗಳ ಸಹಕಾರ ಇದೆ.ನಾನು ಸೋತರೆ ದೇವರು ಸೋತಂತೆ.

ಈ ಕ್ಷೇತ್ರಕ್ಕೆ ಕೀರ್ತಿ ಬಂದರೆ ದೇವರಿಗೆ ಬಂದಂತೆ. ನನ್ನ ಅತಿ ಪ್ರೀತಿಯ 3 ಜನರನ್ನು ಕಳೆದುಕೊಂಡು ನಾನು ಬಡವನಾಗಿದ್ದೇನೆ. ಆ ಮೂರು ಜನರಿಗೂ ನಾನು ಶೃದ್ದಾoಜಲಿ ಅರ್ಪಿಸುತ್ತಿದ್ದೇನೆ ಎಂದರು. ತಮ್ಮ ಕಾಲೇಜಿನ ವಿಧ್ಯಾರ್ಥಿಗಳ ಸಾಧನೆಯನ್ನು ಹಾಗೂ ತಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ 2000ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ ಎಂದು ನುಡಿದರು. ಅಲ್ಲದೆ ಮುಂದಿನ ಬಾರಿ ಬೀದರ್ ಜಿಲ್ಲೆಯ ಹಾಲು ಉತ್ಪಾದನಾ ಘಟಕಗಳಿಗೆ ಹಾಗೂ ಅಡ್ವಾನ್ಸ್ ಕ್ಯಾನ್ಸರ್ ಚಿಕಿತ್ಸೆ ಗೆ ಆಸ್ಪತ್ರೆಗೆ ಹಣವನ್ನು ಬಳಸುತ್ತೇವೆ ಎಂದರು.

ಪ್ರಾಚೀನ ದೇಗುಲಗಳು ಹಾಗೂ ಐತಿಹಾಸಿಕ ಸ್ಮಾರಕಗಳ 
ಜೀರ್ಣೋದ್ಧಾರ ಮತ್ತು ಸಂರಕ್ಷಣೆಗಾಗಿ ಎಸ್‌ಡಿಎಂ ಧರ್ಮೋತ್ಥಾನ ಟ್ರಸ್ಟ್‌, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಅನುಷ್ಠಾನ, ಪ್ರತಿ ವರ್ಷ ರಾಜ್ಯಮಟ್ಟದ ಅಂಚೆ ಕುಂಚ ಸ್ಪರ್ಧೆ, ಉಜಿರೆ, ಧಾರವಾಡ, ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕೆಜಿಯಿಂದ ಪಿಜಿವರೆಗಿನ ಶಿಕ್ಷಣ ಸಂಸ್ಥೆಗಳು, ಆಯುರ್ವೇದ ಮತ್ತು ಪಾರಂಪರಿಕ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಕಾಯಕಲ್ಪ, ಮದುವೆಗಾಗಿ ದುಂದುವೆಚ್ಚ ಹಾಗೂ ವರದಕ್ಷಿಣೆ ತಡೆಯಲು ಪ್ರತಿವರ್ಷ ಕ್ಷೇತ್ರದಲ್ಲಿಉಚಿತ ಸಾಮೂಹಿಕ ವಿವಾಹ ಸಮಾರಂಭ. 

ಭಜನಾ ತರಬೇತಿ ಕಮ್ಮಟ, ವರ್ಷದಲ್ಲಿ ಎರಡು ಬಾರಿ ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವಾರು ಲೋಕ ಕಲ್ಯಾಣ ಯೋಜನೆಗಳು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೇವಾ ಕಾರ್ಯಕ್ಕೆ ದೇಶ ವಿದೇಶಗಳಿಂದ ಪ್ರಶಂಸೆ ವ್ಯಕ್ತವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.