'ಮದುವೆ ಅಂತ ಆದ್ರೆ ಅದು ವರ್ತೂರು ಸಂತುನಾ' ಬೆಂಕಿ ತನಿಷಾ

ಪೆಂಟಗಾನ್ ಸಿನೆಮಾದಲ್ಲಿ ಅಭಿನಯಿಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು ಬಿಗ್‌ಬಾಸ್ ಮನೆಯಲ್ಲಿ ಬೆಂಕಿ ಎಂದೇ ಹೆಸರಾದವರು ತನಿಷಾ ಕುಪ್ಪಂಡ. ಸ್ನೇಹಿತರಿಗೆ ಬೆಚ್ಚನೆಯ ಭಾವ ನೀಡುತ್ತ, ಎದುರಾಳಿಯಾಗಿ ನಿಂತರೆ ಸುಡುವ ಕೋಪವನ್ನೂ ತೋರುತ್ತಿದ್ದ ತನಿಶಾಗೆ ಬೆಂಕಿ ಎನ್ನುವ ಹೆಸರು ಸೂಕ್ತವಾಗಿದೆ. ಕಾಲು ನೋವಿನ ಹೊ ರತಾಗಿಯೂ ಛಲ ಬಿಡದೇ ಆಡಿ 100 ದಿನ ಬಿಗ್ ಬಾಸ್ ಮನೆಯಲ್ಲಿ ಪೂರೈಸಿದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು.
ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು.ತನಿಷಾ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಮುನ್ನ ಕಣ್ಣೀರು ಹಾಕುತ್ತ ಮನೆಯ ಸದಸ್ಯರಿಗೂ ಬೈದು, ಬಿಗ್‌ಬಾಸ್ ಯಾಕಿಷ್ಟುಕೆಟ್ಟದಾಗಿ ಕಳಿಸಿಕೊಡ್ತೀರಾ? ಎಂದು ಕೇಳುತ್ತಲೇ ಹೊರಗೆ ಹೋದರು. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮತ್ತೆ ವೇದಿಕೆಗೆ ಬಂದು ಕಿಚ್ಚನ ಜೊತೆಗೆ ಬಿಚ್ಚುಮಾತುಗಳನ್ನಾಡಿದ್ದಾರೆ.
ಕಾರ್ತಿಕ್ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಳ್ತ್ತಾರೆ. ಕೊನೆ ಕ್ಷಣದಲ್ಲಿ ಬೇರೆ ಯಾರದೋ ಮಾತು ಕೇಳಿಕೊಂಡು ಎಡವಿದರು. ಆದರೂ ಮನೆಯಿಂದ ಹೊರ ಬಂದ ನಂತರವೂ ನಾನು ಕಾರ್ತಿಕ್ ಜೊತೆ ಸ್ನೇಹ ಮುಂದುವರಿಸ್ತೀನಿ ಅಂದಿದ್ದಾರೆ ತನಿಷಾ. ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದ್ದೋ ಮಾತು ಕೇಳಿಸಿಕೊಂಡು, ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ ಅವರು. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ.ಆದರೆ ಸಂಗೀತಾ ಫೇಕ್. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್ ಎಂದಿದ್ದಾರೆ. ಇನ್ನು ಈ ಬಾರಿ ಕಾರ್ತಿಕ ಗೆಲ್ಲಬೇಕು ಎನ್ನುವ ಮನದಾಸೆಯನ್ನು ಕೂಡಾ ತನಿಷಾ ಹೊರ ಹಾಕಿದ್ದಾರೆ.
ವರ್ತೂರು ಸಂತೋಷ್ ಅವರನ್ನು ನೋಡಿದರೆ ತನಿಷಾ ನಾಚಿಕೊಳ್ಳುತ್ತಿದ್ದರು. ತನಿಷಾ ಆಸ್ಪತ್ರೆಗೆ ಹೋದಾಗ ವರ್ತೂರು ಸಂತೋಷ್ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದರು. ಅದನ್ನು ನಾನು ನೇರವಾಗಿ ಕೇಳಿದೆ. ಆ ರೀತಿ ಏನೂ ಇಲ್ಲ ಅಂತ ವರ್ತೂರು ಹೇಳಿದ್ದರು. ಹೊರಗಡೆ ಹೋದ ಬಳಿಕ ಮದುವೆ ಆಗಲ್ಲ ಅಂತಲೂ ಹೇಳಿದ್ದರು. ಅದು ಒನ್ ಸೈಡೆಡ್ ಆಗಿರಬಹುದು. ಕ್ಯಾಮೆರಾದಲ್ಲಿ ಕಾಣಬೇಕು ಎಂಬ ಕಾರಣದಿಂದಲೂ ಹಾಗೆ ಮಾಡಿರಬಹುದು ಆದರೆ ನಮ್ಮಿಬ್ಬರ ನಡುವೆ ಏನಿಲ್ಲ ಎಂದು ತನಿಷಾ ಮಂದಹಾಸ ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.