ರಾಯನ್ ಅಪ್ಪ ಬೇಕು ಎಂದು ಹಠ ಮಾಡಿದ್ರೆ, ಮೇಘನಾ ರಾಜ್ ಮಾಡುವ ಉಪಾಯ ಏನು ಗೊತ್ತಾ

 | 
Hj

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಕನ್ನಡಿಗರ ಮನೆ ಮಗಳು ಮೇಘನಾ ರಾಜ್‌ ಸರ್ಜಾ ಸದ್ಯ ಸಿನಿಮಾ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.ತಮ್ಮ ಕಮ್ ಬ್ಯಾಕ್ ಸಿನಿಮಾ ತತ್ಸಮ ತದ್ಭವ ಅದ್ಭುತ ಪ್ರತಿಕಿಯೆ ಪಡೆದಿತ್ತು. ಮೇಘನಾ ನಟನೆಯನ್ನು ಮೆಚ್ಚಿ ಕೊಂಡಾಡಿದರು ಅಲ್ಲದೆ ಸೂಪರ್ ಮಾಮ್ ಎನ್ನು ಕಿರೀಟ ಕೊಟ್ಟರು.

ಕೇವಲ 3 ವರ್ಷದ ರಾಯನ್‌ ಈಗಷ್ಟೇ ಸ್ಕೂಲ್‌ಗೆ ಕಾಲಿಟ್ಟಿದ್ದಾನೆ. ಸಿನಿಮಾ, ಕಿರುತೆರೆ ಮತ್ತು ಮಗ-ಮನೆ ಎಲ್ಲವೂ ಮೇಘನಾ ಮ್ಯಾನೇಜ್ ಮಾಡುತ್ತಿರುವುದಕ್ಕೆ ಸೂಪರ್ ಮಾಮ್ ಅಂತಾರೆ ಫ್ಯಾನ್ಸ್‌. ಇನ್ನು ರಾಯನ್ ಅಪ್ಪ ಅಂತ ಕೇಳಲ್ವಾ? ತಂದೆ ಸಮಾಧಿಗೆ ಭೇಟಿ ನೀಡಿದಾಗ ಅಥವಾ ತಂದೆ ಫೋಟೋ ಮುಂದೆ ನಿಂತಾ ಸಮಾಧಾನ ಮಾಡ್ಬೇಕಾ? ಎಂದು ಪ್ರಶ್ನೆ ಮಾಡಿದಾಗ ಅವರು ಹೀಗೇ ಹೇಳಿಕೊಂಡಿದ್ದಾರೆ.

ರಾಯನ್ ರಾಜ್ ಸರ್ಜಾ ಯಾವತ್ತೂ ಅಪ್ಪ ಅಂತ ಕೇಳಿಲ್ಲ ಹೀಗಾಗಿ ಸಮಾಧಾನ ಮಾಡುವ ಅಗತ್ಯ ಬಂದಿಲ್ಲ. ಏನು ಕೇಳಬೇಕು ಅನ್ನೋದು ಅವನಿಗೆ ಗೊತ್ತಾಗಿಲ್ಲ. ರಾಯನ್‌ಗೆ ಈಗಾಗಲೆ ಗೊತ್ತಾಗಿರಬೇಕು....ಗೊತ್ತಾಗಿದೆ ಅಂದ್ರೆ ಆ ತರ ಅಲ್ಲ. ಆದರೆ ರಾಯನ್‌ಗೆ ಅಪ್ಪ ಅಂದ್ರೆ ಯಾರು ಎಲ್ಲಿದ್ದಾರೆ ಅನ್ನೋದು ಗೊತ್ತಿದೆ ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದರು. 

ರಾಯನ್‌ಗೆ ಕೇವಲ 4 ವರ್ಷ ಇಷ್ಟು ಬೇಗ ಚಿತ್ರರಂಗಕ್ಕೆ ಬರುವ ಪ್ಲ್ಯಾನ್ ಏನೂ ಇಲ್ಲ. ಖಂಡಿತಾ ಈಗ ಆತ ಬರುವುದಿಲ್ಲ. ವಿದ್ಯಾಭ್ಯಾಸಕ್ಕೆ ಮೊದಲ ಪ್ರಾಮುಖ್ಯತೆ. ಫ್ಯೂಚರ್‌ನಲ್ಲಿ ಸಂಪೂರ್ಣವಾಗಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಚಿತ್ರರಂಗಕ್ಕೆ ಬರುವ ಆಸೆ ಇದ್ದರೆ ಬರಲಿ. ನಮ್ಮಿಂದ ಯಾವ ರೀತಿ ಫೋರ್ಸ್‌ ಇಲ್ಲ. ಅವನಿಗಿಷ್ಟ ಬಂದ ಹಾಗೆ ಅವನು ಬದುಕಲಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.