ಒಂದು ವೇಳೆ RCB ಗೆದ್ದರೆ ಕನ್ನಡದ ಯುವಕರಿಗೆ ಸಮಂತಾ ಕೊಡುವ ಗಿಫ್ಟ್ ಏನು ಗೊ ತ್ತಾ

 | 
Hii

2024ರ ಐಪಿಎಲ್‌ ಟೂರ್ನಿಯಲ್ಲಿ ಬುಧವಾರ  ನಡೆಯುವ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣೆಸಾಟ ನಡೆಸಲಿವೆ. ಆರ್‌ಸಿಬಿ ಪರ ಅಭಿಮಾನಿಳು ಈ ಪಂದ್ಯಕ್ಕಾಗಿ ಕಾತರದಿಂದ ಕಾದಿದ್ದಾರೆ. ಈ ಮಧ್ಯೆ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಎಲ್ಲರ ಗಮನಸೆಳೆದಿದೆ. ಈ ಪೋಸ್ಟ್ ಅನ್ನು ಅವರು ಆರ್‌ಸಿಬಿ ಪರವಾಗಿಯೇ ಹಾಕಿದ್ದಾರೆ ಎಂಬುದು ಫ್ಯಾನ್ಸ್ ಊಹೆ ಆಗಿದೆ.

ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ಗೆ ಲಗ್ಗೆ ಇಟ್ಟಿರುವ ಆರ್‌ಸಿಬಿ ತಂಡ ಭಾರಿ ಉತ್ಸಾಹದಲ್ಲಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸುವ ಗುರಿ ಹೊಂದಿದೆ. ಈ ಮಧ್ಯೆ ನಟಿ ಸಮಂತಾ ಅವರು, ನೀವು ಗೆಲ್ಲುವುದನ್ನು ನಾನು ನೋಡಲು ಬಯಸುತ್ತೇನೆ.. ನಿಮ್ಮ ಹೃದಯದ ಬಯಕೆ ಏನೇ ಇರಲಿ, ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿಮಗಾಗಿ ಬೇರೂರಿದ್ದೇನೆ. ನೀವು ಗೆಲುವಿಗೆ ಅರ್ಹರಾಗಿದ್ದೀರಿ.. ಎಂದು ಪೋಸ್ಟ್ ಹಾಕಿದ್ದಾರೆ.

ಇನ್ನು ಇದನ್ನು ನೋಡಿದ ಫ್ಯಾನ್ಸ್, ಸಮಂತಾ ಇದನ್ನು ಆರ್‌ಸಿಬಿ ಪರವಾಗಿಯೇ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಸಮಂತಾ ಅವರ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು, ಆರ್‌ಸಿಬಿಗೆ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವರು, ಇದೊಂದು ಪಾಸಿಟಿವ್ ಮೇಸೆಜ್‌ ಅಷ್ಟೇ. ಪ್ರತಿಯೊಬ್ಬರ ಗೆಲುವನ್ನು ಸಮಂತಾ ಬಯಸುತ್ತಾರೆ. ಹಾಗಾಗಿ, ಈ ರೀತಿ ಹಾಕಿದ್ದಾರೆ ಅಂತಲೂ ಹೇಳಿದ್ದಾರೆ.

ಕಳೆದ ವರ್ಷ ಚಾಟ್‌ ಶೋವೊಂದರಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ರುತ್ ಪ್ರಭು ಅವರು, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತುಂಬಾ ಸ್ಪೂರ್ತಿದಾಯಕ ವ್ಯಕ್ತಿ ಆಗಿದ್ದಾರೆ. ಅವರ ಸಮರ್ಪಣಾ ಭಾವ, ಶ್ರದ್ಧೆ ಮತ್ತು ಬದ್ಧತೆಯು ಅದ್ಭುತವಾಗಿದೆ. ಅದು ತುಂಬ ಸ್ಪೂರ್ತಿದಾಯಕವಾಗಿದೆ. ತಮ್ಮ ಧೈರ್ಯ ಮತ್ತು ದೃಢಸಂಕಲ್ಪದಿಂದ ವಿರಾಟ್ ಅವರು ಬಹಳಷ್ಟು ಜನರ ಜೀವನವನ್ನು ಬದಲಾಯಿಸಿದ್ದಾರೆ. ವಿರಾಟ್ ಕೊಹ್ಲಿ ಕಮ್‌ಬ್ಯಾಕ್ ಮಾಡಿದ್ದಾಗ, ಅವರು ಶತಕ ಗಳಿಸಿದ್ದಾಗ ನಾನು ಕಣ್ಣೀರು ಹಾಕಿದ್ದೆ. ನಿಜಕ್ಕೂ ಅವರು ಒಂದು ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.