ಡೈರೆಕ್ಟರ್ ಒಪ್ಪಿಕೊಂಡರೆ ' ಆ ಕೆಲಸ ಮಾಡಲು ನಾನು ರೆಡಿ' ಎಂದ ಮಲಯಾಳಂ ನ.ಟಿ

 | 
ಬಹ೭

ಇಲ್ಲಿಯವರೆಗೆ ಅರೆನಗ್ನರಾಗಿ ಕಾಣಿಸಿಕೊಳ್ಳುತ್ತಲೇ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ ಹಲವು ಚಿತ್ರನಟಿಯರು. ಅನಿಮಲ್​ ಚಿತ್ರದಲ್ಲಿ ನಟಿ ತೃಪ್ತಿ ಡಿಮ್ರಿ ಸಂಪೂರ್ಣ ಬೆತ್ತಲಾಗುತ್ತಲೇ ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆಗಿ, ಅಭಿಮಾನಿಗಳ ಕಣ್ಮಣಿಯಾಗಿ, ನ್ಯಾಷನಲ್​ ಕ್ರಷ್​ ಆಗಿ ಹೊರಹೊಮ್ಮಿದರು. ಹಲವು ನಿರ್ಮಾಪಕರು, ನಿರ್ದೇಶಕರು ಈ ಬೆತ್ತಲು ನಟಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ಕೊಡಲು ಕಾತರದಿಂದ ಕಾಯುತ್ತಿದ್ದಾರೆ. 

ಅರೆಬರೆ ಬೆತ್ತಲಾಗಿ ಕಾಣಿಸಿಕೊಳ್ಳುತ್ತಿರುವ ನಟಿಯರಿಗೂ ಇದು ಸ್ವಲ್ಪ ಶಾಕ್​ ಕೊಟ್ಟಂತಿದೆ.  ಇದರ ನಡುವೆಯೇ ಮತ್ತೋರ್ವ ಹಾಟ್​ ಬ್ಯೂಟಿ ಸಂಪೂರ್ಣ ಬೆತ್ತಲಾಗಲು ತಾವು ರೆಡಿ ಎಂಬ ಹೇಳಿಕೆಯನ್ನು ಈಗ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ನಟಿಯ ಹೆಸರು ಶ್ವೇತಾ ಮೆನನ್.‌ ಈಕೆಗೆ ಈಗ 49 ವರ್ಷ ವಯಸ್ಸು! ಇವರು ಮಾಲಿವುಡ್​​ ನಟಿಯಾಗಿದ್ದರೂ ಹೆಚ್ಚು ಫೇಮಸ್​ ಆಗಿದ್ದು, ಕಾಮಸೂತ್ರ ಕಾಂಡೋಮ್‌ ಜಾಹೀರಾತಿನ ಮೂಲಕ. 

ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲೂ ಮೋಡಿ ಮಾಡಿದ್ದಾರೆ. ಇಂಥ ಜಾಹೀರಾತುಗಳನ್ನು ಬಹಿರಂಗವಾಗಿ ತೋರಿಸಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿಯೇ ಶ್ವೇತಾ ಅವರು, ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಲ್​ಚಲ್​ ಸೃಷ್ಟಿಸಿದ್ದವರು.  ಈ ರೀತಿಯ ಜಾಹೀರಾತಲ್ಲಿ ನಟಿಸುತ್ತಿದ್ದೇನೆ ಎಂದಾಗ ಮನೆಯಿಂದಲೂ ಅವರಿಗೆ ಬೆಂಬಲ ಸಿಕ್ಕಿತ್ತು ಎಂದು ಹೇಳಿಕೊಂಡಿರುವ ನಟಿ, ಈಗ ತಾವು ಅಗತ್ಯ ಬಿದ್ದರೆ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲೆಯಾಗಲು ರೆಡಿ ಎಂದಿದ್ದಾರೆ. ನಾನು ಇಲ್ಲಿಯವರೆಗೆ ಏನೇನು ರೋಲ್​ ಮಾಡಿದ್ದೇನೋ  ಆ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ.

 ಪ್ರಜ್ಞೆ ಇಲ್ಲದೆ ಏನನ್ನೂ ಮಾಡಿಲ್ಲ.  ಬಿಕಿನಿಯಲ್ಲಿ ನಟಿಸು ಎಂದರೆ ಈಗಲೂ ಅದಕ್ಕೆ ರೆಡಿ ಇದ್ದೇನೆ, ಅಷ್ಟೇ ಏಕೆ, ಬೆತ್ತಲಾಗಿ ನಟಿಸು ಎಂದರೂ ನಾನು ರೆಡಿ. ಅಷ್ಟೇ ಅಲ್ಲ, ಈಗಲೂ ರತಿ ನಿರ್ವೇದಂ ಮತ್ತು ಕಾಮಸೂತ್ರ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಿದ್ದೇನೆ ಎಂದಿದ್ದಾರೆ.  ಬೋಲ್ಡ್‌ ಪಾತ್ರಗಳ ಮೂಲಕವೇ ತೆರೆಮೇಲೆ ಕಾಣಿಸಿಕೊಂಡಿರುವ ಶ್ವೇತಾ, ಐಟಂ ಡಾನ್ಸ್‌ಗಳಿಗೆ ಹೇಳಿ ಮಾಡಿಸಿದವರು. 49ರ ಹರೆಯಲ್ಲಿಯೂ ಹಾಟ್​ ತಾರೆಯಾಗಿ ಗುರುತಿಸಿಕೊಂಡಿದ್ದಾರೆ.

ಅಷ್ಟಕ್ಕೂ ಆರಂಭದಲ್ಲಿ ರೂಪದರ್ಶಿಯಾಗಿದ್ದ ಶ್ವೇತಾ, ಅನಸ್ವರಂ ಸಿನಿಮಾ ಮೂಲಕ ಮಲೆಯಾಳಿ ಚಿತ್ರಕ್ಕೆ ಕಾಲಿಟ್ಟರು. ಹಲವು ಚಿತ್ರಗಳಲ್ಲಿ ನಟಿಸಿದರು. ನಂತರ ತೆಲುಗು, ತಮಿಳು ಹಿಂದಿಯಲ್ಲೂ ಗುರುತಿಸಿಕೊಂಡರು. ಬೋಲ್ಡ್‌ ಪಾತ್ರಗಳ ಮೂಲಕವೇ ಗಮನ ಸೆಳೆದರು.   ನಾನು ಹಿಂದೆ ಮಾಡಿದ್ದರ ಬಗ್ಗೆ ತಿರುಗಿ ನೋಡಲ್ಲ. ಅದು ಒಳ್ಳೆಯದೋ ಕೆಟ್ಟದೋ ನನಗದು ಗೊತ್ತಿಲ್ಲ. ಆ ಬಗ್ಗೆ ನನಗೆ ವಿಷಾದವೂ ಇಲ್ಲ. ನನಗೆ ಅನಿಸಿದಂತೆ, ನಾನು ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಮಾಡಿದ್ದೇನೆ ಎನ್ನುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.