ಕರೆಯದೆ ಬಂದು ಮದುವೆ ಊಟ ಮಾಡಿದರೆ ಜೈ.ಲೂಟ ಫಿಕ್ಸ್, ಯಾ ಕೆ ಗೊ.ತ್ತಾ

 | 
H

ಕೆಲವೊಬ್ರಿಗೆ ತಮ್ಮ ಸ್ನೇಹಿತರ ಜೊತೆ ಸೇರಿ  ಆಹ್ವಾನವಿಲ್ಲದಿರುವ  ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡ್ಕೊಂಡು ಬರುವ ಕ್ರೇಜ್ ಇರುತ್ತೆ. ಆದ್ರೆ ಈ ರೀತಿ ಆಹ್ವಾನವಿಲ್ಲದಿರುವ ಕಾರ್ಯಕ್ರಮಗಳಿಗೆ ಹೋಗೋದು ಕಾನೂನಿನ ಪ್ರಕಾರ ಅಪರಾಧ ಎಂಬ ವಿಷ್ಯ ನಿಮ್ಗೆ ಗೊತ್ತಿದ್ಯಾ? ಹೌದು ಈ ರೀತಿ ಫ್ರೀ ಊಟ ಮಾಡೋಕೆ ಹೋಗಿ ನೀವೇನಾದ್ರೂ ಸಿಕ್ಕಿ ಬಿದ್ರೆ ನಿಮ್ಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು. 

ಈ ಕೆಲವು ತರ್ಲೆ ಯುವಕರು, ಹೇ ಅಲ್ಲೇನೋ  ಮದುವೆ ಫಂಕ್ಷನ್ ನಡಿತಿದೆ, ಹೋಟೆಲಿಗೆ ಹೋಗಿ ಯಾಕೆ ಸುಮ್ನೆ ದುಡ್ಡು ವೇಸ್ಟ್ ಮಾಡೋದು, ಇಲ್ಲೇ ಈ ಮದುವೆಗೆ ಹೋಗಿ ಭರ್ಜರಿ ಊಟ ಮಾಡ್ಕೊಂಡು ಬರೋಣ ಅಂತ, ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಭರ್ಜರಿ ಭೋಜನ ಮಾಡಿ ಬರ್ತಾರೆ. ಅದ್ರ ನಡುವೆ ಇಲ್ಲೇನಾದ್ರೂ ಸಿಕ್ಕಿ ಹಾಕಿಕೊಂಡ್ರೆ ಏನಪ್ಪಾ ಗತಿ ಅಂತ ಭಯನೂ ಅವ್ರಿಗೆ ಕಾಡ್ತಾ ಇರುತ್ತೆ. 

ಅಲ್ಲದೆ ಈ ರೀತಿ ಆಹ್ವಾನವಿಲ್ಲದಿರುವ ಮದುವೆ ಕಾರ್ಯಕ್ರಮಗಳಿಗೆ ಊಟ ಮಾಡಲು ಹೋಗಿ ಮದುವೆ ಮನೆಯಲ್ಲಿ ಸರಿಯಾಗಿ ಗೂಸಾ ತಿಂದು ಬರುವ ತಮಾಷೆಯ ದೃಶ್ಯಗಳನ್ನು ನಾವು ಸಿನೆಮಾಗಳಲ್ಲಿ ನೋಡಿರುತ್ತೇವೆ. ಆದ್ರೆ ನಿಜವಾಗಿಯೂ ಈ ರೀತಿ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು, ಕಾನೂನಿನ ಪ್ರಕಾರ ಅಪರಾಧವಾಗಿದೆ.  ಹೌದು ಹೀಗೇನಾದ್ರೂ  ಕರೆಯದಿರುವ ಖಾಸಗಿ ಕಾರ್ಯಕ್ರಮಗಳಲ್ಲಿ ಊಟ ಮಾಡಲು ಹೋಗಿ ಸಿಕ್ಕಿಬಿದ್ರೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದಂತೆ. 

ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ವಕೀಲೆ ಬಿ.ವಿ ಸ್ವಾತಿ (@swathi.law) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಹೀಗೆ ನೀವೇನಾದ್ರೂ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು  ಸೆಕ್ಷನ್ 442  ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ  ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂಬುದನ್ನು ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.