ನಿಮಗೆ ಧ್ರುವ ಬೇಡ ಅಂದ್ರೆ ನಮ್ಮ ಇಂಡಸ್ಟ್ರಿ ಗೆ ಕಳ್ಸಿ, ಕನ್ನಡಿಗರು ಮುಟ್ಟಿ ನೋಡುವ ಹಾಗೇ ಮಾತಾಡಿದ ಹಿಂದಿ ಜನ

 | 
Hd
 ತಡವಾಗಿ ಬಂದರೂ ತಡವರಿಸದೆ ನಡೆಯುತ್ತಿರೋ ಮಾರ್ಟಿನ್ ಚಿತ್ರ ಎಪಿ ಅರ್ಜುನ್ ನಿರ್ದೇಶನದ ಸಿನಿಮಾ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟ ಉಣಬಡಿಸುತ್ತಿದೆ. ಸಿನಿಮಾ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.
ಇನ್ನು ಮಾರ್ಟಿನ್' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಒಳ್ಳೆ ಆಕ್ಷನ್ ಥ್ರಿಲ್ಲರ್ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಪರಭಾಷಾ ಪ್ರೇಕ್ಷಕರು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಧ್ರುವ ಸರ್ಜಾ ಡೆಡಿಕೇಷನ್ ಹಾಗೂ ಮಾಸ್ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಸುಖಾಸುಮ್ಮನೆ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ನೋಡದೆಯೇ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವ ವಾದವೂ ಇದೆ. ಯಾವುದೋ ದ್ವೇಷಕ್ಕೆ ಒಂದು ಕನ್ನಡ ಸಿನಿಮಾವನ್ನು ತುಳಿಯಬೇಡಿ ಎನ್ನುವ ಆಗ್ರಹವೂ ವ್ಯಕ್ತವಾಗುತ್ತಿದೆ.
ಹಿಂದಿ ಯೂಟ್ಯೂಬರ್ ಒಬ್ಬರ ಮಾರ್ಟಿನ್ ರಿವ್ಯೂ ವೀಡಿಯೋ ಬಹಳ ವೈರಲ್ ಆಗುತ್ತಿದೆ. 'ಬಾಲಿವುಡ್‌ವಾಲಾ' ಯೂಟ್ಯೂಬ್ ಚಾನಲ್‌ನ ಸೋನುಪ್ ಸಹದೇವನ್ 'ಮಾರ್ಟಿನ್' ಸಿನಿಮಾ ನೋಡಿ ಕೊಂಡಾಡಿದ್ದಾರೆ. ನಿಮಗೆ ಧ್ರುವ ಸರ್ಜಾ ಬೇಡ ಅಂದ್ರೆ ನಮ್ಮ ಇಂಡಸ್ಟ್ರಿಗೆ ಕಳ್ಸಿ ಎಂದು ಅವರು ಹೇಳಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. "ನಾನು 'ಮಾರ್ಟಿನ್' ಸಿನಿಮಾ ನೋಡಿಬಂದೆ.
 ವಿಷ್ಯುವಲ್ಸ್, ಆಕ್ಷನ್ ಹಾಗೂ ಧ್ರುವ ಸರ್ಜಾ ಪರ್ಫಾರ್ಮನ್ಸ್ ಎಲ್ಲವೂ ಸೂಪರ್. ಆ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ನೆಗೆಟಿವ್ ನೋಡ್ದೆ. ನನಗೆ ಅನ್ನಿಸ್ತು ಇಷ್ಟು ನೆಗೆಟಿವಿಟಿ ಯಾಕೆ ಅನ್ನಿಸ್ತಿದೆ. ಹೋಗಿ ಸಿನಿಮಾ ನೋಡಿ. ಜನ ನಿರ್ಧರಿಸಲಿ. ಇದು ಅದ್ಭುತ ಸಿನಿಮಾ.ಎಂದು ಸೋನುಪ್ ಸಹದೇವನ್ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.