ಈ ಕಾರ್ಡ್ ಇದ್ದರೆ ಸಾಕು, 'ನಿಮ್ಮ ಮನೆ ಮನೆಗೆ ಪ್ರತಿ ತಿಂಗಳು 3000 ಫಿಕ್ಸ್'

 | 
್ಲಡುವ ಕಬ

ಭಾರತ ಸರ್ಕಾರವು ದೇಶದ ಶ್ರಮಿಕ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಲೆಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಈ ಹಿಂದೆ ಕಾರ್ಮಿಕ ಕಾರ್ಡ್ ಜಾರಿಗೊಳಿಸಿದ್ದು, ಇದು ಯಶಸ್ವಿಯಾದ ಬಳಿಕ ಇದೀಗ ಕಾರ್ಮಿಕರಿಗೆ ವಿಶೇಷ ಗುರುತಿನ ಪ್ರಮಾಣಪತ್ರಗಳನ್ನು ನೀಡುವ ಯೋಜನೆಯನ್ನು ಪ್ರಕಟಿಸಿದೆ. ಅದರಲ್ಲೂ ಪ್ರತಿ ತಿಂಗಳು 3000 ನೀಡುವ ಯೊಜನೆ ಇದಾಗಿದೆ.

ಈ ಆನ್ಲೈನ್ ಇ-ಲೇಬರ್ ಪೋರ್ಟಲ್ ಮೂಲಕ, ಕಾರ್ಮಿಕರು ಆನ್ಲೈನ್ ಸೇವೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಆನ್ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸುವ ಹಿಂದಿನ ಆಲೋಚನೆಯು ಲೇಬರ್ ಕಾರ್ಡ್ಗಳನ್ನು ಪಡೆಯಲು ಮತ್ತು ಸಮಯ ತೆಗೆದುಕೊಳ್ಳುವ ಕಾರ್ಯವಿಧಾನಗಳ ಮೂಲಕ ಹೋಗಲು ಹಲವಾರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ತೊಡೆದುಹಾಕುವುದಾಗಿದೆ. ಹಾಗೆಯೇ ಅರ್ಹ ಎಲ್ಲ ಸೌಲಭ್ಯಗಳನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.

ಅಂದಹಾಗೆ ಈ ಮೊದಲು ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ ಈಗ ಯಾವುದೇ ಕಛೇರಿಗೆ ಅಲೆದಾಡದೇ ಇ-ಲೇಬರ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಮಿಕ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಪಾಸ್ಪೋರ್ಟ್ ಫೋಟೊ, ಪಡಿತರ ಚೀಟಿ ಬೇಕಾಗಿರುತ್ತದೆ.

 ನಿರ್ಮಾಣ ವಲಯದ ಕಾರ್ಮಿಕರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ, ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗುತ್ತಿಗೆದಾರರು ಕಾರ್ಮಿಕರನ್ನು ಶೋಷಿಸುವ ಮತ್ತು ನೋಂದಣಿಯಾಗದ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗುರುತಿನ ಪ್ರಮಾಣಪತ್ರಗಳ ಮೂಲಕ ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಈ ಮೂಲಕ ಸಮಗ್ರ ಡೇಟಾವನ್ನು ಸಂಗ್ರಹಿಸುವುದು ಹಾಗೂ ಇಂತಹ ಕಾರ್ಮಿಕರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಒದಗಿಸುವುದು  ಹಾಗೂ ಪ್ರತಿ ತಿಂಗಳ 3000 ಹಣ ನೀಡುವುದು ಸರ್ಕಾರದ ಉದ್ದೇಶವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.