Instagram ನಲ್ಲಿ ಈಕೆಯ request ಬಂದರೆ ತಕ್ಷಣ delete ಮಾಡಿ

 | 
ಗಿ
 ಇತ್ತೀಚಿನ ದಿನಗಳಲ್ಲಿ ಜನರು ಜೀವಕ್ಕಿಂತ ಹಣಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಾರೆ. ಹಾಗಾಗಿ ಜನ ಹಣ ಸಂಪಾದಿಸಲು ಉತ್ತಮ ಮಾರ್ಗಗಳನ್ನು ಬಿಟ್ಟು ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ದರೋಡೆ, ಕಳ್ಳತನ, ಕೊಲೆ, ಸುಲಿಗೆಯಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಹಣವನ್ನು ಗಳಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಜನಸಾಮಾನ್ಯರ ಜೀವನ ಬಲಿಯಾಗುತ್ತಿದೆ. 
ಇತ್ತೀಚೆಗೆ ಜನರು ಹಣ ಸಂಪಾದಿಸಲು ಮತ್ತೊಂದು ಕೆಟ್ಟ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅದೇನೆಂದರೆ ಹನಿ ಟ್ರ್ಯಾಪ್ . ಇದಕ್ಕೆ ಹಣವಿರುವಂತಹ ಶ್ರೀಮಂತ ವ್ಯಕ್ತಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ.
 ಹಣವನ್ನು ವಸೂಲಿ ಮಾಡಲು ಈ ಗ್ಯಾಂಗ್ ಹಣವಿರುವ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳನ್ನು ಕಳುಹಿಸಿ ಅವರ ಜೊತೆ ಸ್ನೇಹ ಬೆಳೆಸಿ ಕೊನೆಗೆ ಆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ ಅದಕ್ಕೆ ಸಂಬಂಧಪಟ್ಟ ವಿಡಿಯೊ, ಪೋಟೊಗಳನ್ನು ತೆಗೆದು ಅದನ್ನು ಆ ವ್ಯಕ್ತಿಗೆ ತೋರಿಸಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಾರೆ. 
ಇಂತಹ ಘಟನೆ ಇತ್ತೀಚಿನ ದಿನಗಳಲ್ಲಿ ಹಲವು ಕಡೆ ನಡೆಯುತ್ತಿದೆ. ಇದೀಗ ಅಂದ್ರ ಪ್ರದೇಶದಲ್ಲಿ ಕೂಡ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಅನಿವಾಸಿ ಭಾರತೀಯ ಯುವಕನನ್ನು ಹನಿಟ್ರ್ಯಾಪ್ ಗ್ಯಾಂಗ್ ಮೋಸಗೊಳಿಸಿ ಅವರಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದೆ. ಮದುವೆಯ ಆಮಿಷ ತೋರಿ ಸಾಕಷ್ಟು ಹಣ ಸುಲಿಗೆ ಮಾಡಿದೆ.
ಹೌದು 27 ವರ್ಷದ ಜಾಯ್ ಜಮೀಮಾ ಇನ್ಸ್ತಾಗ್ರಾಂ ಮೂಲಕ ಎಲ್ಲರನ್ನೂ ಪರಿಚಯಿಸಿಕೊಂಡು ಬಣ್ಣ ಬಣ್ಣದ ಮಾತನಾಡಿ ಅವರನ್ನು ಸೆಳೆದು ಮದುವೆಯ ಆಮಿಷ ತೋರಿ ಅವರನ್ನು ನಂಬಿಸಿ ಹಣವನ್ನು ದೋಚಿತ್ತಿದ್ದಳು. ಈಗಾಗಲೇ ಇವಳ ವಿರುದ್ದ ಹಲವಾರು ಮಂದಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಇನ್ನು ಮುಂದೆ ಆದರೂ ಇನ್ಸ್ಟಾಗ್ರಾಂ ಸುಂದರಿಯರ ಬಗ್ಗೆ ಎಚ್ಚರವಾಗಿರಿ ಎಂದು ಪೋಲಿಸರು ಕೂಡ ಎಚ್ಚರಿಕೆ ನೀಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.