ಕನಸಿನಲ್ಲಿ ಹಾವು ಕಂಡರೆ ನಿಮ್ಮ ಜೀವನದಲ್ಲಿ ಸಿಗುವ ಸುಖ ಯಾವುದು ಗೊ.ತ್ತಾ
ರಾತ್ರಿ ಮಲಗಿದಾಗ ಎಲ್ಲರೂ ಕನಸು ಕಾಣುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಅದು ಸಿಹಿಗನಸೂ ಆಗಿರಬಹುದು, ದುಸ್ವಪ್ನವೂ ಆಗಿರಬಹುದು. ಕೆಲವೊಮ್ಮೆ ಭಯಾನಕ ಕನಸು ನಮ್ಮನ್ನು ಹೆದರಿಸಿ ಎದ್ದು ಕೂರುವಂತೆ ಮಾಡುತ್ತವೆ ಮತ್ತು ಕೆಲವೊಮ್ಮೆ ತಮಾಷೆಯ ಕನಸು ನಮ್ಮನ್ನು ನಗಿಸುತ್ತದೆ. ಕೆಲವೊಮ್ಮೆ ನಿಗೂಢ ಕನಸು ನಮ್ಮನ್ನು ದಿನವಿಡೀ ಯೋಚಿಸುವಂತೆ ಮಾಡುತ್ತದೆ.
ನಮಗೆ ಪೂರ್ತಿ ಕನಸು ನೆನಪಿರುವುದಿಲ್ಲವಾದರೂ ಕನಸಿನಲ್ಲಿ ಕಂಡ ಕೆಲವೊಂದು ನಿರ್ದಿಷ್ಟ ಅಂಶಗಳು ನೆನಪಿರುತ್ತದೆ ಅಲ್ಲವೇ? ಕನಸುಗಳ ಕುರಿತು ಹೆಚ್ಚು ಚಿಂತಿಸಬೇಡಿ. ನೀವು ಕಟ್ಟ ಕನಸು ಅಂದುಕೊಂಡದ್ದು ನಿಮಗೆ ಶುಭವನ್ನೂ ತರಬಹುದು. ಒಳ್ಳೆ ಕನಸು ಅಂದುಕೊಂಡದ್ದು ಅಶುಭವನ್ನೂ ತರಬಹುದು. ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ.
ಹಾಗೆಯೆ ಕನಸಿನಲ್ಲಿ ಹಾವು ಕಂಡರೆ ಅದಕ್ಕೂ ಒಂದು ಅರ್ಥವಿದೆ. ಸಾಮಾನ್ಯವಾಗಿ ಎಲ್ಲರ ಕನಸಿನಲ್ಲಿಯೂ ಹಾವು ಬಂದಿರುತ್ತದೆ. ಆದರೆ ಹಾವು ಎಂಬುದರ ಮೇಲೆ ನಿಮ್ಮ ಕನಸಿನ ಅರ್ಥ ಹೇಳಬಹುದು. ನಿಮ್ಮ ಕನಸಿನಲ್ಲಿ ಹಾವು ನಿಮ್ಮ ಮುಂದೆ ಹೆಡೆ ಎತ್ತಿ ನಿಂತಿರುವುದನ್ನು ನೋಡಿದರೆ ನೀವು ಪ್ರಾಣಾಪಾಯದಿಂದ ಪಾರಾಗಿದ್ದೀರಿ ಎಂದರ್ಥ. ಶೀಘ್ರದಲ್ಲೇ ಗಂಭೀರ ಸಮಸ್ಯೆಯಿಂದ ಮುಕ್ತರಾಗುತ್ತೀರಿ ಎನ್ನುವುದನ್ನು ಅದು ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ಹಾವು ಬಾಯಿ ತೆರೆದಿರುವುದನ್ನು ನೋಡಿದರೆ, ನಿಮಗೆ ಏನಾದರೂ ಕೆಟ್ಟದು ಸಂಭವಿಸಲಿದೆ ಎಂದು ಅರ್ಥ. ಅಂತಹ ಪರಿಸ್ಥಿತಿಯಲ್ಲಿ, ಜಾಗರೂಕರಾಗಿರಬೇಕು. ನೀವು ಒಂದೇ ಬಾರಿಗೆ ಬಹಳಷ್ಟು ಹಾವುಗಳನ್ನು ನೋಡಿದರೆ, ಇದು ಜಾಗರೂಕರಾಗಿರಬೇಕಾದ ಸಮಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ನೀವು ದೊಡ್ಡ ತೊಂದರೆಗೆ ಸಿಲುಕುವ ಸಂಕೇತವಾಗಿದೆ.
ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕೆಟ್ಟ ಸಮಯ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಮತ್ತು ಒಳ್ಳೆಯ ಕಾಲ ಎದುರಿಗಿದೆ ಎನ್ನುವುದನ್ನು ತೋರಿಸುತ್ತದೆ. ಕನಸಿನಲ್ಲಿ ಹಾವನ್ನು ಕೊಲ್ಳುವಂತೆ ಅಥವಾ ಸತ್ತು ಬಿದ್ದಿರುವ ಹಾವು ಕಂಡರೆ ನಿಮ್ಮ ಜೀವನದಲ್ಲಿ ಎದುರಾಗಿದ್ದ ಅಪಾಯವು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.