ಅಟೆಂಡೆನ್ಸ್ ಬೇಕೆಂದರೆ ಮುತ್ತು ಕೊಡು ಎನ್ನುತ್ತಿರುವ ಶಿ ಕ್ಷಕ; ವಿದ್ಯಾರ್ಥಿನಿಯರು ಕಂಗಾ ಲು

 | 
Yy

ಶಿಕ್ಷಕರಾದವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಬ್ದಾರಿ ಶಿಕ್ಷಕರದ್ದು. ಆದರೆ ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕತ್ಯವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್‌ ಒಬ್ಬರ ಜೊತೆ ಫ್ಲರ್ಟ್‌ ಮಾಡಿದ್ದಾರೆ. 

ಹೌದು ಹಾಜರಾತಿ ಕೊಡಿ ಎಂದು ಕೇಳಲು ಬಂದ ಶಿಕ್ಷಕಿಯ ಜೊತೆಗೆ ಮಾತನಾಡುತ್ತಾ, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಯ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.ಕೆಲ ದಿನಗಳ ಹಿಂದೆ ಶಾಲಾ ಕೊಠಡಿಯಲ್ಲಿಯೇ ಲೇಡಿ ಟೀಚರ್‌ ಜೊತೆ ಶಾಲೆಯ ಪ್ರಿನ್ಸಿಪಾಲ್‌ ರೊಮ್ಯಾನ್ಸ್‌ ಮಾಡಿದಂತಹ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. 

ಇದೀಗ ಅಂತಹದ್ದೇ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಹಾಜರಾತಿಗೆ ಬದಲಾಗಿ ಲಜ್ಜೆಗೆಟ್ಟ ಪ್ರಿನ್ಸಿಪಾಲ್‌ ಲೇಡಿ ಟೀಚರ್‌ ಒಬ್ಬರಿಂದ ಮುತ್ತನ್ನು ಕೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಹ ಶಿಕ್ಷಕಿಯಿಂದ ಮುತ್ತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಹೌದು ಅಟೆಂಡೆನ್ಸ್‌ಗೆ ಪ್ರತಿಯಾಗಿ ಪ್ರಿನ್ಸಿಪಾಲ್‌ ಮಹಿಳಾ ಶಿಕ್ಷಕಿಯಿಂದ ಕೆನ್ನೆಗೊಂದು ಮುತ್ತು ಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ಕೆಲಸವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಿಐಒಎಸ್‌ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.