ಮದುವೆ ಆಗೋಕೆ ತುಂಬಾ ಭಯ; ಕೊನೆಗೂ ಮದುವೆ ಆಗಲ್ಲ ಎಂದ ಅನುಶ್ರೀ

 | 
Jd

ನಟಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಮಾತಿಗೂ ಸೈ, ಡ್ಯಾನ್ಸ್ ಅಭಿನಾಯಕ್ಕೂ ಜೈ ಕನ್ನಡದ ಉತ್ತಮ ಆಂಕರ್ ಯಾರು ಎಂದು ಕೇಳಿದ್ರೆ ಮೊದಲು ನೆನಪಾಗುವುದೇ ಇವರು.ಅನುಶ್ರೀ ಅವರಿಗೆ  ಜನವರಿ 25 ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಕಳೆದ ಜನವರಿಯಲ್ಲಿ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. 

ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ. ಇದೀಗ ಸಂದರ್ಶನವೊಂದರಲ್ಲಿ ಮದುವೆಯ ಕುರಿತು ಅವರು ಓಪನ್​ ಆಗಿ ಮಾತನಾಡಿದ್ದಾರೆ. ನಿಮಗೆ ಹೇಳಿದ್ರೆ ವಿಚಿತ್ರ ಎನಿಸಬಹುದು. ಆದರೆ ನಿಜವಾಗಿಯೂ ನನಗೆ ಮದುವೆಯಾಗೋಕೆ ಇಷ್ಟವಿಲ್ಲ. 

ಹೌದು. ನಿಜವನ್ನೇ ಹೇಳುತ್ತೇನೆ. ನಾನು ಮದುವೆ ಮಟೀರಿಯಲ್​ ಗರ್ಲ್​ ಅಲ್ಲವೇ ಅಲ್ಲ. ಇದನ್ನು ನನಗೆ ಇದನ್ನು ಜ್ಞಾನೋದಯ ಮಾಡಿಸಿದ್ದ ಅರುಣ್​ ಸಾಗರ್​ ಅವರು. ಅದು ಯಾಕೆ ಅಂತ ಹೇಳ್ತೀನಿ ಕೇಳಿ. ಒಮ್ಮೆ ನನ್ನ ಹುಟ್ಟುಹಬ್ಬಕ್ಕೆ ವಿಷ್​ ಮಾಡಲು ಕಾಲ್​ ಮಾಡಿದ್ರು.  ಆಗ ಅವರು ಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ. ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋ ಅಂತೆಲ್ಲಾ ಹೇಳಿ ಆಮೇಲೆ ಒಂದು ಲೈನ್​ ಸೇರಿಸಿದ್ರು. ಅದೇ ನನಗೆ ಜ್ಞಾನೋದಯ ಮಾಡಿಸಿತು. ಕೊನೆಯಲ್ಲಿ ಅವರು ಇಷ್ಟವಿದ್ದರೆ ಮಾತ್ರ ಎಂದರು ಎಂದು ಅಂದಿನ ದಿನ ನೆನಪಿಸಿಕೊಂಡರು ಅನುಶ್ರೀ.

ಅವರ ಆ ಕೊನೆಯ ಪಂಚಿಂಗ್​ ಡೈಲಾಗ್​ ಕೇಳಿ ನನಗೆ  ಜ್ಞಾನೋದಯ ಆಯಿತು. ಅವರು ಏನು ಹೇಳಿದ್ರು ಅಂದ್ರೆ ನೀನು ಎಲ್ಲರ ಹಾಗಲ್ಲ, ಸ್ವಲ್ಪ ನನ್ನ ಹಾಗೆ. ಆದರೆ  ಎಲ್ಲಾ ಕಡೆ ಇರ್ತಿಯಾ. ನಿನ್ನಂಥ ಹುಡುಗಿಗೆ ಮದುವೆಯಾಗಲು  ಗಂಡು, ಗಂಡ ಅಥವಾ ಬಾಯ್​ಫ್ರೆಂಡ್​ ಆಗಿಬರಲ್ಲ. ಆತ ಒಬ್ಬ  ಗೆಳೆಯನಾಗಿರಬೇಕು ಎಂದರು. ಆಗ ನನಗೆ  ನನ್ನ ತಲೆಯ ಹಿಂದೆ ಸನ್​ಲೈಟ್​ ಓಪನ್​ ಆದ ಹಾಗಾಯ್ತು. ಜೀವನದಲ್ಲಿ ಮದುವೆಯಾಗಬೇಕೆಂದರೆ ಒಳ್ಳೆಯ ಗೆಳೆಯ ಸಿಗಬೇಕು. ಈಗ ಅಂಥವರು ಎಲ್ಲಿ ಇರುತ್ತಾರೆ ಎನ್ನುತ್ತಲೇ ವಿಡಿಯೋ ಕಟ್​ ಮಾಡಿದ್ದಾರೆ ಅನುಶ್ರೀಯವರು. ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.