ನಾನಿನ್ನು ಬ ದುಕಲ್ಲ; ಇದು ನನ್ನ ಕೊನೆಯ ಮಾತು ‌ಎಂದ ಅಪರ್ಣಾ

 | 
He

ಕಿರುಚೋದಿಲ್ಲ, ಏರುಧ್ವನಿಯಂತೂ ಅಲ್ಲವೇ ಅಲ್ಲ. ನಿರೂಪಣೆಗೆ ಹೇಳಿ ಮಾಡಿಸಿದಂತ ಧ್ವನಿ. 20 ದಶಕಕ್ಕೂ ಹೆಚ್ಚು ಕಾಲ ನಿರೂಪಣೆಯ ಲೋಕದಲ್ಲಿ ರಾಣಿಯಾಗಿ ಮೆರೆದಿದ್ದ ಕಂಠ. ಸಾವಿರಾರು ಕಾರ್ಯಕ್ರಮಗಳಲ್ಲಿ ಮಾರ್ದನಿಸಿದ್ದ ಈ ಧ್ವನಿ ಪ್ರತಿದಿನ ಮೆಟ್ರೋದಲ್ಲೂ ರಿಂಗಣಿಸುತ್ತಿದೆ. ಪ್ರಯಾಣಿಕರಿಗೆ ಅವರವರ ನಿಲ್ದಾಣದಲ್ಲಿ ಇಳಿಸುತ್ತಿದ್ದ ಕಂಠಕ್ಕೆ ಇವತ್ತು ಬದುಕಿನ ಪ್ರಯಾಣ ಮುಗಿದಿದ್ದು, ಕೊನೆ ನಿಲ್ದಾಣದಲ್ಲಿ ತಾನೇ ಇಳಿದು ಬಿಟ್ಟಿದೆ.

ಹೌದು.. ಪ್ರಯಾಣಿಕರೇ ಗಮನಿಸಿ.. ಮುಂದಿನ ನಿಲ್ದಾಣ.. ಬಾಗಿಲು ಎಡಕ್ಕೆ ತೆರೆಯಲಿದೆ. ಹೀಗೊಂದು ಅಶರೀರವಾಣೆ ಮೆಟ್ರೋ ಪ್ರಯಾಣಿಕರಿಗೆ ದಾರಿ ತೋರಿಸುತ್ತಿತ್ತು. ಅಪ್ಪಟ ಕನ್ನಡತಿ, ಕಂಚಿನ ಕಂಠದ ನಿರೂಪಕಿ. ಸ್ಪಷ್ಟ ಮತ್ತು ಸ್ವಚ್ಛ ಕನ್ನಡ.. ಹಿತವಾದ ಕಂಠ.. ಸೊಗಸಾದ ಉಚ್ಛಾರ. ಈ ಧ್ವನಿ ಕೇಳಿದ ಪ್ರಯಾಣಿಕರು ನಿಜಕ್ಕೂ ಇವತ್ತು ಕೊರಗುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪರ್ಣಾ ಅವರ ಧ್ವನಿ ಇರುವ ವಿಡಿಯೋಗಳನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ಸಾವಿರಾರು ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದ ಅಪರ್ಣಾ ಅವರು ನಮ್ಮ ಮೆಟ್ರೋಗೂ ಧ್ವನಿಯಾಗಿದ್ದಾರೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ನಿಲ್ದಾಣಗಳ ಮಾಹಿತಿ ನೀಡುತ್ತಾ ದಾರಿ ತೋರಿಸುತ್ತಿದ್ದಾರೆ. ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ ಅಗಲಿಕೆಗೆ ನಮ್ಮ ಮೆಟ್ರೋ ಕೂಡ ಸಂತಾಪ ಸೂಚಿಸಿದೆ. 

ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಎಂದಿಗೂ ಜೀವಂತವಾಗಿರಲಿದೆ. ಅವರಿಗೆ ದೇವರ ವರದಾನದ ಧ್ವನಿ ಇತ್ತು. ನಮ್ಮ ಮೆಟ್ರೋ ಹಾಗೂ ತಮ್ಮ ಮಾಸದ ದನಿಗೂ ಇರುವ ನಂಟು ಎಂದಿಗೂ ಕಳಚದು ಎಂದು ಮೆಟ್ರೋ ತನ್ನ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದೆ. ಮತ್ತೊಂದೆಡೆ ಹೊಸದಾಗಿ ಸೇರ್ಪಡೆಯಾಗುವ ಮೆಟ್ರೋ ಲೈನ್‌ಗಳಲ್ಲಿ ಅಪರ್ಣಾ ಧ್ವನಿ ಬೇಕು AI ಬಳಸಿ ಅಪರ್ಣಾ ಧ್ವನಿ ಇರುವ ಹಾಗೆ ಮಾಡಿ ಎಂದು ಪ್ರಯಾಣಿಕರು ಬಿಎಂಆರ್​ಸಿಎಲ್​ಗೆ ಮನವಿ ಮಾಡಿದ್ದಾರೆ.

ಇನ್ನು ಕೊನೆಯದಾಗಿ ಅವರು ಭೇಟಿ ನೀಡಿದ್ದ ಚಿಕ್ಕಮಗಳೂರು ಅರೋಗ್ಯ ಧಾಮ ಅಂದರೆ ಹೊಮ್ ಸ್ಟೆ ಗೆ ಕೂಡ ಅವರು ತಮ್ಮದೇ ದ್ವನಿಯಲ್ಲಿ ಮಾತನಾಡಿದ್ದರು. ಸದ್ದು ಗದ್ದಲದಿಂದ ಮುಕ್ತಿ ಹೊಂದಲು ಇದೊಂದು ಅತ್ಯುತ್ತಮ ಜಾಗ ಎಂದು ಕೂಡ ಹೇಳಿದ್ದರು. ಅದೆಲ್ಲಾ ಈಗ ವೈರಲ್ ಆಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.