ನಾನು ನಿನ್ನ ದೊಡ್ಡಪ್ಪನ ಮಗ ಕಣೋ, ಧ್ರುವ ಮಗ ಜೊತೆ ರಾಯನ್ ತುಂಟಾಟ

 | 
ಗಾ
 ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ಜುನ್‌ 7, 2020ರಲ್ಲಿ ಅಗಲಿದರು. ಪರ್ಫೆಕ್ಟ್‌, ಫಿಟ್ ಆಂಡ್ ಫೈನ್ ಆಗಿದ್ದ ನಟ ಇದ್ದಕ್ಕಿದ್ದಂತೆ ಇನ್ನಿಲ್ಲ ಅನ್ನೋ ವಿಚಾರ ಕೇಳಿ ಇಡೀ ಚಿತ್ರರಂಗವೇ ಶಾಕ್ ಆಗಿಬಿಟ್ಟಿತ್ತು. ಎಲ್ಲಿ ನೋಡಿದರೂ ಚಿರು ಫೋಟೋ, ವಿಡಿಯೋ ಹಾಗೂ ಬ್ಯಾನರ್‌ಗಳು ಅಷ್ಟೇ ಅಲ್ಲ... ಸೋಷಿಯಲ್ ಮೀಡಿಯಾದಲ್ಲಿ #ಚಿರಂಜೀವಿಸರ್ಜಾ ಟ್ರೆಂಡಿಂಗ್‌ನಲ್ಲಿ ಇತ್ತು. 
ಅಷ್ಟರ ಮಟ್ಟಕ್ಕೆ ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ. ಈಗಾಗಲೇ ಚಿರು ಅಗಲಿ 4 ವರ್ಷ ಕಳೆದಿದೆ. ಆದರೆ ತಮ್ಮ ಧ್ರುವ ಸರ್ಜಾ ಅವರಿಗಾಗಲಿ ಮನೆಯವರಿಗಾಗಲಿ ಒಂದಿಷ್ಟು ಪ್ರೀತಿ ಕಡಿಮೆ ಆಗಿಲ್ಲ. ಹೌದು ಕೆಲ ದಿನಗಳ ಹಿಂದಷ್ಟೇ ಧ್ರುವ ಸರ್ಜಾ ಅಣ್ಣನ ಸಮಾಧಿಯ ಮೇಲೆ ಮಲಗಿ ಎಲ್ಲರ ಗಮನ ಸೆಳೆದಿದ್ದರು.
ತದನಂತರದಲ್ಲಿ ಹೆಂಡತಿ ಪ್ರೇರಣಾ ಅವರ ಸೀಮಂತವನ್ನು ಕೂಡ ಅಲ್ಲಿಯೇ ಮಾಡಿದ್ರು. ಈದೀಗ ಪುಟ್ಟ ಮಗುವನ್ನು ಕೂಡ ಆಶೀರ್ವಾದಕ್ಕೆಂದು ಅಲ್ಲಿಗೆ ಕರೆತಂದಿದ್ದಾರೆ. ಅದೇ ದಿನ ಮೇಘನಾ ರಾಜ್ ಕುಟುಂಬ ಕೂಡ ಅಲ್ಲಿಗೆ ಬಂದಿತ್ತು. ಹಾಯಗ್ರೀವನನ್ನು ಪುಟ್ಟ ರಾಯನ್ ನಾನು ನಿನ್ನ ಅಣ್ಣ ಎಂದೆಲ್ಲ ಮಾತನಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಆ ವಿಡಿಯೊ ಈಎಲ್ಲೆಡೆ ವೈರಲ್ ಆಗ್ತಿದೆ.
ರಾಯನ್ ಮುಗ್ಧ ಮನಸ್ಸು ಹಾಗೂ ತುಂಟಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಷ್ಟೇ ಮಾತನಾಡಲು ಶುರು ಮಾಡಿರುವ ರಾಯನ್ ಮುದ್ದು ಮುದ್ದಾಗಿ ಮಾತನಾಡುತ್ತಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ ಅದೇ ಸಮಯಕ್ಕೆ ತಂದೆ ಇಲ್ಲದೆ ಬೆಳೆಯುತ್ತಿದ್ದಾನೆ ಅನ್ನೋ ಸಂಕಟವಿದೆ. ತಂದೆ ಹಾಗೂ ತಾಯಿ ಡಬಲ್ ರೂಪ್ ಪ್ಲೇ ಮಾಡುತ್ತಿದ್ದಾರೆ ಮೇಘನಾ ರಾಜ್. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.