'ಮು.ಸ್ಲಿಮರ ತಲಾಖ್ ನಿಂದ ಮನನೊಂದ ಯುವತಿ' ಹಿಂದೂ ಯುವಕರ ಕೈಹಿಡಿಯಲು ಮುಂದಾದ ಘಟನೆಯೊಂದು ಬೆಳಕಿಗೆ

 | 
H

ಪ್ರೇಮಿಗಳ ದಿನದಂದು ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದ ಎರಡು ಮದುವೆಗಳು ಇಡೀ ನಗರದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.ಇಬ್ಬರೂ ಮುಸ್ಲಿಂ ಮಹಿಳೆಯರ ಗಂಡಂದಿರು ಅವರಿಗೆ ವಿಚ್ಛೇದನ ನೀಡಿದರು. ಈ ವಿಚಾರವಾಗಿ ಮನನೊಂದ ಮಹಿಳೆಯರು ಹಿಂದು ಯುವಕರ ಜತೆ ಪ್ರೇಮ ಸಂಬಂಧ ಶುರುವಾಗಿದೆ. ಪ್ರೀತಿ ಎಷ್ಟರ ಮಟ್ಟಿಗೆ ಅರಳಿತೆಂದರೆ ಮುಸ್ಲಿಂ ಯುವತಿಯರಿಬ್ಬರೂ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತಮ್ಮ ತಮ್ಮ ಪ್ರೇಮಿಗಳನ್ನು ಮದುವೆಯಾದರು.ಬುಲಂದ್‌ಶಹರ್ ನಿವಾಸಿ ಶಹಾನಾ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಳು. 

ಗಂಡ ಪ್ರತಿನಿತ್ಯ ಹಿಂಸೆ ನೀಡುತ್ತಿದ್ದನು. ಈ ವಿಚಾಹರಾವಗಿ ಶಹಾನಾ ಮನನೊಂದಿದ್ದಳು. ಇದೇ ವೇಳೆ ಬರೇಲಿ ನಿವಾಸಿ ಓಂಪ್ರಕಾಶ್ ಪರಿಚಯವಾಗಿದೆ. ಇಬ್ಬರ ಸ್ನೇಹ ಬೆಳೆಯಿತು ಮತ್ತು ಅವರು ಪ್ರೀತಿಸುತ್ತಿದ್ದರು. ಶಹಾನಾ ಮತ್ತು ಓಂಪ್ರಕಾಶ್ ನಂತರ ಇಜ್ಜತ್ ನಗರ ಪ್ರದೇಶದ ಭೀತಾನಾಥ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಶಹಾನಾ ಮಾತನಾಡಿ. ನಾನು ಧರ್ಮವನ್ನೂ ಬದಲಾಯಿಸಿದ್ದೇನೆ. ನನ್ನ ಹೆಸರು ಈಗ ಶಾರದಾ. ಶಾರದಾ ಓಂಪ್ರಕಾಶ್ ಅವರನ್ನು ಮದುವೆಯಾಗಲು ತುಂಬಾ ಸಂತೋಷವಾಗಿದೆ. 

ತ್ರಿವಳಿ ತಲಾಖ್ ನಿಂದ ನನಗೆ ತೊಂದರೆಯಾಗಿದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. ಬಿಹಾರದ ಪೂರ್ಣಿಯ ನಿವಾಸಿ ನಸೀಮಾ ಎರಡು ವರ್ಷಗಳ ಹಿಂದೆ ಆಗ್ರಾದ ಯುವಕನನ್ನು ಮದುವೆಯಾಗಿದ್ದಳು. ಮದುವೆಯಾದ ನಂತರ ಪತಿ ಕಿರುಕುಳ ನೀಡಲಾರಂಭಿಸಿದ. ಆಗ ಇಬ್ಬರಿಗೂ ಈಗ ಒಂದೂವರೆ ವರ್ಷದ ಮಗಳಿದ್ದಳು. ಆದರೆ ಅಷ್ಟರಲ್ಲಿ ಪತಿ 6 ತಿಂಗಳ ಹಿಂದೆ ನಸೀಮಾಗೆ ತ್ರಿವಳಿ ತಲಾಖ್ ನೀಡಿದ್ದಾನೆ. ನಸೀಮಾ ತನ್ನ ತಾಯಿಯ ಮನೆಗೆ ಅಂದರೆ ಪೂರ್ಣಿಯಾಗೆ ಬಂದು ವಾಸಿಸಲು ಪ್ರಾರಂಭಿಸಿದಳು. 

ಇನ್​ಸ್ಟಾಗ್ರಾಮ್​ ಮೂಲಕವಾಗಿ ಮನೋಜ್ ಶರ್ಮಾ ಎಂಬ ಯುವಕನೊಂದಿಗಿನ ಪರಿಚಯ ಸಂಬಂಧವಾಗಿ ಪ್ರಾರಂಭವಾಯಿತು. ನಂತರ ಅವರು ಮದುವೆಯಾಗಲು ನಿರ್ಧರಿಸಿದರು. ನಸೀಮಾ ಮೊದಲು ಮುಸ್ಲಿಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದರು. ನಸೀಮಾ ಮೀನಾಕ್ಷಿಯಾದರು ಮತ್ತು ಇಬ್ಬರೂ ಫೆಬ್ರವರಿ 15 ರಂದು ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ಮತ್ತೆ ವಿವಾಹವಾದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.