ಅಗ್ನಿಸಾಕ್ಷಿಯಲ್ಲಿ ಕೊನೆಗೆ ಡೈರೆಕ್ಟರ್ ನನ್ನನ್ನು ಕೈಬಿಟ್ಟರು; ಇವರಿಗೆಲ್ಲ ನನ್ನಿಂದ ಏನು ಬೇಕಿ ತ್ತು

 | 
Uu

ನಟನೆಗಿಂತ ವಿವಾದಗಳಿಂದಲೇ ಹೆಸರುವಾಸಿಯಾಗಿರುವ ನಟಿ ಎಂದರೆ ಅದು ಚಿತ್ರಾಲ್ ರಂಗಸ್ವಾಮಿ. ಜನಪ್ರಿಯ ಧಾರವಾಹಿಯಾಗಿದ್ದ ರಾಧಾ ಕಲ್ಯಾಣ ದಲ್ಲಿ ಮನೋಜ್ಞವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ತದ ನಂತರದಲ್ಲಿ ಬಂದ ಯಾವೊಂದು ಧಾರವಾಹಿ ಸಹ ಅವರಿಗೆ ಉತ್ತಮ ಹೆಸರನ್ನು ತಂದುಕೊಡಲೇ ಇಲ್ಲ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಈ ಬಾರಿಯ ಆಯ್ಕೆ ಪ್ರಕ್ರಿಯೆಯೂ ಕೊಂಚ ವಿಭಿನ್ನವಾಗಿತ್ತು. ಒಂದಷ್ಟು ಮಂದಿ ನೇರವಾಗಿ ಆಯ್ಕೆಯಾದರೆ, ಇನ್ನು ಕೆಲವರು ವೋಟಿಂಗ್‌ ಮೂಲಕ ಬಿಗ್‌ ಬಾಸ್‌ ಪ್ರವೇಶಿಸಬೇಕಾಯ್ತು. ಆ ಪೈಕಿ ಕೊನೇ ಕ್ಷಣದಲ್ಲಿ ವೋಟಿಂಗ್‌ನಲ್ಲಿ ಹೆಚ್ಚು ಅಂಕ ಪಡೆಯದ ನಟಿ, ಬಾಡಿ ಬಿಲ್ಡರ್‌ ಚಿತ್ರಾಲ್‌ ರಂಗಸ್ವಾಮಿ ಹಿಂದೆ ಸರಿದಿದ್ದರು. ಇದೀಗ ಆವತ್ತಿನ ಕ್ಷಣವನ್ನು, ಆ ಬೇಸರವನ್ನು ಮತ್ತೆ ತೋಡಿಕೊಂಡಿದ್ದಾರೆ. 

ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ಚಿತ್ರಾಲ್‌, ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ನಾನೂ ಸುದೀಪ್‌ ಅವರ ಅಭಿಮಾನಿ, ಆದರೆ ಆ ವೇದಿಕೆ ಮೇಲೆ ನಾನು ರಿಜೆಕ್ಟ್‌ ಆಗಲು ಕಾರಣ ಏನು ಅಂತ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಷ್ಟು ದೊಡ್ಡ ಹೀರೋ ಆಗಿ, ಅವರಿಂದ ಒಂದೇ ಒಂದು ಮಾತೂ ನನ್ನ ರಿಜೆಕ್ಷನ್‌ಗೆ ಅವರ ಬಾಯಿಂದ ಮಾತು ಬರಲಿಲ್ಲ.

ಇನ್ನು ಅತಿ ಹೆಚ್ಚು ಫೇಮಸ್ ಆಗಿದ್ದ ಅಗ್ನಿಸಾಕ್ಷಿ ಧಾರಾವಾಹಿ ತಂಡದಿಂದ ಕೂಡಾ ಇವರಿಗೆ ಮೋಸವಾಗಿತ್ತು. ರಾಜೇಶ್ವರಿ ಚಂದ್ರಿಕಾ ಪಾತ್ರದಿಂದ ಹೊರ ನಡೆದ ನಂತರ ಆ ಪಾತ್ರಕ್ಕೆ ಬೇರೆಯೊಬ್ಬರ ಕರೆತರಬೇಕಾದಾಗ ತಂಡ ಮೊದಲು ಕೇಳಿದ್ದೇ ಚಿತ್ರಲ್ ಅವರಿಗೆ. ಹಾಗಾಗಿ ಚಿತ್ರಾಲ್ ಬಂದು ಆಡಿಷೆನ್ ಮುಗಿಸಿ ಹೋದಾಗ ಕಾಲ್ ಮಾಡುತ್ತೇವೆ ಎಂದಿದ್ದರು. 

ನಂತರದಲ್ಲಿ ಫೋನ್ ಮಾಡಿದ್ದರು ಆದರೆ ನಾನು ಬರುತ್ತೇನೆ ಎಂದಮೇಲೆ ಪ್ರಿಯಾಂಕಾ ಹಾಕಿಕೊಂಡರು ಅಲ್ಲಿಂದಾಚೆಗೆ ಅವಳು ಆ ಪಾತ್ರದಿಂದ ಸಿಕ್ಕಾಪಟ್ಟೆ ಫೇಮಸ್ ಕೂಡಾ ಆದಳು ಎಂದು ಅಗ್ನಿಸಾಕ್ಷಿ ಧಾರಾವಾಹಿಯ ತಂಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.